ದುಬೈ(ಫೆ.25): ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಲು ಯತ್ನಿಸಿದ್ದ ಒಮಾನ್‌ನ ಕ್ರಿಕೆಟಿಗ ಯೂಸುಫ್‌ ಅಬ್ದುಲ್‌ ರಹೀಂರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) 7 ವರ್ಷಗಳ ಕಾಲ ನಿಷೇಧಿಸಿದೆ. 

ಕ್ರಿಕೆಟ್‌ ಎನ್ನುವ ಜಂಟಲ್‌ಮನ್ ಕ್ರೀಡೆಗೆ ಕಳಂಕ ತಂದು ಮಣ್ಣು ತಿನ್ನುವ ಕೆಲಸ ಮಾಡಿದ ಆಟಗಾರನಿಗೆ ಐಸಿಸಿ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಫಿಕ್ಸಿಂಗ್‌ ನಡೆಸಲು ಯತ್ನಿಸಿದ್ದಾಗಿ ಯೂಸುಫ್‌ ತಪ್ಪೊಪ್ಪಿಕೊಂಡಿದ್ದಾರೆ ಎಂದು ಐಸಿಸಿ ತಿಳಿಸಿದೆ. 

3 ಪ್ರಸಿದ್ಧ ಚಿತ್ರನಟಿಯರ ಬಳಸಿ ಕೆಪಿಎಲ್‌ ಕ್ರಿಕೆಟಿಗರ ಹನಿಟ್ರ್ಯಾಪ್‌!

2019ರಲ್ಲಿ ಯುಎಇನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಅರ್ಹತಾ ಟೂರ್ನಿ ವೇಳೆ ಯೂಸುಫ್‌ ಮ್ಯಾಚ್‌ ಫಿಕ್ಸಿಂಗ್‌ಗೆ ಯತ್ನಿಸಿದ್ದರು. ಜತೆಗೆ ಇತರ ಆಟಗಾರರನ್ನು ಭ್ರಷ್ಟಾಚಾರದಲ್ಲಿ ತೊಡಗುವಂತೆ ಪ್ರಚೋದಿಸಿದ್ದರು ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.