Asianet Suvarna News Asianet Suvarna News

ರಣಜಿ ಟ್ರೋಫಿ: ಕರ್ನಾಟಕಕ್ಕೆ ಸಿಗುತ್ತಾ ಗೆಲುವು?

ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟ ಗುಂಪು ಹಂತದ ಕೊನೆಯ ಪಂದ್ಯವನ್ನಾಡುತ್ತಿದ್ದು, ಇಂದು ಬರೋಡ ವಿರುದ್ಧ ಗೆಲುವಿನ ಕನವರಿಕೆಯಲ್ಲಿದೆ. ಎರಡನೇ ದಿನದಂತ್ಯಕ್ಕೆ ಬರೋಡ ಅಲ್ಪ ಮುನ್ನಡೆ ಸಾಧಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

Ranji Trophy Karnataka looks to seal quarter finals berth against Baroda in Bengaluru
Author
Bengaluru, First Published Feb 14, 2020, 10:31 AM IST

"

ಬೆಂಗಳೂರು(ಫೆ.14): ಬರೋಡಾ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಮೊದಲ ದಿನವೇ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದ್ದ ಕರ್ನಾಟಕಕ್ಕೆ, 2ನೇ ದಿನದಂತ್ಯಕ್ಕೆ ಸ್ವಲ್ಪ ಹಿನ್ನಡೆ ಉಂಟಾಗಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 223 ರನ್‌ ಗಳಿಸಿ ಆಲೌಟ್‌ ಆಯಿತು. 148 ರನ್‌ಗಳ ಮುನ್ನಡೆ ಸಂಪಾದಿಸಿತು.

ರಣಜಿ ಟ್ರೋಫಿ: ಬೃಹತ್ ಮುನ್ನಡೆಯತ್ತ ಕರ್ನಾಟಕ

ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 85 ರನ್‌ಗೆ ಆಲೌಟ್‌ ಆಗಿದ್ದ ಬರೋಡಾ, 2ನೇ ಇನ್ನಿಂಗ್ಸ್‌ನಲ್ಲಿ ದಿಟ್ಟಹೋರಾಟ ಪ್ರದರ್ಶಿಸುತ್ತಿದೆ. 2ನೇ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿದ್ದು, 60 ರನ್‌ಗಳ ಮುನ್ನಡೆ ಸಾಧಿಸಿದೆ. 3ನೇ ದಿನವಾದ ಶುಕ್ರವಾರ ಬರೋಡಾ, 150ಕ್ಕಿಂತ ಹೆಚ್ಚು ರನ್‌ಗಳ ಮುನ್ನಡೆ ಪಡೆದರೆ, ಕರ್ನಾಟಕಕ್ಕೆ ಗುರಿ ಬೆನ್ನತ್ತುವುದು ಕಷ್ಟವಾಗಲಿದೆ. ಕುತೂಹಲ ಘಟ್ಟ ತಲುಪಿರುವ ಪಂದ್ಯದಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸುವ ವಿಶ್ವಾಸವನ್ನು ಕರುಣ್‌ ನಾಯರ್‌ ಪಡೆ ಕೈಬಿಟ್ಟಿಲ್ಲ.

ದೊಡ್ಡ ಮೊತ್ತದ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಬರೋಡಾ, ಮೊದಲ ವಿಕೆಟ್‌ಗೆ 45 ರನ್‌ ಜೊತೆಯಾಟ ಪಡೆದುಕೊಂಡಿತು. ಆದರೆ 3 ರನ್‌ ಅಂತರದಲ್ಲಿ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ, ತಂಡಕ್ಕೆ ಆಸರೆಯಾಗಿದ್ದು ಆರಂಭಿಕ ಬ್ಯಾಟ್ಸ್‌ಮನ್‌ ಅಹ್ಮದ್‌ನೂರ್‌ ಪಠಾಣ್‌ ಹಾಗೂ ದೀಪಕ್‌ ಹೂಡಾ. ಇವರಿಬ್ಬರ ನಡುವೆ 94 ರನ್‌ಗಳ ಜೊತೆಯಾಟ ಮೂಡಿಬಂತು. 50 ರನ್‌ ಗಳಿಸಿದ ದೀಪಕ್‌ರನ್ನು ರೋನಿತ್‌ ಮೋರೆ ಪೆವಿಲಿಯನ್‌ಗಟ್ಟಿಕರ್ನಾಟಕ ಪಂದ್ಯದ ಮೇಲೆ ಹಿಡಿತ ವಾಪಸ್‌ ಪಡೆಯಲು ಸಹಕಾರಿಯಾದರು. ನಾಯಕ ಕೃನಾಲ್‌ ಪಾಂಡ್ಯ (05) ಮತ್ತೆ ವೈಫಲ್ಯ ಕಂಡರು. ಆಕರ್ಷಕ 90 ರನ್‌ ಗಳಿಸಿದ ಅಹ್ಮದ್‌ನೂರ್‌, ತಂಡಕ್ಕೆ ಮುನ್ನಡೆ ಒದಗಿಸಿ ಔಟಾದರು. 31 ರನ್‌ ಗಳಿಸಿರುವ ಅಭಿಮನ್ಯು ಸಿಂಗ್‌ ಹಾಗೂ 4 ರನ್‌ ಗಳಿಸಿರುವ ಪಾಥ್‌ರ್‍ ಕೊಹ್ಲಿ 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಪ್ರಸಿದ್‌್ಧ ಹಾಗೂ ರೋನಿತ್‌ ತಲಾ 2 ವಿಕೆಟ್‌ ಕಬಳಿಸಿದರೆ, ಕೆ.ಗೌತಮ್‌ 1 ವಿಕೆಟ್‌ ಕಿತ್ತರು.

ಮಿಥುನ್‌ ಹೋರಾಟ: ಮೊದಲ ದಿನದಂತ್ಯಕ್ಕೆ 7 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿದ್ದ ಕರ್ನಾಟಕ, ಗುರುವಾರ ಆ ಮೊತ್ತಕ್ಕೆ 68 ರನ್‌ ಸೇರಿಸಿತು. ಅಭಿಮನ್ಯು ಮಿಥುನ್‌ 40 ರನ್‌ ಗಳಿಸಿದರೆ, ಶರತ್‌ ಶ್ರೀನಿವಾಸ್‌ 34 ರನ್‌ ಕಲೆಹಾಕಿದರು. ರೋನಿತ್‌ ಮೋರೆ 8, ಪ್ರಸಿದ್‌್ಧ ಕೃಷ್ಣ 10 ರನ್‌ಗಳ ಕೊಡುಗೆ ನೀಡಿದರು. ಬರೋಡಾ ಪರ ಸೊಯೆಬ್‌ ಸೊಪಾರಿಯಾ 5 ವಿಕೆಟ್‌ ಕಬಳಿಸಿ ಗಮನ ಸೆಳೆದರು.

3ನೇ ದಿನವಾದ ಶುಕ್ರವಾರ, ಬರೋಡಾವನ್ನು 100 ರನ್‌ ಮುನ್ನಡೆಯೊಳಗೆ ಕಟ್ಟಿಹಾಕಿ ಸುಲಭ ಗೆಲುವು ಸಾಧಿಸುವುದು ಕರ್ನಾಟಕದ ಗುರಿಯಾಗಿದೆ. ಮುನ್ನಡೆ 150 ದಾಟಿದರೆ, 4ನೇ ಇನ್ನಿಂಗ್ಸ್‌ನಲ್ಲಿ ಬೆನ್ನತ್ತುವುದು ಕಷ್ಟವಾಗಬಹುದು.

ಸ್ಕೋರ್‌:

ಬರೋಡಾ 85 ಹಾಗೂ 208/5 (ಅಹ್ಮದ್‌ನೂರ್‌ 90, ದೀಪಕ್‌ 50, ಪ್ರಸಿದ್‌್ಧ 2-29, ರೋನಿತ್‌ 2-36)

ಕರ್ನಾಟಕ 233 (ಮಿಥುನ್‌ 40, ಶ್ರೀನಿವಾಸ್‌ 34, ಸೊಯೆಬ್‌ 5-83)
 

Follow Us:
Download App:
  • android
  • ios