Asianet Suvarna News Asianet Suvarna News

T20 World Cup 2024: ಆಸೀಸ್ ಬಗ್ಗುಬಡಿದ ಟೀಂ ಇಂಡಿಯಾ ಸೆಮಿಫೈನಲ್‌ಗೆ ಲಗ್ಗೆ

ಭಾರೀ ನಿರೀಕ್ಷೆ ಮೂಡಿಸಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಭಾರತಕ್ಕೆ ರೋಹಿತ್‌ ಶರ್ಮಾ ಅವರ ವಿಸ್ಫೋಟಕ ಬ್ಯಾಟಿಂಗ್ ಆಸರೆಯಾಯಿತು. ಕೊಹ್ಲಿ ಸೊನ್ನೆಗೆ ಔಟಾದರೂ, ಆರ್ಭಟ ನಿಲ್ಲಿಸದ ರೋಹಿತ್ ತಂಡ 20 ಓವರ್ ಗಳಲ್ಲಿ 5 ವಿಕೆಟ್‌ಗೆ 205 ರನ್‌ಗಳ ದೊಡ್ಡ ಮೊತ್ತ ಕಲೆಹಾಕಲು ನೆರವಾದರು.

T20 World Cup 2024 Super Eight India Qualify For Semi Finals With 24 Run Win kvn
Author
First Published Jun 25, 2024, 6:30 AM IST | Last Updated Jun 25, 2024, 6:30 AM IST

ಗ್ರಾಸ್ ಐಲೆಟ್ (ಸೇಂಟ್ ಲೂಶಿಯಾ): 10 ವರ್ಷ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನಸಿನೊಂದಿಗೆ 2024ರ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ, ಸೆಮಿಫೈನಲ್ ಪ್ರವೇಶಿಸಿದ್ದು ಟ್ರೋಫಿ ಗೆಲುವಿಗೆ ಇನ್ನೆರಡೇ ಹೆಜ್ಜೆ ಬಾಕಿ ಇದೆ. ಸೋಮವಾರ ನಡೆದ ಸೂಪರ್ -8 ಹಂತದ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವನ್ನು 24 ರನ್‌ಗಳಿಂದ ಬಗ್ಗುಬಡಿದ ಭಾರತ, ಗುಂಪು-1ರಲ್ಲಿ ಮೊದಲ ಸ್ಥಾನ ಖಚಿತಪಡಿಸಿಕೊಂಡು ಸೆಮೀಸ್‌ಗೆ ಲಗ್ಗೆಯಿಟ್ಟಿತು. ಗುರುವಾರ ಗಯಾನದಲ್ಲಿ ನಡೆಯಲಿರುವ ಸೆಮೀಸ್‌ನಲ್ಲಿ ಭಾರತಕ್ಕೆ ಇಂಗ್ಲೆಂಡ್‌ನ ಸವಾಲು ಎದುರಾಗಲಿದೆ. ಟೂರ್ನಿಯಲ್ಲಿ ಆಸೀಸ್‌ನ ಭವಿಷ್ಯ, ಅಫ್ಘಾನಿಸ್ತಾನದ ಕೈಯಲ್ಲಿದ್ದು, ಮಂಗಳವಾರ ಬಾಂಗ್ಲಾದೇಶ ವಿರುದ್ಧ ಆಫ್ಘನ್ ಗೆದ್ದರೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬೀಳಲಿದೆ. 

ರನ್ ಹೊಳೆ: ಭಾರೀ ನಿರೀಕ್ಷೆ ಮೂಡಿಸಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಭಾರತಕ್ಕೆ ರೋಹಿತ್‌ ಶರ್ಮಾ ಅವರ ವಿಸ್ಫೋಟಕ ಬ್ಯಾಟಿಂಗ್ ಆಸರೆಯಾಯಿತು. ಕೊಹ್ಲಿ ಸೊನ್ನೆಗೆ ಔಟಾದರೂ, ಆರ್ಭಟ ನಿಲ್ಲಿಸದ ರೋಹಿತ್ ತಂಡ 20 ಓವರ್ ಗಳಲ್ಲಿ 5 ವಿಕೆಟ್‌ಗೆ 205 ರನ್‌ಗಳ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ನೆಟ್ ರನ್‌ರೇಟ್‌ನಲ್ಲಿ ಭಾರತವನ್ನು ಹಿಂದಿಕ್ಕಬೇಕಿದ್ದರೆ ಆಸ್ಟ್ರೇಲಿಯಾ 206 ರನ್ ಗುರಿಯನ್ನು 15.3 ಓವರ್‌ನೊಳಗೆ ಬೆನ್ನತ್ತ ಬೇಕಿತ್ತು. ಒಂದು ವೇಳೆ 149 ರನ್‌ಗಿಂತ ಕಡಿಮೆ ಮೊತ್ತ ದಾಖಲಿಸಿದ್ದರೆ, ಆಸೀಸ್ ಹೊರಬೀಳುತ್ತಿತ್ತು. ಇನ್ನು ಆಫ್ಘನ್‌ಗೆ ಬಾಂಗ್ಲಾ ವಿರುದ್ಧದ ಪಂದ್ಯವನ್ನು ಭಾರತ ಮಾಡು ಇಲ್ಲವೇ ಮಡಿ ಪಂದ್ಯವಾಗಿಸಲು ಆಸೀಸ್ ಕನಿಷ್ಠ 176 ರನ್ ಗಳಿಸಲೇಬೇಕಿತ್ತು. ತಂಡ ಆ ಗುರಿ ತಲುಪಿತು. 

T20 World Cup 2024: ಅಸೀಸ್ ಎದುರು ಘರ್ಜಿಸಿದ ರೋಹಿತ್ ಶರ್ಮಾ, ಆಸೀಸ್ ಗೆ ಕಠಿಣ ಗುರಿ ನೀಡಿದ ಟೀಂ ಇಂಡಿಯಾ

ಟ್ರ್ಯಾವಿಸ ಹೆಡ್ ಎಸೆತದಲ್ಲಿ 43 ಎಸೆತಗಳಲ್ಲಿ 76 ರನ್ ಬಾರಿಸಿ ಮತ್ತೊಮ್ಮೆ ಭಾರತೀಯರನ್ನು ಕಾಡಿದರೂ, ನಿರ್ಣಾಯಕ ಹಂತಗಳಲ್ಲಿ ವಿಕೆಟ್ ಉರುಳಿಸಿದ ಭಾರತ, ಕಾಂಗರೂಗಳನ್ನು ಗೆಲುವಿನಿಂದ ದೂರವಿರಿಸಿತು. ಆಕರ್ಷಕ ಫೀಲ್ಡಿಂಗ್ ತಂಡಕ್ಕೆ ನೆರವಾಯಿತು. ಆಸೀಸ್ 20 ಓವರಲ್ಲಿ 7 ವಿಕೆಟ್‌ಗೆ 181 ರನ್ ಕಲೆಹಾಕಿ ಸೋಲೊಪ್ಪಿಕೊಂಡಿತು.

ರೋ'ಹಿಟ್' ರೋಷಾವೇಶ!: 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಬೇಕು ಎನ್ನುವ ರೀತಿಯಲ್ಲಿ ರೋಹಿತ್ ಬ್ಯಾಟ್ ಬೀಸಿದರು. 19 ಎಸೆತಗಳಲ್ಲಿ ರೋಹಿತ್ 50 ರನ್ ಪೂರೈಸಿದಾಗ, ತಂಡದ ಮೊತ್ತ 52 ರನ್ ಆಗಿತ್ತು. ಪವರ್-ಪ್ಲೇನಲ್ಲಿ 1 ವಿಕೆಟ್‌ಗೆ 60 ರನ್ ಸಿಡಿಸಿದ ಭಾರತ, 8.4 ಓವರಲ್ಲಿ 100 ರನ್ ಪೂರೈಸಿತು. ಮೊದಲ 10 ಓವರಲ್ಲಿ 2 ವಿಕೆಟ್‌ಗೆ 114 ರನ್ ಗಳಿಸಿದ ಭಾರತ, ಕೊನೆಯ 10 ಓವರಲ್ಲಿ 91 ರನ್ ಕಲೆಹಾಕಿತು. ರೋಹಿತ್ ಶರ್ಮಾ 41 ಎಸೆತಗಳನ್ನು ಎದುರಿಸಿ 7 ಬೌಂಡರಿ, 8 ಸಿಕ್ಸರ್‌ ಳೊಂದಿಗೆ 92 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. ಸೂರ್ಯ, ದುಬೆ, ಹಾರ್ದಿಕ್‌ರಿಂದ ಉತ್ತಮ ಕೊಡುಗೆ ಮೂಡಿಬಂತು.
 

Latest Videos
Follow Us:
Download App:
  • android
  • ios