ಲಂಡನ್‌(ಜ.12): ಕ್ರಿಕೆಟ್‌ ದೇವರು ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌, ಪ್ರತಿಷ್ಠಿತ ಲಾರೆಸ್‌ ಪ್ರಶಸ್ತಿ ಪಡೆಯಲು ಪೈಪೋಟಿಯಲ್ಲಿದ್ದಾರೆ. 

2000-2020ರ ವರೆಗಿನ ಅಗ್ರ 20 ಅತಿರೋಚಕ ಕ್ರೀಡಾಕ್ಷಣ ವಿಭಾಗದಲ್ಲಿ, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ಗೆದ್ದ ಬಳಿಕ ಭಾರತೀಯ ಆಟಗಾರರು ಸಚಿನ್‌ ತೆಂಡುಲ್ಕರ್‌ರನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದ ಕ್ಷಣ ನಾಮನಿರ್ದೇಶನಗೊಂಡಿದೆ. 

ಐಸಿಸಿ ಟಿ20 ಶ್ರೇಯಾಂಕ: 6ನೇ ಸ್ಥಾನ ಉಳಿಸಿಕೊಂಡ ರಾಹುಲ್‌ !

1983ರ ಏಕದಿನ ವಿಶ್ವಕಪ್  ನಂತರ ಬರೋಬ್ಬರಿ 28 ವರ್ಷಗಳ ಬಳಿಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ 2011ರಲ್ಲಿ ಶ್ರೀಲಂಕಾವನ್ನು ಮಣಿಸಿ ಐಸಿಸಿ ಏಕದಿನ ವಿಶ್ವಕಪ್ ಎತ್ತಿಹಿಡಿತ್ತು.  ಆರನೇ ಪ್ರಯತ್ನದಲ್ಲಿ ಸಚಿನ್ ತೆಂಡುಲ್ಕರ್ ಐಸಿಸಿ ಏಕದಿನ ವಿಶ್ವಕಪ್ ಎತ್ತಿಹಿಡಿಯುವಲ್ಲಿ ಸಫಲರಾಗಿದ್ದರು. ವಿಶ್ವಕಪ್ ಜಯಿಸಿದ ಬಳಿಕ ಮುಂಬೈನ ವಾಂಖೆಡೆ ಮೈದಾನದಲ್ಲಿ ಸಚಿನ್ ತೆಂಡುಲ್ಕರ್ ಅವರನ್ನು ಟೀಂ ಇಂಡಿಯಾ ಆಟಗಾರರು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದ್ದರು.  

ಕೊಹ್ಲಿ, ಅಖ್ತರ್ ಬಳಿಕ ಸಚಿನ್‌ರಿಂದಲೂ 4 ದಿನಗಳ ಟೆಸ್ಟ್ ಪಂದ್ಯಕ್ಕೆ ವಿರೋಧ

ಮೈಕಲ್‌ ಶೂಮಾಕರ್‌ ಪುತ್ರ ರೇಸಿಂಗ್‌ ಲೋಕಕ್ಕೆ ಪಾದಾರ್ಪಣೆ ಮಾಡಿದ ಕ್ಷಣ ಸೇರಿದಂತೆ ಒಟ್ಟು 20 ಅತಿರೋಚಕ ಕ್ಷಣಗಳನ್ನು ಅಂತಿಮ ಪಟ್ಟಿಯಲ್ಲಿ ಇರಿಸಲಾಗಿದೆ. ಜ.10ರಿಂದ ಫೆ.16ರ ವರೆಗೂ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಮತ ಹಾಕಬಹುದಾಗಿದೆ. ಅತಿಹೆಚ್ಚು ಮತಗಳನ್ನು ಪಡೆಯುವ ಕ್ರೀಡಾಪಟುವಿಗೆ ಫೆ.17ರಂದು ಜರ್ಮನಿಯ ಬರ್ಲಿನ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವೇಳೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.