Asianet Suvarna News Asianet Suvarna News

ಟೆಸ್ಟ್‌ ತಂಡಕ್ಕೆ ಮತ್ತೆ ರಾಹುಲ್‌ಗೆ ಸ್ಥಾನ?

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಧ್ಬುತ ಫಾರ್ಮ್‌ನಲ್ಲಿರುವ ಕೆ ಎಲ್ ರಾಹುಲ್ ಇದೀಗ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್ ಸರಣಿಗೆ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

KL Rahul likely to make Test comeback against New Zealand Series
Author
Bengaluru, First Published Jan 19, 2020, 11:17 AM IST

ಬೆಂಗಳೂರು(ಜ.19): ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯದ್ಭುತ ಲಯದಲ್ಲಿರುವ ಕೆ.ಎಲ್‌. ರಾಹುಲ್‌ ಮುಂಬರುವ ನ್ಯೂಜಿಲೆಂಡ್‌ ಪ್ರವಾಸದಲ್ಲಿ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಈ ಮಧ್ಯೆ ಏಕದಿನ ಮತ್ತು ಟೆಸ್ಟ್‌ ತಂಡಗಳ ಆಯ್ಕೆಗೂ ಮುನ್ನ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಫಿಟ್ನೆಸ್‌ ಪರಿಗಣಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಭಾನುವಾರ ನ್ಯೂಜಿಲೆಂಡ್‌ ಪ್ರವಾಸಕ್ಕೆ ಟೆಸ್ಟ್‌ ಹಾಗೂ ಏಕದಿನ ತಂಡಗಳ ಆಯ್ಕೆ ನಡೆಯಲಿದೆ.

ಭಾರತ ವಿರುದ್ಧ ಟಿ20ಗೆ ಬಲಿಷ್ಠ ನ್ಯೂಜಿಲೆಂಡ್‌ ತಂಡ ಪ್ರಕಟ

ಕಳೆದ ಕೆಲ ಸರಣಿಗಳಿಂದ ಕನ್ನಡಿಗ ಕೆ.ಎಲ್‌. ರಾಹುಲ್‌ ಟಿ20 ಮತ್ತು ಏಕದಿನ ಮಾದರಿಯಲ್ಲಿ ಶ್ರೇಷ್ಠ ಲಯದಲ್ಲಿದ್ದಾರೆ. ಆದರೆ ಆಸ್ಪ್ರೇಲಿಯಾ ಪ್ರವಾಸದ ನಂತರ ಟೆಸ್ಟ್‌ ತಂಡದಲ್ಲಿ ರಾಹುಲ್‌ ಸ್ಥಾನ ಪಡೆದಿಲ್ಲ. ಯಾವುದೇ ತಂಡದಿಂದ ರಾಹುಲ್‌ ಅವರಂತಹ ಆಟಗಾರರನ್ನು ಕೈಬಿಡುವುದು ತುಂಬಾ ಕಠಿಣದ ವಿಚಾರ ಎಂದು ಸ್ವತಃ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಟೆಸ್ಟ್‌ನ ಆರಂಭಿಕ ಮೀಸಲು ಆಟಗಾರ ಪೃಥ್ವಿ ಶಾ ಮತ್ತು ಶುಭ್‌ಮನ್‌ ಗಿಲ್‌ಗಿಂತ ರಾಹುಲ್‌ ಉತ್ತಮ ಆಯ್ಕೆ ಎನ್ನುವ ಅಭಿಪ್ರಾಯವನ್ನು ನಾಯಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಹುಲ್‌ ಟೆಸ್ಟ್‌ ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ.

ನ್ಯೂಜಿಲೆಂಡ್ ಪ್ರವಾಸಕ್ಕೆ ಬಲಿಷ್ಠ ಭಾರತ ತಂಡ ಪ್ರಕಟ!

ಉದಯೋನ್ಮುಖ ಮಧ್ಯಮ ವೇಗಿ ನವ್‌ದೀಪ್‌ ಸೈನಿ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯಬಹುದಾದ ಮತ್ತೊಬ್ಬ ಆಟಗಾರ ಎನಿಸಿದ್ದಾರೆ. ಇದರ ಮಧ್ಯೆ ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಲು ಹಾತೊರೆಯುತ್ತಿರುವ ಹಾರ್ದಿಕ್‌ ಪಾಂಡ್ಯ ಏಕದಿನ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಆದರೆ ಇದು ಅವರ ಫಿಟ್ನೆಸ್‌ ಅನ್ನು ಅವಲಂಭಿಸಿದೆ. ಒಂದು ವೇಳೆ ಫಿಟ್ನೆಸ್‌ ಸಾಬೀತುಪಡಿಸಲು ಹಾರ್ದಿಕ್‌ ವಿಫಲಗೊಂಡರೆ ಸೂರ್ಯಕುಮಾರ್‌ ಯಾದವ್‌ ಅವರನ್ನು ಪರಿಗಣಿಸುವ ನಿರೀಕ್ಷೆ ಇದೆ.

 

Follow Us:
Download App:
  • android
  • ios