ಬೆಂಗಳೂರು(ಜ.20): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿ ಏಕದಿನ ಸರಣಿ ವಶಪಡಿಸಿಕೊಂಡಿತು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಬಾಯ್ಸ್ ಅದ್ಭುತ ಪ್ರದರ್ಶನ ನೀಡಿತ್ತು. ಈ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸರಣಿ ಗೆಲುವಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾಗೆ ಸುನಿಲ್ ಚೆಟ್ರಿ ಸರ್ಪ್ರೈಸ್ ನೀಡಿದ್ದಾರೆ. 

ಇದನ್ನೂ ಓದಿ: ಬೆಂಗಳೂರಲ್ಲಿ ಘರ್ಜಿಸಿದ ಟೀಂ ಇಂಡಿಯಾ; ಏಕದಿನ ಸರಣಿ ಕೈವಶ!

ಸರಣಿ ಗೆಲುವಿನ ಬಳಿಕ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾಗೆ ಭಾರತ ತಂಡದ ಫುಟ್ಬಾಲ್ ನಾಯಕ ಸುನಿಲ್ ಚೆಟ್ರಿ ಡಿನ್ನರ್ ಏರ್ಪಡಿಸಿದ್ದಾರೆ. ಬೆಂಗಳೂರಿನಲ್ಲಿರುವ ಸುನಿಲ್ ಚೆಟ್ರಿ ಮನೆಯಲ್ಲಿ ಔತಣಕೂಟ ಆಯೋಜಿಸಲಾಗಿತ್ತು. ಚೆಟ್ರಿ ಹಾಗೂ ಪತ್ನಿ ಸೋನಮ್ ಬಟ್ಟಾಚಾರ್ಯ, ಕ್ರಿಕೆಟ್ ಬಾಲಿವುಡ್ ಸೆಲೆಬ್ರೆಟಿಗಳಿಗೆ ಪ್ರೀತಿಯ ಡಿನ್ನರ್ ಆಯೋಜಿಸಿದ್ದರು.

ಇದನ್ನೂ ಓದಿ: ಕೋಚ್‌ ಮಗಳು ಎಂದು ಗೊತ್ತಿಲ್ಲದೆ ಮದುವೆಯಾದ ಪುಟ್‌ಬಾಲ್‌ ನಾಯಕನ ಪ್ರೇಮಕಥೆ!

ಔತಣಕೂಟದಲ್ಲಿ ಭಾಗಿಯಾದ ಕೊಹ್ಲಿ ಹಾಗೂ ಅನುಷ್ಕಾ ಸಂತಸ ವ್ಯಕ್ತಪಡಿಸಿದ್ದಾರೆ. ಚೆಟ್ರಿ ಪತ್ನಿ ಸೋನಮ್ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಫೋನ್ ಇರಲಿಲ್ಲ(ಆದರೂ ಫೋಟೋ ತೆಗೆದಿದ್ದೇವೆ), ಸಮಯ ನೋಡಿಲ್ಲ, ವಿವಿದ ಕ್ಷೇತ್ರಗಳ ನಾಲ್ಕು ಮಿತ್ರರ ಮಾತುಕತೆ. ನಿಮ್ಮಿಬ್ಬರಿಗೆ ಡಿನ್ನರ್ ಆಯೋಜಿಸಿದ್ದು ಅತೀವ ಸಂತಸ ತಂದಿದೆ ಎಂದು ಸೋನಮ್ ಹೇಳಿಕೊಂಡಿದ್ದಾರೆ.

ಇದಕ್ಕೆ ಅನುಷ್ಕಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ನಮಗೆ ಅತ್ಯುತ್ತಮ ಸಂಜೆಯಾಗಿತ್ತು. ಮಂದಿನ ಬಾರಿ ನೀವು ಆಹ್ವಾನಿಸಿದೇ ಮನೆಗೆ ಬಂದರೆ ಅಚ್ಚರಿಯಾಗಬೇಡಿ ಎಂದು ಅನುಷ್ಕಾ ಹೇಳಿದ್ದಾರೆ.