ಇತರ ಆಟಗಾರರು ಕೂಡಾ ನೆಟ್ಸ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಅತ್ತ ಇಂಗ್ಲೆಂಡ್ ಆಟಗಾರರು 10 ದಿನಗಳಿಂದ ಅಬು ಧಾಬಿಯಲ್ಲಿ ಅಭ್ಯಾಸ ನಡೆಸಿದ್ದು, ಭಾನುವಾರ ಹೈದರಾಬಾದ್‌ಗೆ ಆಗಮಿಸಿದ್ದಾರೆ. ಸೋಮವಾರದಿಂದ ಇಂಗ್ಲೆಂಡ್ ಆಟಗಾರರು ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಹೈದರಾಬಾದ್(ಜ.22): ಇಂಗ್ಲೆಂಡ್ ವಿರುದ್ಧ ಜ.25ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಮಹತ್ವದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಈಗಾಗಲೇ ತಂಡದ ಆಟಗಾರರು ಜ.20ರಂದೇ ಹೈದರಾಬಾದ್‌ನಲ್ಲಿ ಒಂದುಗೂಡಿದ್ದು, ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ತಂಡದ ನಾಯಕ ರೋಹಿತ್ ಶರ್ಮಾ ನೆಟ್ಸ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಇತರ ಆಟಗಾರರು ಕೂಡಾ ನೆಟ್ಸ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಅತ್ತ ಇಂಗ್ಲೆಂಡ್ ಆಟಗಾರರು 10 ದಿನಗಳಿಂದ ಅಬು ಧಾಬಿಯಲ್ಲಿ ಅಭ್ಯಾಸ ನಡೆಸಿದ್ದು, ಭಾನುವಾರ ಹೈದರಾಬಾದ್‌ಗೆ ಆಗಮಿಸಿದ್ದಾರೆ. ಸೋಮವಾರದಿಂದ ಇಂಗ್ಲೆಂಡ್ ಆಟಗಾರರು ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
Breaking: ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಟೆಸ್ಟ್‌ಗೆ ಭಾರತ ತಂಡ ಪ್ರಕಟ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಜನವರಿ 25ರಿಂದ ಹೈದರಾಬಾದ್‌ನಲ್ಲಿ ಆರಂಭವಾಗಲಿದೆ. ಇನ್ನು ಇದಾದ ಬಳಿಕ ವೈಜಾಗ್, ರಾಜ್‌ಕೋಟ್, ರಾಂಚಿ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಮಾರ್ಚ್ 7-11ರ ವರೆಗೆ ಧರ್ಮಶಾಲಾದಲ್ಲಿ ನಡೆಯಲಿದೆ.
ಇಂಗ್ಲೆಂಡ್ ಎದುರಿನ ಮೊದಲೆರಡು ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್ ಗಿಲ್, ಯಶಸ್ವಿಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಕೆಎಸ್ ಭರತ್ (ವಿ.ಕೀ), ಧ್ರುವ್ ಜುರೆಲ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.
ಭಾರತ ಎದುರಿನ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:
ಬೆನ್ ಸ್ಟೋಕ್ಸ್(ನಾಯಕ), ರೆಹಾನ್ ಅಹಮ್ಮದ್, ಜೇಮ್ಸ್ ಆಂಡರ್‌ಸನ್, ಗುಸ್ ಅಟ್ಕಿನ್‌ಸನ್, ಜಾನಿ ಬೇರ್‌ಸ್ಟೋವ್, ಶೋಯೆಬ್ ಬಷೀರ್, ಹ್ಯಾರಿ ಬ್ರೂಕ್, ಜಾಕ್ ಕ್ರಾವ್ಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜಾಕ್ ಲೀಚ್, ಓಲಿ ಪಾಪ್, ಓಲಿ ರಾಬಿನ್‌ಸನ್, ಜೋ ರೂಟ್, ಮಾರ್ಕ್ ವುಡ್.
