ಆರ್‌ಸಿಬಿ ಎದುರು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ; ಬೆಂಗಳೂರು ತಂಡದಲ್ಲಿ ಮಹತ್ವದ ಬದಲಾವಣೆ
ಆರ್‌ಸಿಬಿ ಹಾಗೂ ಮುಂಬೈ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯ ವಹಿಸಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ.
ಮುಂಬೈ(ಏ.11): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಆರ್‌ಸಿಬಿ ಹಾಗೂ ಮುಂಬೈ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯ ವಹಿಸಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ಹೌದು, ಮುಂಬೈ ತಂಡದಲ್ಲಿ ಶ್ರೇಯಸ್ ಗೋಪಾಲ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದು, ಪೀಯೂಸ್ ಚಾವ್ಲಾ ಹೊರಬಿದ್ದಿದ್ದಾರೆ.
ಮುಂಬೈ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಪ್ರಕಟ: ಬೆಂಗಳೂರು ತಂಡದಲ್ಲಿ ಮೂರು ಮೇಜರ್ ಚೇಂಜ್ ಫಿಕ್ಸ್
Toss News - @mipaltan have won the toss and elect to bowl first against @RCBTweets.
— IndianPremierLeague (@IPL) April 11, 2024
Live - https://t.co/7yWt2ui23H #TATAIPL #IPL2024 #MIvRCB pic.twitter.com/ajXbJkD7MB
ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿರುವ ಆರ್‌ಸಿಬಿ ತಂಡದಲ್ಲಿ ಮೂರು ಬದಲಾವಣೆ ಮಾಡಿದ್ದು, ವಿಲ್ ಜೇಕ್ಸ್ ಆರ್‌ಸಿಬಿ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಕನ್ನಡದ ವೇಗಿ ವೈಶಾಕ್ ವಿಜಯ್ ಕುಮಾರ್ ಹಾಗೂ ಮಹಿಪಾಲ್ ಲೋಮ್ರಾರ್, ಆಕಾಶ್‌ದೀಪ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಕ್ಯಾಮರೋನ್ ಗ್ರೀನ್, ಮಯಾಂಕ್ ದಾಗರ್, ಯಶ್ ದಯಾಳ್ ಹಾಗೂ ಸೌರವ್ ಚೌಹ್ಹಾಣ್ ತಂಡದಿಂದ ಹೊರಬಿದ್ದಿದ್ದಾರೆ.
ಉಭಯ ತಂಡಗಳ ಆಟಗಾರರ ಪಟ್ಟಿ ಹೀಗಿದೆ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ವಿಲ್ ಜ್ಯಾಕ್ಸ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೊರ್, ರೀಸ್ ಟಾಪ್ಲಿ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ,ವೈಶಾಕ್ ವಿಜಯ್‌ಕುಮಾರ್.
Match 25. Royal Challengers Bengaluru XI: V. Kohli, F. du Plessis(c), W. Jacks, R. Patidar, G. Maxwell, D. Karthik(w), M. Lomror, R. Topley, V. Vyshak, M. Siraj, A. Deep https://t.co/Xzvt86cbvi #TATAIPL #IPL2024 #MIvRCB
— IndianPremierLeague (@IPL) April 11, 2024
ಮುಂಬೈ: ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ತಿಲಕ್ ವರ್ಮಾ, ಟಿಮ್ ಡೇವಿಡ್, ಶೆಫರ್ಡ್, ಮೊಹಮದ್ ನಬಿ, ಗೆರಾಲ್ಡ್ ಕೋಟ್ಜೀ, ಶ್ರೇಯಸ್ ಗೋಪಾಲ್, ಜಸ್ಪ್ರೀತ್ ಬುಮ್ರಾ, ಆಕಾಶ್ ಮಧ್ವಾಲ್.
Match 25. Mumbai Indians XI: R. Sharma, I. Kishan(w), T. Varma, H. Pandya(c), T. David, R. Shepherd, M. Nabi, S. Gopal, J. Bumrah, G. Coetzee, A. Madhwal https://t.co/Xzvt86cbvi #TATAIPL #IPL2024 #MIvRCB
— IndianPremierLeague (@IPL) April 11, 2024
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ