ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದ ಎಡಗೈ ಮಾರಕ ವೇಗಿ ಮಿಚೆಲ್ ಸ್ಟಾರ್ಕ್!
ಆಸೀಸ್ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ 11.75 ಕೋಟಿ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.
ಜೆಡ್ಡಾ: ಆಸ್ಟ್ರೇಲಿಯಾ ಮೂಲದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಮಿಚೆಲ್ ಸ್ಟಾರ್ಕ್ ಅವರನ್ನು ಡೆಲ್ಲಿ ಫ್ರಾಂಚೈಸಿಯು 11.75 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದಾಖಲೆಯ 24.75 ಕೋಟಿ ರುಪಾಯಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗಿದ್ದ ಮಿಚೆಲ್ ಸ್ಟಾರ್ಕ್ ಅವರನ್ನು ಖರೀದಿಸಲು ಆರ್‌ಸಿಬಿ, ಕೆಕೆಆರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ನಡೆಯಿತು. ಇನ್ನೇನು ಸ್ಟಾರ್ಕ್ ಆರ್‌ಸಿಬಿ ತೆಕ್ಕೆಗೆ ಜಾರಿದರು ಎನ್ನುವಷ್ಟರಲ್ಲಿ ಕೊನೆಯ ಕ್ಷಣದಲ್ಲಿ ಬಿಡ್ ಮಾಡಿದ ಡೆಲ್ಲಿ ಫ್ರಾಂಚೈಸಿ 11.75 ಕೋಟಿ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
SOLDDDD! 🔥
— IndianPremierLeague (@IPL) November 24, 2024
Mitchell Starc goes to @DelhiCapitals for INR 11.75 Crore ⚡️⚡️ #TATAIPLAuction
ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಸ್ಟಾರ್ಕ್ ಖರೀದಿಸಲು ಸಾಕಷ್ಟು ಪೈಪೋಟಿ ಮೂಡಿ ಬಂದಿತು. ಆದರೆ ಕೊನೆಗೆ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು.
ದೆಹಲಿ ಕ್ಯಾಪಿಟಲ್ಸ್ ಉಳಿಸಿಕೊಂಡ ಆಟಗಾರರು : ಅಕ್ಷರ್ ಪಟೇಲ್ - 16.5 ಕೋಟಿ, ಕುಲ್ದೀಪ್ ಯಾದವ್ - 13.25 ಕೋಟಿ, ಟ್ರಿಸ್ಟನ್ ಸ್ಟಬ್ಸ್ - 10 ಕೋಟಿ, ಅಭಿಷೇಕ್ ಪೊರೆಲ್ - 4 ಕೋಟಿ