Asianet Suvarna News Asianet Suvarna News

ಸಾನಿಯಾಗೆ ಕೈಕೊಟ್ಟ ಶೋಯೆಬ್...! ನಾನು ಹೀಗಾಗುತ್ತೆ ಅಂತ ಮೊದಲೇ ಹೇಳಿದ್ದೇ ಅಂದ PK ಸ್ವಾಮೀಜಿ..! ಮೀಮ್ಸ್‌ಗಳು ವೈರಲ್

41 ವರ್ಷದ ಶೋಯೆಬ್ ಮಲಿಕ್‌ ಅವರಿಗಿದು ಮೂರನೇ ಮದುವೆಯಾಗಿದೆ. ಈ ಮೊದಲು ಶೋಯೆಬ್ ಮಲಿಕ್ ತಮ್ಮ ಮೊದಲ ಪತ್ನಿ ಆಯೆಷಾ ಸಿದ್ದಿಕಿ ಅವರಿಗೆ ವಿಚ್ಛೇದನ ನೀಡಿ ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗಿದ್ದರು. ಕಳೆದೊಂದು ವರ್ಷದಿಂದಲೂ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಬೇರೆ-ಬೇರೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದವಾದರೂ, ಅಧಿಕೃತ ಮಾಹಿತಿ ಇರಲಿಲ್ಲ.

Sania Mirza Husband Shoaib Malik marries Pakistan actor Sana Javed memes goes viral kvn
Author
First Published Jan 20, 2024, 5:40 PM IST

ಬೆಂಗಳೂರು: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗಂಡ ಪಾಕಿಸ್ತಾನ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮೂಗುತಿ ಸುಂದರಿಗೆ ಕೈಕೊಟ್ಟು ಪಾಕಿಸ್ತಾನದ ನಟಿ ಸನಾ ಜಾವೆದ್‌ ಅವರೊಂದಿಗೆ ಮೂರನೇ ಮದುವೆಯಾಗಿದ್ದಾರೆ. ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರೊಂದಿಗೆ ಸಾನಿಯಾ ಮಿರ್ಜಾ 2010ರಲ್ಲಿ ವಿವಾಹವಾಗಿದ್ದರು. ಇದೀಗ 13 ವರ್ಷಗಳ ದಾಂಪತ್ಯ ಜೀವನಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹಲವು ಮೀಮ್ಸ್‌ಗಳು ವೈರಲ್ ಆಗಲಾರಂಭಿಸಿವೆ.

41 ವರ್ಷದ ಶೋಯೆಬ್ ಮಲಿಕ್‌ ಅವರಿಗಿದು ಮೂರನೇ ಮದುವೆಯಾಗಿದೆ. ಈ ಮೊದಲು ಶೋಯೆಬ್ ಮಲಿಕ್ ತಮ್ಮ ಮೊದಲ ಪತ್ನಿ ಆಯೆಷಾ ಸಿದ್ದಿಕಿ ಅವರಿಗೆ ವಿಚ್ಛೇದನ ನೀಡಿ ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗಿದ್ದರು. ಕಳೆದೊಂದು ವರ್ಷದಿಂದಲೂ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಬೇರೆ-ಬೇರೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದವಾದರೂ, ಅಧಿಕೃತ ಮಾಹಿತಿ ಇರಲಿಲ್ಲ. ಇದೀಗ ಮೂಗುತಿ ಸುಂದರಿಗೆ ಕೈಕೊಟ್ಟು ಶೋಯೆಬ್ ಮಲಿಕ್, ಸೌದಿ ಅರೆಬಿಯ ಮೂಲದ ಸನಾ ಜಾವೆದ್ ಅವರನ್ನು ಮದುವೆಯಾಗಿದ್ದಾರೆ. 

ಸಾರಾ ಸುದ್ದಿ ನಡುವೆ ಭಾರತೀಯರಿಗೆ ಶಾಕ್‌ ಕೊಟ್ಟ ಸನಾ, ಯಾರೀಕೆ ಸಾನಿಯಾ ಮಿರ್ಜಾ ಸವತಿ?

ಇನ್ನು ಸನಾ ಜಾವೆದ್ 2020ರಲ್ಲಿ ಪಾಕಿಸ್ತಾನಿ ನಟ, ಗಾಯಕ ಹಾಗೂ ಸಾಹಿತ್ಯ ರಚನೆಕಾರ ಉಮೈರ್ ಜಸ್ವಾಲ್ ಅವರನ್ನು ವಿವಾಹವಾಗಿದ್ದರು. ಇನ್ನು  ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಅವರು ಬೇರ್ಪಟ್ಟಿದ್ದರು. ಮಲಿಕ್ ಅವರನ್ನು ಮದುವೆಯಾಗುತ್ತಿದ್ದಂತೆಯೇ ಸನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ 'ಸನಾ ಶೋಯೆಬ್ ಮಲಿಕ್' ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಈ ಜೋಡಿ ಡೇಟಿಂಗ್ ಮಾಡುತ್ತಿತ್ತು ಎಂದು ವರದಿಯಾಗಿದೆ.

ಇದೀಗ ಸಾನಿಯಾ ಮಿರ್ಜಾಗೆ ಕೈಕೊಟ್ಟು ಸನಾ ಜಾವೆದ್ ಅವರನ್ನು ಶೋಯೆಬ್ ಮಲಿಕ್ ಮದುವೆಯಾಗುತ್ತಿದ್ದಂತೆಯೇ ಬಾಲಿವುಡ್‌ನ ಜನಪ್ರಿಯ ಚಿತ್ರವಾದ ಪಿಕೆಯಲ್ಲಿನ ಸಂಭಾಷಣೆಯ ತುಣುಕು ಇದೀಗ ವೈರಲ್ ಆಗಲಾರಂಭಿಸಿದೆ. ಆಮಿರ್ ಖಾನ್ ಹಾಗೂ ಅನುಷ್ಕಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದಲ್ಲಿ ಹಿಂದೂ ಸ್ವಾಮಿಜಿಯೊಬ್ಬರು 'ಸರ್ಫರಾಜ್ ಮೋಸ ಮಾಡುತ್ತಾನೆ' ಎಂಬ ಸಂಭಾಷಣೆಯನ್ನು ಇಟ್ಟುಕೊಂಡು ಇದೀಗ ಸಾನಿಯಾ ಅವರನ್ನು ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದ್ದಾರೆ.

ಇದಷ್ಟೇ ಅಲ್ಲದೇ ಇನ್ನಷ್ಟು ಮೀಮ್ಸ್‌ಗಳು ಈ ಕುರಿತಾಗಿ ವೈರಲ್ ಆಗಲಾರಂಭಿಸಿವೆ.

Follow Us:
Download App:
  • android
  • ios