Asianet Suvarna News Asianet Suvarna News

IPL 2024 Qualifier 2: ಸನ್‌ರೈಸರ್ಸ್‌ ಎದುರು ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ

ರಾಜಸ್ಥಾನ ಹಾಗೂ ಹೈದರಾಬಾದ್‌ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಚೆಪಾಕ್ ಮೈದಾನ ಆತಿಥ್ಯ ವಹಿಸಿದೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದಿನ ಪಂದ್ಯಕ್ಕೆ ಕಣಕ್ಕಿಳಿದಿದೆ. ಇನ್ನೊಂದೆಡೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಕೂಡಾ ಯಾವುದೇ ಬದಲಾವಣೆ ಮಾಡಿಲ್ಲ.

IPL 2024 Qualifier 2 Rajasthan Royals win the toss and elect to bowl first Sunrisers Hyderabad kvn
Author
First Published May 24, 2024, 7:10 PM IST

ಚೆನ್ನೈ: 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎರಡನೇ ಕ್ವಾಲಿಫೈಯರ್ಸ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ಮುಖಾಮುಖಿಯಾಗಿದ್ದು, ಗೆಲ್ಲುವ ತಂಡ ಫೈನಲ್‌ ಪ್ರವೇಶಿಸಲಿದೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.

ರಾಜಸ್ಥಾನ ಹಾಗೂ ಹೈದರಾಬಾದ್‌ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಚೆಪಾಕ್ ಮೈದಾನ ಆತಿಥ್ಯ ವಹಿಸಿದೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದಿನ ಪಂದ್ಯಕ್ಕೆ ಕಣಕ್ಕಿಳಿದಿದೆ. ಇನ್ನೊಂದೆಡೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಏಯ್ಡನ್ ಮಾರ್ಕ್‌ರಮ್ ಹಾಗೂ ಜಯದೇವ್ ಉನಾದ್ಕತ್ ತಂಡ ಕೂಡಿಕೊಂಡಿದ್ದಾರೆ

ಆರ್‌ಸಿಬಿ ಕಂಡು ಉರಿದುಕೊಳ್ಳುವವರ ನಡುವೆ ಸ್ಮರಿಸಿಕೊಳ್ಳುವಂತ ಸಂದೇಶ ಸಾರಿದ ನಿಕೋಲಸ್ ಪೂರನ್..!

ಸನ್‌ರೈಸರ್ಸ್‌ ಆಕ್ರಮಣಕಾರಿ ಆಟದ ಮೂಲಕವೇ ಗಮನ ಸೆಳೆಯುತ್ತಿದೆ. ಆದರೆ ಚೆನ್ನೈ ಪಿಚ್‌ ಬೌಲಿಂಗ್‌ ಸ್ನೇಹಿಯಾಗಿರುವ ಕಾರಣ ತಂಡ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲಿದೆ.

ತಲಾ 2 ಬಾರಿ ಫೈನಲ್‌ ಪ್ರವೇಶಿಸಿರುವ ಇತ್ತಂಡ

ರಾಜಸ್ಥಾನ ಹಾಗೂ ಸನ್‌ರೈಸರ್ಸ್‌ ತಂಡಗಳು 3ನೇ ಬಾರಿ ಫೈನಲ್‌ಗೇರಲು ಕಾತರಿಸುತ್ತಿವೆ. 2008ರ ಚೊಚ್ಚಲ ಆವೃತ್ತಿಯ ಚಾಂಪಿಯನ್‌ ರಾಜಸ್ಥಾನ 2022ರಲ್ಲೂ ಫೈನಲ್‌ಗೇರಿತ್ತು. ಸನ್‌ರೈಸರ್ಸ್‌ 2016ರಲ್ಲಿ ಪ್ರಶಸ್ತಿ ಗೆದ್ದು, 2018ರಲ್ಲಿ ಫೈನಲ್‌ನಲ್ಲಿ ಸೋತಿತ್ತು.

ಕೋಟ್ಯಾಂತರ ಫ್ಯಾನ್ಸ್ ನಂಬಿಕೆ ಕ್ಷಣಾರ್ಧದಲ್ಲಿ ನುಚ್ಚುನೂರು ಮಾಡಿದ ಆರ್‌ಸಿಬಿ ಈ ಆಟಗಾರ..!

ಉಭಯ ತಂಡಗಳ ಆಟಗಾರರ ಪಟ್ಟಿ

ರಾಜಸ್ಥಾನ: ಯಶಸ್ವಿ ಜೈಸ್ವಾಲ್‌, ಟಾಮ್ ಕೊಹ್ಲೆರ್‌, ಸಂಜು ಸ್ಯಾಮ್ಸನ್(ನಾಯಕ), ರಿಯಾನ್‌ ಪರಾಗ್, ರೋವ್ಮನ್ ಪೊವೆಲ್‌, ಧೃವ್ ಜುರೆಲ್‌, ರವಿಚಂದ್ರನ್ ಅಶ್ವಿನ್‌, ಟ್ರೆಂಟ್ ಬೌಲ್ಟ್‌, ಸಂದೀಪ್‌ ಶರ್ಮಾ, ಆವೇಶ್‌ ಖಾನ್, ಯುಜುವೇಂದ್ರ ಚಹಲ್‌.

ಹೈದ್ರಾಬಾದ್‌: ಟ್ರ್ಯಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್‌ರಮ್, ಹೆನ್ರಿಚ್ ಕ್ಲಾಸೆನ್‌, ನಿತೀಶ್‌ ರೆಡ್ಡಿ, ಅಬ್ದುಲ್ ಸಮದ್‌, ಪ್ಯಾಟ್ ಕಮಿನ್ಸ್(ನಾಯಕ), ಭುವನೇಶ್ವರ್‌ ಕುಮಾರ್, ಟಿ ನಟರಾಜನ್‌, ಜಯದೇವ್ ಉನಾದ್ಕತ್.

Latest Videos
Follow Us:
Download App:
  • android
  • ios