Asianet Suvarna News Asianet Suvarna News

ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಪಾಕ್ ವೇಗಿ..? ಅಮೆರಿಕ ಎದುರು ಪಾಕ್ ಮೋಸದಾಟ..!

'ಹ್ಯಾರಿಸ್ ರೌಫ್ ಸ್ವಿಂಗ್ ಮಾಡುವುದಕ್ಕಾಗಿ ತಮ್ಮ ಹೆಬ್ಬೆರಳಿನ ಉಗುರಿನ ಮೂಲಕ ಚೆಂಡನ್ನು ವಿರೂಪಗೊಳಿಸುತ್ತಿದ್ದಾರೆ. ಇದನ್ನು ನಾವು ಕಾಣದಂತೆ ನಟಿಸುತ್ತಿದ್ದೇವೆಯೇ' ಎಂದು ಐಸಿಸಿಗೆ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲೂ ಭಾರಿ ಚರ್ಚೆ ಯಾಗುತ್ತಿದೆ. 2010ರಲ್ಲಿ ಪಾಕ್‌ನ ಶಾಹಿದ್ ಅಫ್ರಿದಿ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿ 2 ಪಂದ್ಯಗಳಿಂದ ಅಮಾನತಾಗಿದ್ದರು.

Pakistan Pacer Haris Rauf accused of ball tampering by USA bowler during T20 World Cup match kvn
Author
First Published Jun 8, 2024, 11:41 AM IST

ಡಲ್ಲಾಸ್: ಅಮೆರಿಕ ಹಾಗೂ ಪಾಕಿಸ್ತಾನ ನಡುವಿನ ಗುರುವಾರದ ಟಿ20 ವಿಶ್ವಕಪ್ ಪಂದ್ಯದ ವೇಳೆ ಪಾಕ್ ವೇಗಿ ಹ್ಯಾರಿಸ್ ರೌಫ್ ಚೆಂಡು ವಿರೂಪಗೊಳಿಸಿದ್ದಾರೆ ಎಂದು ಅಮೆರಿಕ ಕ್ರಿಕೆಟಿಗ ರಥಿರೋನ್ ಗಂಭೀರ ಆರೋಪ ಮಾಡಿದ್ದಾರೆ. ಆಡುವ 11ರ ಬಳಗದಿಂದ ಹೊರಗಿದ್ದಿದ್ದ ರಸ್ಟಿ, ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. 

'ಹ್ಯಾರಿಸ್ ರೌಫ್ ಸ್ವಿಂಗ್ ಮಾಡುವುದಕ್ಕಾಗಿ ತಮ್ಮ ಹೆಬ್ಬೆರಳಿನ ಉಗುರಿನ ಮೂಲಕ ಚೆಂಡನ್ನು ವಿರೂಪಗೊಳಿಸುತ್ತಿದ್ದಾರೆ. ಇದನ್ನು ನಾವು ಕಾಣದಂತೆ ನಟಿಸುತ್ತಿದ್ದೇವೆಯೇ' ಎಂದು ಐಸಿಸಿಗೆ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲೂ ಭಾರಿ ಚರ್ಚೆ ಯಾಗುತ್ತಿದೆ. 2010ರಲ್ಲಿ ಪಾಕ್‌ನ ಶಾಹಿದ್ ಅಫ್ರಿದಿ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿ 2 ಪಂದ್ಯಗಳಿಂದ ಅಮಾನತಾಗಿದ್ದರು.

ಸ್ಕಾಟೆಂಡ್‌ಗೆ ನಮೀಬಿಯಾ ವಿರುದ್ಧ 5 ವಿಕೆಟ್ ಗೆಲುವು

ಬಾರ್ಬಡೊಸ್: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಶುಕ್ರವಾರ ನಮೀಬಿಯಾ ವಿರುದ್ದ ಸ್ಕಾಟೆಂಡ್ 5 ವಿಕೆಟ್ ಗೆಲುವು ಸಾಧಿಸಿದೆ. ಇದರೊಂದಿಗೆ ಸ್ಕಾಟೆಂಡ್ 'ಬಿ' ಗುಂಪಿನಲ್ಲಿ 3 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದರೆ, ನಮೀಬಿಯಾ 2 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ. 

ಅಮೆರಿಕ ಟೀಂ ಯಶಸ್ಸಿನ ಹಿಂದೆ ಭಾರತೀಯರ ಪಾತ್ರ; ಐತಿಹಾಸಿಕ ಗೆಲುವಿನ ಹಿಂದೆ ಬರೋಬ್ಬರಿ 7 ಮಂದಿ ಭಾರತೀಯರು..!

ಮೊದಲು ಬ್ಯಾಟ್ ಮಾಡಿದ ನಮೀಬಿಯಾ 9 ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿತು. ನಾಯಕ ಗೆರಾರ್ಡ್ ಎರಾಸ್ಮಸ್ 31 ಎಸೆತಗಳಲ್ಲಿ 52 ರನ್ ಸಿಡಿಸಿದರು. ಜೇನ್ ಗ್ರೀನ್ 28 ರನ್ ಕೊಡುಗೆ ನೀಡಿದರು. ಬ್ರಾಡ್ ವೀಲ್ 3 ವಿಕೆಟ್ ಕಿತ್ತರು. ಸ್ಪರ್ಧಾತ್ಮಕ ಗುರಿಯನ್ನು ಸ್ಕಾಟೆಂಡ್ 18.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬೆನ್ನತ್ತಿತು. ರಿಚೀ ಬೆರ್ರಿಂಗ್ ಹ್ಯಾಮ್ 35 ಎಸೆತಗಳಲ್ಲಿ ಔಟಾಗದೆ 47, ಮೈಕಲ್ ಲೀಸ್ಟ್ 17 ಎಸೆತಗಳಲ್ಲಿ 35 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.

ಕೆನಡಾಕ್ಕೆ ಮಣಿದ ಐರ್ಲೆಂಡ್

ನ್ಯೂಯಾರ್ಕ್: ವಿಶ್ವಕಪ್‌ನಲ್ಲಿ ಐರ್ಲೆಂಡ್ ಸತತ 2ನೇ ಸೋಲು ಕಂಡಿದೆ. ಶುಕ್ರವಾರ ಕೆನಡಾ ವಿರುದ್ಧ 12 ರನ್ ಸೋಲು ಎದುರಾ ಯಿತು. ಆರಂಭಿಕ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತಿದ್ದ ಕೆನಡಾಕ್ಕೆ ಇದು ಟೂರ್ನಿಯಲ್ಲಿ ಮೊದಲ ಜಯ. ಮೊದಲು ಬ್ಯಾಟ್ ಮಾಡಿದ ಕೆನಡಾ 7 ವಿಕೆಟ್‌ಗೆ 137 ರನ್ ಕಲೆಹಾಕಿತು. 53 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ನಿಕೋ ಲಸ್ ಕಿರ್ಟನ್ (49) ಕನ್ನಡಿಗ ಶ್ರೇಯಸ್ ಮೋವಾ(37) ಆಸರೆಯಾದರು. ವಿಕೆಟ್‌ಗೆ ಈ ಜೋಡಿ 75 ರನ್ ಸೇರಿಸಿತು.

5ನೇ ಸುಲಭ ಗುರಿ ಬೆನ್ನತ್ತಿದರೂ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ಐರ್ಲೆಂಡ್ 7 ವಿಕೆಟ್‌ಗೆ 125 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕಿರ್ಟನ್ ಡೊಕ್ರೆಲ್ (30*), ಮಾರ್ಕ್ ಅಡೈರ್ (34) ಹೋರಾಟ ಫಲಿಸಲಿಲ್ಲ. 

ಸ್ಕೋರ್: ಕೆನಡಾ 137/7 (ನಿಕೋಲಸ್ 49, ಶ್ರೇಯಸ್ 37, ಮೆಕ್‌ಕಾರ್ಥಿ 2-24)
ಐರ್ಲೆಂಡ್ 125/7 (ಅಡೈರ್ 34, ಡೊಕ್ರೆಲ್ 30*, ಜೆರೆಮಿ 2-16) 

ಪಂದ್ಯಶ್ರೇಷ್ಠ: ಕಿರ್ಟನ್

Latest Videos
Follow Us:
Download App:
  • android
  • ios