ಲೋ ಸ್ಕೋರಿಂಗ್ ಗೇಮ್ ಆಗಿದ್ದ ಈ ಮ್ಯಾಚ್‌ನಲ್ಲಿ ಆಗಾಗ ಪಂದ್ಯಕ್ಕೆ ಮಳೆ ಕೂಡಾ ಅಡ್ಡಿಪಡಿಸುತ್ತಲೇ ಇತ್ತು. ಹೀಗಿದ್ದೂ ಪ್ರತಿ ಎಸೆತ ಕೂಡಾ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಹೀಗಿರುವಾಗ, ಆಫ್ಘಾನಿಸ್ತಾನ ತಂಡವು ಫೀಲ್ಡಿಂಗ್ ಮಾಡುವ ವೇಳೆ ತಂಡದ ಹೆಡ್‌ ಕೋಚ್ ಜೋನಾಥನ್ ಟ್ರಾಟ್ ಸಲಹೆ ಮೇರೆಗೆ ಸ್ಲಿಪ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಗುಲ್ಬದ್ದೀನ್ ನೈಬ್ ದಿಢೀರ್ ಎನ್ನುವಂತೆ ಸ್ನಾಯುಸೆಳೆತಕ್ಕೆ ಒಳಗಾದಂತೆ ನಾಟಕ ಮಾಡಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಕಿಂಗ್ಸ್‌ಟೌನ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಆಫ್ಘಾನಿಸ್ತಾನ ತಂಡವು ಡೆಕ್ವರ್ತ್ ಲೂಯಿಸ್ ನಿಯಮದನ್ವಯ 8 ರನ್ ರೋಚಕ ಜಯಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ರಶೀದ್ ಖಾನ್ ನೇತೃತ್ವದ ಆಫ್ಘಾನಿಸ್ತಾನ ತಂಡವು ಯಶಸ್ವಿಯಾಗಿದೆ. ಆಫ್ಘಾನಿಸ್ತಾನ ತಂಡವು ಸೆಮೀಸ್ ಪ್ರವೇಶಿಸುತ್ತಿದ್ದಂತೆಯೇ ಆಟಗಾರರ ಹಾಗೂ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಹೀಗಿರುವಾಗಲೇ ಆಫ್ಘಾನಿಸ್ತಾನ ತಂಡದ ಮೇಲೆ ಮೋಸದಾಟದ ಆರೋಪ ಕೂಡಾ ಕೇಳಿ ಬಂದಿದೆ.

ಹೌದು. ಲೋ ಸ್ಕೋರಿಂಗ್ ಗೇಮ್ ಆಗಿದ್ದ ಈ ಮ್ಯಾಚ್‌ನಲ್ಲಿ ಆಗಾಗ ಪಂದ್ಯಕ್ಕೆ ಮಳೆ ಕೂಡಾ ಅಡ್ಡಿಪಡಿಸುತ್ತಲೇ ಇತ್ತು. ಹೀಗಿದ್ದೂ ಪ್ರತಿ ಎಸೆತ ಕೂಡಾ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಹೀಗಿರುವಾಗ, ಆಫ್ಘಾನಿಸ್ತಾನ ತಂಡವು ಫೀಲ್ಡಿಂಗ್ ಮಾಡುವ ವೇಳೆ ತಂಡದ ಹೆಡ್‌ ಕೋಚ್ ಜೋನಾಥನ್ ಟ್ರಾಟ್ ಸಲಹೆ ಮೇರೆಗೆ ಸ್ಲಿಪ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಗುಲ್ಬದ್ದೀನ್ ನೈಬ್ ದಿಢೀರ್ ಎನ್ನುವಂತೆ ಸ್ನಾಯುಸೆಳೆತಕ್ಕೆ ಒಳಗಾದಂತೆ ನಾಟಕ ಮಾಡಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

T20 World Cup 2024 ಶೂನ್ಯ ಸುತ್ತೋದ್ರಲ್ಲಿ ಆಶಿಶ್ ನೆಹ್ರಾ ಸಾಲಿಗೆ ಸೇರಿದ ವಿರಾಟ್ ಕೊಹ್ಲಿ..!

ಆಫ್ಘಾನ್ ಬೌಲರ್ ನೂರ್ ಅಹಮದ್ ಬೌಲಿಂಗ್ ಮಾಡುವ ವೇಳೆಯಲ್ಲಿ ತುಂತುರು ಮಳೆ ಆರಂಭವಾಯಿತು. ಆಗ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಆಫ್ಘಾನಿಸ್ತಾನ ತಂಡವು 2 ರನ್ ಮುಂದಿತ್ತು. ಹೀಗಾಗಿ ಡಗೌಟ್‌ನಲ್ಲಿ ಕುಳಿತಿದ್ದ ಆಫ್ಘಾನ್ ತಂಡದ ಹೆಡ್‌ ಕೋಚ್ ಜೋನಾಥನ್ ಟ್ರಾಟ್, ಪಂದ್ಯವನ್ನು ಕೊಂಚ ಸ್ಲೋ ಮಾಡಲು ಸಲಹೆ ರವಾನಿಸಿದರು. ಆಗ ಸ್ಲಿಪ್‌ ಫೀಲ್ಡಿಂಗ್ ಮಾಡುತ್ತಿದ್ದ ಗುಲ್ಬದ್ದೀನ್ ನೈಬ್, ಇದ್ದಕ್ಕಿಂತೆ ಸ್ನಾಯುಸೆಳೆತಕ್ಕೆ ಒಳಗಾದವರಂತೆ ಅಲ್ಲೇ ಕುಸಿದುಬಿದ್ದರು. 

ಹೀಗಿತ್ತು ನೋಡಿ ಆ ವಿಡಿಯೋ:

Scroll to load tweet…

ಇನ್ನು ಗುಲ್ಬದ್ದೀನ್ ಅವರ ಈ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ಗಳು ಹಾಗೂ ಮೀಮ್ಸ್‌ಗಳು ವೈರಲ್ ಆಗಿವೆ. ಗುಲ್ಬದ್ದೀನ್ ನೈಬ್ ಅವರ ಈ ನಟನೆಗೆ ಆಸ್ಕರ್ ಪ್ರಶಸ್ತಿ ನೀಡಬೇಕು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. 

Scroll to load tweet…

ಇನ್ನು ಗುಲ್ಬದ್ದೀನ್ ನೈಬ್ 10.1 ನಿಮಿಷಕ್ಕೆ ಸ್ನಾಯು ಸೆಳೆತಕ್ಕೆ ಒಳಗಾದಂತೆ ಕಾಣಿಸಿಕೊಂಡಿದ್ದರು. ಆದರೆ ಇದಾಗಿ 33 ನಿಮಿಷದಲ್ಲಿ ಆಫ್ಘಾನಿಸ್ತಾನ ಗೆಲುವು ಸಾಧಿಸುತ್ತಿದ್ದಂತೆಯೇ ಎಲ್ಲರಿಗಿಂತಲೂ ವೇಗವಾಗಿ ಓಡಿ ನೈಬ್ ಗೆಲುವಿನ ಸಂಭ್ರಮಾಚರಣೆ ಮಾಡಿದ್ದು ಕೂಡಾ ಸಾಕಷ್ಟು ವೈರಲ್ ಆಗಿದೆ.

Scroll to load tweet…

ಪಂದ್ಯದ ಬಗ್ಗೆ ಹೇಳುವುದಾದರೇ ಗೆಲ್ಲಲು ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 114 ರನ್‌ಗಳ ಸಾಧಾರಣ ಗುರಿ ಪಡೆದ ಬಾಂಗ್ಲಾದೇಶ ತಂಡವು ರಶೀದ್ ಖಾನ್ ಹಾಗೂ ನವೀನ್ ಉಲ್ ಹಕ್ ಅವರ ಮಾರಕ ದಾಳಿಗೆ ತತ್ತರಿಸಿ 17.5 ಓವರ್‌ಗಳಲ್ಲಿ 105 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 8 ರನ್ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಆಫ್ಘಾನ್ ಸೆಮೀಸ್ ಪ್ರವೇಶಿಸಿದರೆ, ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ತಂಡಗಳು ಸೂಪರ್ 8 ಹಂತದಲ್ಲೇ ತಮ್ಮ ಅಭಿಯಾನ ಮುಗಿಸಿವೆ.