Asianet Suvarna News Asianet Suvarna News

ಕೊರೋನಾ ಹೋರಾಟಕ್ಕೆ ಸುನಿಲ್‌ ಗವಾಸ್ಕರ್‌ 59 ಲಕ್ಷ ದೇಣಿಗೆ..!

ಕೊರೋನಾ ವೈರಸ್‌ ಸಂಕಷ್ಟಕ್ಕೆ ಈಗಾಗಲೇ ಹಲವು ಕ್ರೀಡಾ ತಾರೆಯರು ಪಿಎಂ ಕೇರ್ಸ್‌ಗೆ ದೇಣಿಗೆ ನೀಡಿದ್ದಾರೆ. ಇದೀಗ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ಚೇತೇಶ್ವರ್ ಪೂಜಾರ ದೇಣಿಗೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

Former Cricketer Sunil Gavaskar Donates Rs 59 Lakh Cheteshwar Pujara Contributes Unspecified Sum Amount to PM CARES Fund
Author
New Delhi, First Published Apr 8, 2020, 9:50 AM IST

ನವದೆಹಲಿ(ಏ.08): ಕೊರೋನಾ ನಿಗ್ರಹಕ್ಕಾಗಿ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌ ಹಾಗೂ ಟೆಸ್ಟ್‌ ಕ್ರಿಕೆಟಿಗ ಚೇತೇಶ್ವರ್‌ ಪೂಜಾರ ಮಂಗಳವಾರ ಕೇಂದ್ರಕ್ಕೆ ಹಣಕಾಸಿನ ನೆರವು ನೀಡಿದ್ದಾರೆ. ಆದರೆ ಈ ಇಬ್ಬರು ಎಷ್ಟು ದೇಣಿಗೆ ನೀಡಿದ್ದೇವೆ ಎಂದು ಮಾಹಿತಿ ಬಹಿರಂಗ ಪಡಿಸಿರಲಿಲ್ಲ.

ಗವಾಸ್ಕರ್‌ ಅವರು PM Cares ನಿಧಿಗೆ 35 ಲಕ್ಷ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ 24 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ ಎಂದು ಮುಂಬೈ ತಂಡದ ಮಾಜಿ ನಾಯಕ ಅಮೋಲ್‌ ಮುಜುಮ್ದಾರ್‌ ಟ್ವೀಟ್‌ ಮಾಡಿದ್ದಾರೆ.

ಇನ್ನು ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಕೂಡಾ ದೇಣಿಗೆ ನೀಡುವ ಮೂಲಕ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸುರೇಶ್ ರೈನಾ, ಅಜಿಂಕ್ಯ ರಹಾನೆ ಸಾಲಿಗೆ ಸೇರಿಕೊಂಡಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕೊರೋನಾ ವಾರಿಯರ್ಸ್‌ಗಳಾದ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು, ಹಾಗೂ ಪೊಲೀಸರಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.

ಕೊರೋನಾ ಸಂಕಷ್ಟ: PM CARES Fund ಗೆ 50 ಲಕ್ಷ ರುಪಾಯಿ ದೇಣಿಗೆ ನೀಡಿದ ಯುವರಾಜ್ ಸಿಂಗ್..!

ನನ್ನ ಕುಟುಂಬ ಹಾಗೂ ನಾನು PM Cares ಫಂಡ್‌ ಹಾಗೂ ಗುಜರಾತ್ ಮುಖ್ಯಮಂತ್ರಿ ಪರಿಹಾರ ನಿಧಿಗೆ ನನ್ನ ಕೈಲಾದ ದೇಣಿಗೆ ನೀಡಿದ್ದೇನೆ. ನೀವೂ ದೇಣಿಗೆ ನೀಡುತ್ತೀರಿ ಎಂದು ಭಾವಿಸುತ್ತೇನೆ. ಪ್ರತಿಯೊಬ್ಬರ ಕೊಡುಗೆಯೂ ಮಹತ್ವದ್ದಾಗುತ್ತದೆ. ಇಂತಹ ಪರಿಸ್ಥಿತಿಯಿಂದ ಹೊರಬರಲು ನಾವೆಲ್ಲಾ ನಮ್ಮ ಕೈಲಾದ ಸಹಾಯವನ್ನು ಮಾಡೋಣ ಎಂದು ಚೇತೇಶ್ವರ್ ಪೂಜಾರ ಹೇಳಿದ್ದಾರೆ.

Follow Us:
Download App:
  • android
  • ios