ಇನ್ನು ಗೆಲ್ಲಲು ಕೇವಲ 110 ರನ್‌ಗಳ ಸಾಧಾರಣ ಗುರಿ ಪಡೆದ ಕರ್ನಾಟಕ ತಂಡವು, ಆತ್ಮವಿಶ್ವಾಸದಿಂದಲೇ ಇನಿಂಗ್ಸ್ ಆರಂಭಿಸಿತು. ಮೊದಲ ವಿಕೆಟ್‌ಗೆ ನಾಯಕ ಮಯಾಂಕ್ ಅಗರ್‌ವಾಲ್(19) ಹಾಗೂ ದೇವದತ್ ಪಡಿಕ್ಕಲ್(31) ಚುರುಕಿನ 50 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು.
ಅಹಮದಾದಾಬ್(ಜ.15): ಆತಿಥೇಯ ಗುಜರಾತ್ ಎದುರು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎರಡನೇ ಗೆಲುವು ಸಾಧಿಸುವ ಕರ್ನಾಟಕ ಕ್ರಿಕೆಟ್ ತಂಡದ ಕನಸು ನುಚ್ಚುನೂರಾಗಿದೆ. ಗೆಲ್ಲಲು 110 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಮಯಾಂಕ್ ಅಗರ್‌ವಾಲ್ ನೇತೃತ್ವದ ಕರ್ನಾಟಕ ತಂಡವು 103 ರನ್‌ಗಳಿಗೆ ಸರ್ವಪತನ ಕಂಡಿದೆ. ಕರ್ನಾಟಕ ತಂಡವು ಕೇವಲ 48 ರನ್ ಅಂತರದಲ್ಲಿ 9 ವಿಕೆಟ್ ವಿಕೆಟ್ ಕಳೆದುಕೊಳ್ಳುವ ಮೂಲಕ ಕೈಯಲ್ಲಿದ್ದ ಗೆಲುವನ್ನು ಕೈಚೆಲ್ಲಿ ಮುಖಭಂಗ ಅನುಭವಿಸಿದೆ.
ಹೌದು, ಮೊದಲ ಮೂರು ದಿನವೂ ಗುಜರಾತ್ ಎದುರು ಸಂಪೂರ್ಣ ಪ್ರಾಬಲ್ಯ ಮೆರೆದ ಕರ್ನಾಟಕ ತಂಡವು ನಾಲ್ಕನೇ ದಿನದಾಟದ ಆರಂಭದಲ್ಲೇ ಗುಜರಾತ್ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ 219 ರನ್‌ಗಳಿಗೆ ಆಲೌಟ್ ಮಾಡಿತು. ಗುಜರಾತ್ ಪರ ಉಮಾಂಗ್ ಕುಮಾರ್ ಜವಾಬ್ದಾರಿಯುತ 57 ರನ್ ಬಾರಿಸುವ ಮೂಲಕ ತಂಡ ಗೌರವಾನ್ವಿತ ಗುರಿ ನೀಡಲು ನೆರವಾದರು.
ಆಡೋದ್ರಲ್ಲೂ ಮುಂದು, ಹೂಡೋದ್ರಲ್ಲೂ ಮುಂದು..! ಈ Startup ಕಂಪನಿಗಳ ಮೇಲೆ ಹಣ ಹಾಕಿದ್ದಾರೆ ನಮ್ಮ ಕ್ರಿಕೆಟರ್ಸ್!
ಕರ್ನಾಟಕ ತಂಡದ ಪರ ಎರಡನೇ ಇನಿಂಗ್ಸ್‌ನಲ್ಲಿ ರೋನಿತ್ ಮೋರೆ ಹಾಗೂ ವಿ ಕೌಶಿಕ್ ತಲಾ ಎರಡು ವಿಕೆಟ್ ಪಡೆದರೆ, ಶುಭಾಂಗ್ ಹೆಗ್ಡೆ 2 ಮತ್ತು ವೈಶಾಕ್ ವಿಜಯ್‌ಕುಮಾರ್ ಒಂದು ವಿಕೆಟ್ ಪಡೆದರು.
ಇನ್ನು ಗೆಲ್ಲಲು ಕೇವಲ 110 ರನ್‌ಗಳ ಸಾಧಾರಣ ಗುರಿ ಪಡೆದ ಕರ್ನಾಟಕ ತಂಡವು, ಆತ್ಮವಿಶ್ವಾಸದಿಂದಲೇ ಇನಿಂಗ್ಸ್ ಆರಂಭಿಸಿತು. ಮೊದಲ ವಿಕೆಟ್‌ಗೆ ನಾಯಕ ಮಯಾಂಕ್ ಅಗರ್‌ವಾಲ್(19) ಹಾಗೂ ದೇವದತ್ ಪಡಿಕ್ಕಲ್(31) ಚುರುಕಿನ 50 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ಆದರೆ ಮಯಾಂಕ್ ಅವರ ವಿಕೆಟ್ ಕಬಳಿಸಿದ ಸಿದ್ದಾರ್ಥ್ ದೇಸಾಯಿ, ಕರ್ನಾಟಕ ಪಾಲಿಗೆ ಕಂಠಕವಾಗಿ ಪರಿಣಮಿಸಿದರು. ಮಯಾಂಕ್, ಪಡಿಕ್ಕಲ್ ಹಾಗೂ ಶುಭಾಂಗ್ ಹೆಗ್ಡೆ(27) ಹೊರತುಪಡಿಸಿ ಕರ್ನಾಟಕದ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.
ಗುಜರಾತ್ ತಂಡದ ಪರ ಸಿದ್ದಾರ್ಥ್ ದೇಸಾಯಿ ಕೇವಲ 42 ರನ್ ನೀಡಿ 7 ವಿಕೆಟ್ ಕಬಳಿಸಿದರೆ, ಸ್ಪಿನ್ನರ್ ರಿಂಕೇಶ್ ವಘೇಲಾ 3 ವಿಕೆಟ್ ಕಬಳಿಸಿ ಮಿಂಚಿದರು.
Ranji Trophy ಗುಜರಾತ್ ಮೇಲೆ ಕರ್ನಾಟಕ ಅಧಿಪತ್ಯ
ಇದಕ್ಕೂ ಮೊದಲು 2ನೇ ದಿನದಂತ್ಯಕ್ಕೆ 328ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ರಾಜ್ಯ ತಂಡ ಭಾನುವಾರ 374ಕ್ಕೆ ಸರ್ವಪತನ ಕಂಡಿತು. 56 ರನ್ ಗಳಿಸಿದ ಕ್ರೀಸ್ ಕಾಯ್ದುಕೊಂಡಿದ್ದ ಮನೀಶ್ ಪಾಂಡೆ 88ಕ್ಕೆ ಔಟಾದರೆ, ಪಾದಾರ್ಪಣಾ ಪಂದ್ಯವಾಡುತ್ತಿರುವ ಸುಜತ್ ಸತೇರಿ 31 ರನ್ ಕೊಡುಗೆ ನೀಡಿದರು. ತಂಡದ ಕೊನೆ 5 ವಿಕೆಟ್ ಕೇವಲ 26 ರನ್ ಅಂತರದಲ್ಲಿ ಉರುಳಿತು. ಇದರ ಹೊರತಾಗಿಯೂ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 110 ರನ್ ಮುನ್ನಡೆ ಪಡೆಯಿತು.
ಮಾರಕ ದಾಳಿ: ದೊಡ್ಡ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಗುಜರಾತನ್ನು ಮತ್ತೆ ರಾಜ್ಯದ ಬೌಲರ್‌ಗಳು ಕಾಡಿದರು. 7ನೇ ಓವರಲ್ಲಿ ಪ್ರಿಯಾಂಕ್ ಪಾಂಚಾಲ್(04)ರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಗುಜರಾತ್ ಕುಸಿತಕ್ಕೆ ಕೌಶಿಕ್ ನಾಂದಿ ಹಾಡಿದರು. ಬಳಿಕ ಹಿಂಗ್ರಾಜಿಯಾ(56 ರನ್) ಹೊರತುಪಡಿಸಿದ ಯಾವ ಬ್ಯಾಟರ್‌ಗೂ ಕೂಡಾ ರಾಜ್ಯದ ವೇಗಿಗಳನ್ನು ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ.
