Asianet Suvarna News Asianet Suvarna News

ಟಿ20 ಮಹಾಯದ್ಧಕ್ಕೆ ಟೀಮ್ ಇಂಡಿಯಾ ರೆಡಿ..! ರೋಹಿತ್ ಶರ್ಮಾ ಪಡೆ ಭರ್ಜರಿ ಪ್ರಾಕ್ಟೀಸ್

ಇಂದಿನಿಂದ T20 ವಿಶ್ವಕಪ್ ಮಹಾಸಮರ ಆರಂಭವಾಗಿದೆ. ಆದ್ರೆ, ಭಾರತದ ಅಭಿಯಾನ ಜೂನ್ 5ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ಸವಾಲು ಎದುರಿಸಲಿದೆ. ಕಳೆದ 11 ವರ್ಷಗಳಿಂದ ಟೀಂ  ಇಂಡಿಯಾ ಒಂದೇ ಒಂದು ICC ಟ್ರೋಫಿ ಗೆದ್ದಿಲ್ಲ. ಅಲ್ಲದೇ T20 ವರ್ಲ್ಡ್‌ಕಪ್ ಗೆದ್ದು 17 ವರ್ಷಗಳಾಗಿವೆ. ಇದ್ರಿಂದ ಈ ಬಾರಿ ಶತಾಯ, ಗತಾಯ ಟಿ20 ಚಾಂಪಿಯನ್ಸ್ ಪಟ್ಟ ಗೆಲ್ಲಲೇಬೇಕು ಅಂತ ರೋಹಿತ್ ಶರ್ಮಾ ಪಡೆ ಪಣತೊಟ್ಟಿದೆ. ಅದಕ್ಕಾಗಿ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ.

Rohit Sharma led Team India ready to roar in ICC T20 World Cup 2024 kvn
Author
First Published Jun 2, 2024, 1:51 PM IST | Last Updated Jun 2, 2024, 1:51 PM IST

ಬೆಂಗಳೂರು: ಈ ಬಾರಿ ಹೇಗಾದ್ರೂ ಮಾಡಿ ಟಿ20 ವಿಶ್ವಕಪ್ ಗೆಲ್ಲಲೇಬೇಕು ಅಂತ ಟೀಂ ಇಂಡಿಯಾ ಫಿಕ್ಸ್ ಆಗಿದೆ. ಇದಕ್ಕಾಗಿ ಪ್ರಾಕ್ಟೀಸ್ ಸೆಷನ್‌ನಲ್ಲಿ ಸರ್ವ ರೀತಿಯಲ್ಲಿ ಸನ್ನದ್ಧವಾಗ್ತಿದೆ. ಬನ್ನಿ, ಹಾಗಾದ್ರೆ, ರೋಹಿತ್ ಶರ್ಮಾ ಪಡೆಯ ಪ್ರಾಕ್ಟೀಸ್ ಸೆಷನ್ ಹೇಗಿದೆ ಅನ್ನೋದನ್ನ ನೋಡ್ಕೊಂಡು ಬರೋಣ. 

ರೋಹಿತ್ ಶರ್ಮಾ ಸೈನ್ಯ ಭರ್ಜರಿ ಪ್ರಾಕ್ಟೀಸ್..!

ಯೆಸ್, ಇಂದಿನಿಂದ T20 ವಿಶ್ವಕಪ್ ಮಹಾಸಮರ ಆರಂಭವಾಗಿದೆ. ಆದ್ರೆ, ಭಾರತದ ಅಭಿಯಾನ ಜೂನ್ 5ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ಸವಾಲು ಎದುರಿಸಲಿದೆ. ಕಳೆದ 11 ವರ್ಷಗಳಿಂದ ಟೀಂ  ಇಂಡಿಯಾ ಒಂದೇ ಒಂದು ICC ಟ್ರೋಫಿ ಗೆದ್ದಿಲ್ಲ. ಅಲ್ಲದೇ T20 ವರ್ಲ್ಡ್‌ಕಪ್ ಗೆದ್ದು 17 ವರ್ಷಗಳಾಗಿವೆ. ಇದ್ರಿಂದ ಈ ಬಾರಿ ಶತಾಯ, ಗತಾಯ ಟಿ20 ಚಾಂಪಿಯನ್ಸ್ ಪಟ್ಟ ಗೆಲ್ಲಲೇಬೇಕು ಅಂತ ರೋಹಿತ್ ಶರ್ಮಾ ಪಡೆ ಪಣತೊಟ್ಟಿದೆ. ಅದಕ್ಕಾಗಿ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ.

ಯೆಸ್, IPL ಸೀಸನ್ 17 ಮುಗಿಯುತ್ತಿದ್ದಂತೆ ಅಮೇರಿಕ ಫ್ಲೈಟ್ ಹತ್ತಿದ  ರೋಹಿತ್ ಆ್ಯಂಡ್ ಟೀಮ್, ಫುಲ್ ಪ್ರಾಕ್ಟೀಸ್ ನಡೆಸ್ತಿದೆ. ಹೆಡ್ ಕೋಚ್ ರಾಹುಲ್ ದ್ರಾವಿಡ್ ತರಬೇತಿಯಲ್ಲಿ ಎಲ್ಲಾ ಆಟಗಾರರು ಬೆವರು ಹರಿಸುತ್ತಿದ್ದಾರೆ. ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರೋ ಮೇನ್ ಪ್ಲೇಯರ್ಸ್ ಜೊತೆ, ಸ್ಟ್ಯಾಂಡ್‌ಬೈ  ಪ್ಲೇಯರ್ಗಳಾದ ಶುಭ್‌ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಆವೇಶ್ ಖಾನ್ ಕೂಡ ಸಮರಭ್ಯಾಸ ನಡೆಸುತ್ತಿದ್ದಾರೆ. 

ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಕೆಆರ್ ಸ್ಟಾರ್ ವೆಂಕಟೇಶ್ ಅಯ್ಯರ್

ಕ್ಯಾಚಿಂಗ್ ಪ್ರಾಕ್ಟೀಸ್ನಲ್ಲಿ ಬೆವರು ಹರಿಸಿದ ಪ್ಲೇಯರ್ಸ್..!

ಯೆಸ್, ನೆಟ್ ಸೆಷನ್ ಆರಂಭಕ್ಕೂ ಮುನ್ನ ಎಲ್ಲಾ ಪ್ಲೇಯರ್ಸ್ ಕ್ಯಾಚಿಂಗ್ ಪ್ರಾಕ್ಟೀಸ್ನಲ್ಲಿ ಭಾಗಹಿಸಿದ್ರು. ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಖಲೀಲ್ ಅಹ್ಮದ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್  ರೋಹಿತ್ ಸೇರಿದಂತೆ ಹಲವು ಆಟಗಾರರು ಅಭ್ಯಾಸದಲ್ಲಿ ಭಾಗಿಯಾಗಿದ್ರು. ಇನ್ನು ಒಂದೂವರೆ ವರ್ಷದ ನಂತರ ತಂಡಕ್ಕೆ ಕಮ್ಬ್ಯಾಕ್ ಮಾಡಿರೋ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಪ್ರಾಕ್ಟೀಸ್  ಮಾಡಿದ್ರು.

ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದ ಬುಮ್ರಾ, ಚಹಲ್ 

ಬ್ಯಾಟರ್ಸ್ ಜೊತಗೆ ಬೌಲರ್ಗಳಾದ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಮತ್ತು ಸ್ಪಿನ್ನರ್ ಚಹಲ್ ಕೂಡ, ನೆಟ್ಸ್ನಲ್ಲಿ ಬ್ಯಾಟ್ ಬೀಸಿದ್ರು. ನಾಕೌಟ್ ಮ್ಯಾಚ್ಗಳಲ್ಲಿ ಒಂದೊಂದು ರನ್ ಕೂಡ ಇಂಪಾ ರ್ಟೆಂಟ್ ಆಗುತ್ತೆ. ಕೆಳ ಹಂತದಲ್ಲಿ ಬೌಲರ್ಸ್ ಗಳಿಸೋ ರನ್ಗಳು ತಂಡದ ಗೆಲುವಿಗೆ ನೆರವಾಗುತ್ತೆ. ಇದೇ ಕಾರಣಕ್ಕೆ ಕೋಚ್ ದ್ರಾವಿಡ್ ಬೌಲರ್ಗಳಿಗೂ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿಸ್ತಿದ್ದಾರೆ. 

ಅಭ್ಯಾಸ ಪಂದ್ಯ: ಬಾಂಗ್ಲಾ ವಿರುದ್ಧ ಅಬ್ಬರಿಸಿ ಗೆದ್ದ ಟೀಂ ಇಂಡಿಯಾ

ಶಿವಂ ದುಬೆಗೆ ರೋಹಿತ್ ಬೌಲಿಂಗ್ ಟಿಪ್ಸ್..! 

ಯೆಸ್, ಪ್ರಾಕ್ಟೀಸ್ ಸೆಷನ್ನ ಮತ್ತೊಂದು ಹೈಲೆಟ್ ಅಂದ್ರೆ, ಶಿವಂ ದುಬೆ ಬೌಲಿಂಗ್.! ಬ್ಯಾಟಿಂಗ್ ಆಲ್ರೌಂಡ್  ದುಬೆ, IPLನಲ್ಲಿ ಹೆಚ್ಚಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಂಡಿದ್ರು. ಒಂದೇ ಒಂದು ಓವರ್ ಕೂಡ ಬೌಲಿಂಗ್ ಮಾಡಿರಲಿಲ್ಲ. ಆದ್ರೆ, ಪ್ರಾಕ್ಟೀಸ್ ಸೆಷನ್ನಲ್ಲಿ ದುಬೆ ಬೌಲಿಂಗ್ ಅಭ್ಯಾಸ ಮಾಡಿದ್ರು. ಕ್ಯಾಪ್ಟನ್ ರೋಹಿತ್ ದುಬೆಗೆ ಕೆಲ ಸಲಹೆಗಳನ್ನ ನೀಡಿದ್ರು. 

ಗಂಟೆಗಟ್ಟಲೇ ಪಾಂಡ್ಯ ಬ್ಯಾಟಿಂಗ್..! 

ಇನ್ನು ಬ್ಯಾಟಿಂಗ್ನಲ್ಲಿ ಯಶಸ್ವಿ ಜೈಸ್ವಾಲ್ ಕವರ್‌ ಡ್ರೈವ್ ಮತ್ತು ಪುಲ್ ಶಾಟ್‌ಗಳನ್ನ ಮೇಲೆ ವರ್ಕ್ ಮಾಡಿದ್ರು. ಹಾರ್ದಿಕ್ ಪಾಂಡ್ಯ ಹಲವು ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿದ್ರು. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ತರಬೇತಿಯಲ್ಲಿ ಹೆಡ್ ಪೊಜಿಷನ್, ಸ್ಟ್ಯಾನ್ಸ್ ಮತ್ತು ಫುಟ್ವರ್ಕ್ ಇಂಪ್ರೂವ್ ಮಾಡಿಕೊಂಡ್ರು. ಒಟ್ಟಿನಲ್ಲಿ T20 ವಿಶ್ವಕಪ್ ರಣರಂಗದಲ್ಲಿ ಅಬ್ಬರಿಸಲು ರೋಹಿತ್ ಸೈನ್ಯ ಸರ್ವ ಸನ್ನದ್ಧವಾಗ್ತಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

Latest Videos
Follow Us:
Download App:
  • android
  • ios