Asianet Suvarna News Asianet Suvarna News

IPL 2020: ಟೂರ್ನಿ ಆರಂಭಕ್ಕೂ ಮೊದಲೇ ದಾಖಲೆ ಬರೆದ ಮುಂಬೈ ಇಂಡಿಯನ್ಸ್!

IPL 2020 ಟೂರ್ನಿಗೆ 8 ಫ್ರಾಂಚೈಸಿಗಳು ತಯಾರಿ ಆರಂಭಿಸಿವೆ. ಮಾರ್ಚ್ 29 ರಿಂದ ಟೂರ್ನಿ ಆರಂಭಗೊಳ್ಳಲಿದೆ. ಇದೀಗ  ಟೂರ್ನಿ ಆರಂಭಕ್ಕೆ ಒಂದೂವರೆ ತಿಂಗಳು ಮೊದಲೇ ಮುಂಬೈ ಇಂಡಿಯನ್ಸ್ ದಾಖಲೆ ಬರೆದಿದೆ. MI ಫ್ರಾಂಚೈಸಿ ದಾಖಲೆ ವಿವರ ಇಲ್ಲಿದೆ. 

IPL 2020 Mumbai Indians bags 100 crore sponsorship
Author
Bengaluru, First Published Feb 11, 2020, 7:33 PM IST

ಮುಂಬೈ(ಫೆ.11): IPL 2020 ಟೂರ್ನಿಗೆ ಬಿಸಿಸಿಐ ಸಿದ್ದತೆ ಚುರುಕುಗೊಂಡಿದೆ. ಇತ್ತ ಫ್ರಾಂಚೈಸಿ ಕೂಡ ತರಬೇತಿ ಶಿಬಿರ ಆಯೋಜಿಸಿದೆ. ತೀವ್ರ ಕುತೂಹಲ ಕೆರಳಿಸಿರುವ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಟೂರ್ನಿ ಆರಂಭಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದೆ. ಈಗಲೇ ಮುಂಬೈ ಇಂಡಿಯನ್ಸ್ ಪ್ರಾಯೋಜಕತ್ವದಲ್ಲಿ ದಾಖಲೆ ಬರೆದಿದೆ.

ಇದನ್ನೂ ಓದಿ: IPL 2020: ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ಫುಲ್ ಲಿಸ್ಟ್!.

ಮುಂಬೈ ಇಂಡಿಯನ್ಸ್ 2020ರ ಐಪಿಎಲ್ ಟೂರ್ನಿಗೆ ಬರೋಬ್ಬರಿ 100 ಕೋಟಿ ರೂಪಾಯಿ ಪ್ರಾಯೋಜಕತ್ವ ಪಡೆದಿದೆ.  ಮೆರಿಯೆಟ್ ಬೊನ್ವೊಯ್ ಹಾಗೂ ಅಸ್ಟ್ರಾಲ್ ಪೈಪ್ಸ್,  ಮಂಬೈ ಇಂಡಿಯನ್ಸ್‌ಗೆ 100 ಕೋಟಿ ರೂಪಾಯಿ ನೀಡಿದೆ. ಸ್ಪಾನ್ಸರ್ ಮೂಲಕ 100 ಕೋಟಿ ರೂಪಾಯಿ ಪಡೆಯುತ್ತಿರುವ ಮೊದಲ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್.  

ಇದನ್ನೂ ಓದಿ: 2020ರ IPL ಆಡಲು ಸಜ್ಜಾದ ಕೈ ಪೋ ಚೆ ಚಿತ್ರದ ಬಾಲ ನಟ!

ಮೆರಿಯಟ್ ಬೋನ್ವೊಯ್ ಮುಂಬೈ ಇಂಡಿಯನ್ಸ್ ಜೊತೆ 3 ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಇದುವರೆಗಿನ ಮುಂಬೈ ಇಂಡಿಯನ್ಸ್ ಗರಿಷ್ಠ ಒಪ್ಪಂದ 75 ಕೋಟಿ ರೂಪಾಯಿ, ಸಾಮ್ಸಂಗ್ 3 ವರ್ಷಗಳಿಗೆ 75 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿತ್ತು. 2019ರ ಐಪಿಎಲ್ ಟೂರ್ನಿಗೆ ಸಾಮ್ಸಂಗ್ ಒಪ್ಪಂದ ಮುಗಿದಿದೆ. 

ಐಪಿಎಲ್ ಫ್ರಾಂಚೈಸಿಗಳ ಪೈಕಿ ಗರಿಷ್ಠ ಬ್ರ್ಯಾಂಡ್ ವಾಲ್ಯೂ ಹೊಂದಿರುವ ತಂಡ ಅನ್ನೋ ಹೆಗ್ಗಳಿಕೆಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ.  2019ರ ವೇಳೆಗೆ ಮುಂಬೈ ಇಂಡಿಯನ್ಸ್ ಬ್ರ್ಯಾಂಡ್ ಮೌಲ್ಯ ಬರೋಬ್ಬರಿ 809 ಕೋಟಿ ರೂಪಾಯಿ ದಾಟಿತ್ತು. ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಾಲೀಕತ್ವದ ಮುಂಬೈ ಇಂಡಿಯನ್ಸ್ ಇದೀಗ ಪ್ರಾಯೋಜಕತ್ವದಲ್ಲೂ ಶ್ರೀಮಂತಿಕೆ ಉಳಿಸಿಕೊಂಡಿದೆ. 
 

Follow Us:
Download App:
  • android
  • ios