T20 World Cup 2024: ಇಂಗ್ಲೆಂಡ್-ಸ್ಕಾಟ್ಲೆಂಡ್ ಪಂದ್ಯ ಮಳೆಗೆ ಆಹುತಿ..!

ಟಾಸ್ ಗೆದ್ದ ಸ್ಕಾಟ್ಲಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ, ಆರಂಭದಲ್ಲೇ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯ ಸುಮಾರು 45 ನಿಮಿಷ ತಡವಾಗಿ ಶುರುವಾಯಿತು. ಸ್ಕಾಟ್ಲಂಡ್ ಇನ್ನಿಂಗ್ಸ್‌ನ 7ನೇ ಓವರ್‌ ವೇಳೆ ಮತ್ತೆ ಸುರಿಯಲು ಆರಂಭಿಸಿದ ಮಳೆ ಪಂದ್ಯವನ್ನು ಮತ್ತೆ 2 ಗಂಟೆಗಳ ಕಾಲ ಸ್ಥಗಿತಗೊಳಿಸಿತು. ಬಳಿಕ ಪಂದ್ಯವನ್ನು ತಲಾ 10 ಓವರ್‌ಗೆ ಇಳಿಸಿ ಪಂದ್ಯ ಪುನರಾರಂಭಿಸಲಾಯಿತು.

T20 World Cup 2024 Scotland vs England Game Abandoned Due To Rain kvn

ಬ್ರಿಡ್ಜ್‌ಟೌನ್: ಈ ಬಾರಿ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿ ಪಂದ್ಯ ವೊಂದು ಮಳೆಯಿಂದ ರದ್ದುಗೊಂಡಿದೆ. ಮಂಗಳವಾರ ರಾತ್ರಿ ಬಾರ್ಬಡೊಸ್ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಸ್ಕಾಟೆಂಡ್ ನಡುವಿನ ಪಂದ್ಯ ಮಳೆಗೆ ಆಹುತಿಯಾಯಿತು. ಇದರಿಂದ ಎರಡೂ ತಂಡಗಳು ತಲಾ ಒಂದು ಹಂಚಿಕೊಂಡವು.

ಟಾಸ್ ಗೆದ್ದ ಸ್ಕಾಟ್ಲಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ, ಆರಂಭದಲ್ಲೇ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯ ಸುಮಾರು 45 ನಿಮಿಷ ತಡವಾಗಿ ಶುರುವಾಯಿತು. ಸ್ಕಾಟ್ಲಂಡ್ ಇನ್ನಿಂಗ್ಸ್‌ನ 7ನೇ ಓವರ್‌ ವೇಳೆ ಮತ್ತೆ ಸುರಿಯಲು ಆರಂಭಿಸಿದ ಮಳೆ ಪಂದ್ಯವನ್ನು ಮತ್ತೆ 2 ಗಂಟೆಗಳ ಕಾಲ ಸ್ಥಗಿತಗೊಳಿಸಿತು. ಬಳಿಕ ಪಂದ್ಯವನ್ನು ತಲಾ 10 ಓವರ್‌ಗೆ ಇಳಿಸಿ ಪಂದ್ಯ ಪುನರಾರಂಭಿಸಲಾಯಿತು.

T20 World Cup 2024: ಭಾರತ-ಐರ್ಲೆಂಡ್ ಮೊದಲ ಮುಖಾಮುಖಿಗೆ ವೇದಿಕೆ ಸಜ್ಜು, ಇಲ್ಲಿದೆ ಈ ಪಂದ್ಯ ಉಪಯುಕ್ತ ಮಾಹಿತಿ

ಸ್ಕಾಟ್ಲೆಂಡ್ 10 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 90 ರನ್ ಕಲೆಹಾಕಿತು. ಡಕ್ವರ್ತ್ ಲೂಯಿಸ್ ನಿಯಮದನ್ವಯ ಇಂಗ್ಲೆಂಡ್‌ಗೆ 109 ರನ್ ಗುರಿ ನಿಗದಿಪಡಿಸಲಾಯಿತು. ಆದರೆ ಮತ್ತೆ ಮಳೆ ಸುರಿದ ಕಾರಣ ಪಂದ್ಯ ಆರಂಭಿಸಲಾಗಲಿಲ್ಲ. ಹೀಗಾಗಿ ಭಾರತೀಯ ಕಾಲಮಾನ ರಾತ್ರಿ 12.20ರ ವೇಳೆ ಪಂದ್ಯ ರದ್ದುಗೊಳಿಸಲು ರೆಫ್ರಿಗಳು ನಿರ್ಧರಿಸಿದರು. ಇಂಗ್ಲೆಂಡ್ ಜೂ.8ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

ಉಗಾಂಡ ವಿರುದ್ಧ ಅಫ್ಘನ್‌ಗೆ 125 ರನ್ ಭರ್ಜರಿ ಗೆಲುವು!

ಗಯಾನಾ: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮಂಗಳವಾರ ಉಗಾಂಡ ವಿರುದ್ಧ ಪಂದ್ಯದಲ್ಲಿ ಆಫ್ಘನ್ 125 ರನ್‌ ಜಯಭೇರಿ ಬಾರಿಸಿತು.

ಮೊದಲು ಬ್ಯಾಟ್ ಮಾಡಿದ ಆಫ್ಘನ್ 5 ವಿಕೆಟ್‌ಗೆ183 ರನ್‌ ಕಲೆಹಾಕಿತು.ಗುರ್ಬಾಜ್ -ಜದ್ರಾನ್ ಮೊದಲ ವಿಕೆಟ್‌ಗೆ 14.3 ಓವರಲ್ಲಿ 154ರನ್ ಜೊತೆಯಾಟವಾಡಿದರು ಆದರೆ 76 ರನ್ ಗಳಿಸಿದ್ದ ಗುರ್ಬಾಜ್, 70 ರನ್ ಸಿಡಿಸಿದ ಜದ್ರಾನ್ 5 ಎಸೆತಗಳ ಅಂತರದಲ್ಲಿ ಪೆವಿಲಿಯನ್ ಸೇರಿದರು. ಆ ಬಳಿಕ ತಂಡ ಹಿನ್ನಡೆ ಅನುಭವಿಸಿದರೂ, 180ರ ಗಡಿ ದಾಟಿತು.

ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿ ಆಡುತ್ತಿರುವ ಉಗಾಂಡ ಬೃಹತ್ ಗುರಿ ನೋಡಿಯೇ ಕಂಗಾಲಾಯಿತು. ಆಫ್ಘನ್ ನಿಖರ ದಾಳಿಗೆ ತತ್ತರಿಸಿದ ತಂಡ 16 ಓವರಲ್ಲಿ 58 ರನ್‌ಗೆ ಗಂಟುಮೂಟೆ ಕಟ್ಟಿತು. ರಿಯಾಜತ್ ಅಲಿ(11), ರಾಬಿನನ್ ಒಬುಯಾ(14) ಹೊರತುಪಡಿಸಿ ಬೇರೆ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಫಜಲ್‌ಹಕ್ ಫಾರೂಕಿ 4 ಓವರಲ್ಲಿ ಕೇವಲ 9 ರನ್ ನೀಡಿ 5 ವಿಕೆಟ್ ಕಬಳಿಸಿದರು. ನವೀನ್, ರಶೀದ್ ತಲಾ 2 ವಿಕೆಟ್ ಪಡೆದರು.

ಸ್ಕೋರ್: ಅಫ್ಘಾನಿಸ್ತಾನ 20 ಓವರಲ್ಲಿ 183/5 (ಗುರ್ಬಾಜ್ 76, ಜಾನ್ 70, ಮಸಾಬ 2-21), 
ಉಗಾಂಡ 16 ಓವರಲ್ಲಿ 58/10 (ರಾಬಿನ್ಸನ್ 14, ಫಾರೂಕಿ 5-9, 2-4) 
ಪಂದ್ಯಶ್ರೇಷ್ಠ: ಫಜಲ್‌ಹಕ್ ಫಾರೂಖಿ.
 

Latest Videos
Follow Us:
Download App:
  • android
  • ios