Asianet Suvarna News Asianet Suvarna News

ಭಾರತ ವಿರುದ್ಧ ಟೆಸ್ಟ್‌ಗೆ ಕಿವೀಸ್‌ ತಂಡ ಪ್ರಕಟ

ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಮಾರಕ ವೇಗಿ ತಂಡ ಕೂಡಿಕೊಂಡಿದ್ದಾರೆ. ಕಿವೀಸ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವುದರ ವಿವರ ಇಲ್ಲಿದೆ ನೋಡಿ...

New Zealand squad for India Tests Trent Boult Comeback
Author
Wellington, First Published Feb 18, 2020, 12:20 PM IST

ವೆಲ್ಲಿಂಗ್ಟನ್‌(ಫೆ.18): ಗಾಯದ ಸಮಸ್ಯೆಯಿಂದಾಗಿ ಭಾರತ ವಿರುದ್ಧ ಟಿ20, ಏಕದಿನ ಸರಣಿಯಿಂದ ಹೊರಗುಳಿದಿದ್ದ ನ್ಯೂಜಿಲೆಂಡ್‌ನ ಅನುಭವಿ ವೇಗಿ ಟ್ರೆಂಟ್‌ ಬೌಲ್ಟ್‌ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಫೆ.21ರಿಂದ ಇಲ್ಲಿ ಆರಂಭಗೊಳ್ಳಲಿರುವ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ಗೆ ಸೋಮವಾರ 13 ಸದಸ್ಯರ ತಂಡವನ್ನು ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಪ್ರಕಟಗೊಳಿಸಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧದ ಬಾಕ್ಸಿಂಗ್‌ ಡೇ ವೇಳೆ ಬೌಲ್ಟ್‌ ಬಲಗೈ ಮುರಿದುಕೊಂಡಿದ್ದರು.

ಭಾರತಕ್ಕೆ ತಿರುಗೇಟು, ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್!

ಏಕದಿನ ಸರಣಿ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ 6 ಅಡಿ 8 ಇಂಚು ಉದ್ದದ ಕೈಲ್‌ ಜ್ಯಾಮಿಸನ್‌ಗೂ ಸಹ ಸ್ಥಾನ ನೀಡಲಾಗಿದೆ. ಇದೇ ಮೊದಲ ಬಾರಿಗೆ ಟೆಸ್ಟ್‌ ತಂಡದಲ್ಲಿ ಜ್ಯಾಮಿಸನ್‌ ಸ್ಥಾನ ಪಡೆದಿದ್ದಾರೆ. ಇನ್ನು ಭಾರತ ಮೂಲದ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಸ್ಥಾನ ಪಡೆದಿದ್ದು, ತಂಡದಲ್ಲಿರುವ ಏಕೈಕ ಸ್ಪಿನ್ನರ್‌ ಎನಿಸಿದ್ದಾರೆ. ಆದರೆ ಮಿಚೆಲ್ ಸ್ಯಾಂಟ್ನರ್‌ ತಂಡದಿಂದ ಹೊರಬಿದ್ದಿದ್ದಾರೆ. 

ಟೇಲರ್‌ಗೆ 100ನೇ ಟೆಸ್ಟ್‌!

ವೆಲ್ಲಿಂಗ್ಟನ್‌ ಟೆಸ್ಟ್‌ ರಾಸ್‌ ಟೇಲರ್‌ ಪಾಲಿಗೆ 100ನೇ ಟೆಸ್ಟ್‌ ಆಗಲಿದೆ. ಈ ಮೈಲಿಗಲ್ಲು ತಲುಪಲಿರುವ ನ್ಯೂಜಿಲೆಂಡ್‌ನ 4ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸ್ಟೀಫನ್‌ ಫ್ಲೆಮಿಂಗ್‌, ಡೇನಿಯಲ್‌ ವೆಟ್ಟೋರಿ ಹಾಗೂ ಬ್ರೆಂಡನ್‌ ಮೆಕ್ಕಲಂ 100ಕ್ಕೂ ಹೆಚ್ಚು ಟೆಸ್ಟ್‌ ಆಡಲಿದ್ದಾರೆ.

ತಂಡ: ಕೇನ್‌ ವಿಲಿಯಮ್ಸನ್‌ (ನಾಯಕ), ಟಾಮ್‌ ಬ್ಲಂಡೆಲ್‌, ಟಾಮ್‌ ಲೇಥಮ್‌, ರಾಸ್‌ ಟೇಲರ್‌, ಹೆನ್ರಿ ನಿಕೋಲ್ಸ್‌, ಬಿ.ಜೆ.ವ್ಯಾಟ್ಲಿಂಗ್‌, ಕಾಲಿನ್‌ ಡಿ ಗ್ರಾಂಡ್‌ಹೋಮ್‌, ಡರೆಲ್‌ ಮಿಚೆಲ್‌, ಟ್ರೆಂಟ್‌ ಬೌಲ್ಟ್‌, ಟಿಮ್‌ ಸೌಥಿ, ಅಜಾಜ್‌ ಪಟೇಲ್‌, ಕೈಲ್‌ ಜ್ಯಾಮಿನಸ್‌, ನೀಲ್‌ ವ್ಯಾಗ್ನರ್‌.

Follow Us:
Download App:
  • android
  • ios