Asianet Suvarna News Asianet Suvarna News

ಸೀಮಿತ ಓವರ್ ಕ್ರಿಕೆಟ್‌ನಲ್ಲಿ 10 ವಿಕೆಟ್ ಕಬಳಿಸಿ ದಾಖಲೆ ಬರೆದ ಬೌಲರ್!

ಅನಿಲ್ ಕುಂಬ್ಳೆ, ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಬಳಿಕ ದೇಸಿ ಕ್ರಿಕೆಟ್‌ನಲ್ಲಿ ಕೆಲ ಬೌಲರ್‌ಗಳು ಈ ಸಾಧನೆ ಮಾಡಿದ್ದಾರೆ. ಇದೀಗ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಎದುರಾಳಿಗಳ 10 ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಅನ್ನೋ ದಾಖಲೆಗೆ ಪಾತ್ರರಾಗಿದ್ದಾರೆ. 

Kashvee Gautam bags 10 wickets in a one-day women game
Author
Bengaluru, First Published Feb 27, 2020, 9:49 AM IST

ಕಡಪ(ಫೆ.27): ಚಂಢೀಗಡ ಅಂಡರ್‌-19 ತಂಡದ ನಾಯಕಿ ಕಾಶ್ವಿ ಗೌತಮ್‌ ಮಂಗಳವಾರ ಸೀಮಿತ ಓವರ್‌ ಕ್ರಿಕೆಟ್‌ ಪಂದ್ಯದಲ್ಲಿ 10 ವಿಕೆಟ್‌ ಕಬಳಿಸಿದ ಭಾರತದ ಮೊದಲ ಬೌಲರ್‌ ಎನ್ನುವ ದಾಖಲೆ ಬರೆದರು. ಇಲ್ಲಿ ನಡೆದ ಅಂಡರ್‌-19 ಏಕದಿನ ಟ್ರೋಫಿಯ ಪಂದ್ಯದಲ್ಲಿ ಅರುಣಾಚಲ ಪ್ರದೇಶವನ್ನು 25 ರನ್‌ಗೆ ಆಲೌಟ್‌ ಮಾಡಲು ಕಾಶ್ವಿ ಕೇವಲ 29 ಎಸೆತಗಳನ್ನು ತೆಗೆದುಕೊಂಡರು.

ಇದನ್ನೂ ಓದಿ: ಭಾರತೀಯಳ ಜೊತೆ ಆಸೀಸ್ ಕ್ರಿಕೆಟಿಗ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥ!.

ಬಲಗೈ ವೇಗಿಯಾಗಿರುವ ಕಾಶ್ವಿ, 4.5 ಓವರಲ್ಲಿ 12 ರನ್‌ಗೆ 10 ವಿಕೆಟ್‌ ಕಿತ್ತರು. ಅವರ ಈ ಅಮೋಘ ಪ್ರದರ್ಶನದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಸಹ ಇತ್ತು. ಮತ್ತೊಂದು ಆಸಕ್ತಿದಾಯಕ ವಿಚಾರವೆಂದರೆ ಕಾಶ್ವಿಗೆ 10 ವಿಕೆಟ್‌ ಸಾಧನೆ ಮಾಡಲು ಯಾವ ಫೀಲ್ಡರ್‌ಗಳ ಸಹಾಯವೂ ಬೇಕಾಗಲಿಲ್ಲ. ನಾಲ್ವರನ್ನು ಬೌಲ್ಡ್‌ ಮಾಡಿದ ಕಾಶ್ವಿ, 6 ಆಟಗಾರ್ತಿಯರನ್ನು ಎಲ್‌ಬಿ ಬಲೆಗೆ ಕೆಡವಿದರು.

 

ಪಾಕಿಸ್ತಾನ ವಿರುದ್ಧ ಅನಿಲ್‌ ಕುಂಬ್ಳೆ, ದಕ್ಷಿಣ ವಲಯದ ವಿರುದ್ಧ ದೇಬಾಶಿಶ್‌ ಮೊಹಾಂತಿ, ಮಿಜೋರಾಮ್‌ ವಿರುದ್ಧ ರಣಜಿ ಪಂದ್ಯದಲ್ಲಿ ಮಣಿಪುರದ ರೆಕ್ಸ್‌ ಸಿಂಗ್‌ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಕಬಳಿಸಿದ್ದರು. ಆದರೆ ಅವರೆಲ್ಲಾ ಪ್ರಥಮ ದರ್ಜೆ ಮಾದರಿಯಲ್ಲಿ ಸಾಧನೆಗೈದಿದ್ದರು.

Follow Us:
Download App:
  • android
  • ios