Asianet Suvarna News Asianet Suvarna News

KPL ಫಿಕ್ಸಿಂಗ್ ; ಸಿಸಿಬಿ ಅಧಿಕಾರಿಗಳಿಂದ ಬಿಜಾಪುರ ಬುಲ್ಸ್ ಮಾಲೀಕನ ವಿಚಾರಣೆ!

ಕೆಪಿಎಲ್ ಫಿಕ್ಸಿಂಗ್ ಆಳ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿರುವ ಕೆಪಿಎಲ್ ಫಿಕ್ಸಿಂಗ್ ಇದೀಗ ಬಿಜಾಪುರ ಬುಲ್ಸ್ ಮಾಲೀಕನ ವಿಚಾರಣೆಯನ್ನು ಸಿಸಿಬಿ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.

KPL fixing ccb police sent notice to bijapur bulls owner kiran kattimani
Author
Bengaluru, First Published Nov 27, 2019, 10:23 AM IST

ಬೆಂಗಳೂರು(ನ.27): ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಫಿಕ್ಸಿಂಗ್ ಪ್ರಕರಣ ಅಗೆದಷ್ಟು ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಫಿಕ್ಸಿಂಗ್ ಜಾಲ ಹಾಗೂ ಬುಕ್ಕಿಗಳ ನಂಟು ವಿಸ್ತಾರವಾಗುತ್ತಿದೆ. ತನಿಖೆ ಚುರುಕುಗೊಳಿಸಿರುವ ಸಿಸಿಬಿ ಇದೀಗ ಬಿಜಾಪುರ ಬುಲ್ಸ್ ಮಾಲೀಕನ ವಿಚಾರಣೆ ನಡೆಸುತ್ತಿದೆ.  

ಇದನ್ನೂ ಓದಿ: KPL ಫಿಕ್ಸಿಂಗ್: ಬೆಂಗಳೂರು ಬ್ಲಾಸ್ಟರ್ ಕೋಚ್, ಆಟಗಾರನಿಗೆ ಪೊಲೀಸ್ ನೋಟೀಸ್!

ಫಿಕ್ಸಿಂಗ್ ಆರೋಪದ ಮೇಲೆ ಬಿಜಾಪುರ ಬುಲ್ಸ್ ಮಾಲೀಕ ಕಿರಣ್ ಕಟ್ಟೀಮನಿ ವಿಚಾರಣೆ ತೀವ್ರ ಗೊಳಿಸಿದೆ. ಮಂಗಳವಾರ(ನ.26) ಸತತ 3 ಗಂಟೆ ವಿಚಾರಣೆ ನಡೆಸಿದ್ದ ಸಿಸಿಬಿ ಅಧಿಕಾರಿಗಳು, ಇಂದು(ನ.27) ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ. 

ಇದನ್ನೂ ಓದಿ: KPL ಫಿಕ್ಸಿಂಗ್: ಹೆಣ್ಣಿನ ಆಸೆಗೆ ಮಣ್ಣು ತಿಂದ್ರಾ ಕ್ರಿಕೆಟರ್ಸ್?

ಫಿಕ್ಸಿಂಗ್‌ನಲ್ಲಿ ಬಿಜಾಪುರ ಬುಲ್ಸ್ ಭಾಗಿಯಾಗಿರುವ ಆರೋಪದ ಹಿನ್ನಲೆಯಲ್ಲಿ ಮಾಲೀಕ ಕಟ್ಟೀಮನಿ ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಹಲವು ಕ್ರಿಕೆಟಿಗರು ಅರೆಸ್ಟ್ ಆಗಿದ್ದು, ಹಲವರಿಗೆ ನೊಟೀಸ್ ನೀಡಲಾಗಿದೆ. ಇನ್ನು ತನಿಖೆ ಪೂರ್ಣಗೊಳ್ಳುವ ವರೆಗೆ ಕೆಪಿಎಲ್ ಟೂರ್ನಿಯನ್ನು ಅಮಾನತ್ತಿನಲ್ಲಿಡಲಾಗಿದೆ.

KPL ಫಿಕ್ಸಿಂಗ್ ಕುರಿತ ಸ್ಫೋಟಕ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios