Asianet Suvarna News Asianet Suvarna News

ಬ್ರಿಯಾನ್ ಲಾರಾ ವಿಶ್ವದಾಖಲೆ ಬರೆದ ಸ್ಟೇಡಿಯಂ ಈಗ ಕೊರೋನಾ ಪರೀಕ್ಷಾ ಸೆಂಟರ್..!

2019ರ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್‌ಗೆ ಸಾಕ್ಷಿಯಾಗಿದ್ದ ಇಂಗ್ಲೆಂಡ್‌ನ ಎಡ್ಜ್‌ಬಾಸ್ಟನ್ ಸ್ಟೇಡಿಯಂ ಇದೀಗ ಕೊರೋನಾ ವೈರಸ್ ಟೆಸ್ಟ್ ಸೆಂಟರ್ ಆಗಿ ಬದಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

England Edgbaston Stadium where Brian Lara set World record become Coronavirus testing Centre
Author
Edgbaston, First Published Apr 4, 2020, 12:36 PM IST

ಲಂಡನ್‌(ಏ.04): ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಎಡ್ಜ್‌ಬಾಸ್ಟನ್‌ ಕ್ರಿಕೆಟ್‌ ಕ್ರೀಡಾಂಗಣವನ್ನು ಕೊರೋನಾ ಸೋಂಕು ಪರೀಕ್ಷಾ ಕೇಂದ್ರವಾಗಿ ಪರಿವರ್ತಿಸಲು, ವಾರ್ವಿಕ್‌ಷೈರ್‌ ಕೌಂಟಿ ಕ್ರಿಕೆಟ್‌ ಕ್ಲಬ್‌ (ಡಬ್ಲ್ಯುಸಿಸಿಸಿ) ಶುಕ್ರವಾರ ಒಪ್ಪಿಗೆ ಸೂಚಿಸಿದ್ದು, ಕ್ರೀಡಾಂಗಣವನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದೆ. 

ಭಾರತದಿಂದ ತೆರಳಿದ್ದ ದ.ಆಫ್ರಿಕಾ ಕ್ರಿಕೆಟಿಗರಿಗೆ ಕೊರೋನಾ ಸೋಂಕಿಲ್ಲ

ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ, ಕ್ರೀಡಾಂಗಣಗಳನ್ನು ಪರೀಕ್ಷಾ ಕೇಂದ್ರ, ಕ್ವಾರಂಟೈನ್‌ ಕೇಂದ್ರಗಳನ್ನಾಗಿ ಬಳಕೆ ಮಾಡಲು ನೀಡುವಂತೆ ಸರ್ಕಾರ ಕೇಳಿಕೊಂಡಿತ್ತು. ಬ್ರಿಟನ್‌ನಲ್ಲಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಸೇರಿದಂತೆ 33,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 3,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

England Edgbaston Stadium where Brian Lara set World record become Coronavirus testing Centre

ಕೊರೋನಾ ವೈರಸ್ ಎಫೆಕ್ಟ್: ಇಂಗ್ಲೆಂಡ್‌ ಕ್ರಿಕೆಟ್‌ಗೆ 2800 ಕೋಟಿ ರುಪಾಯಿ ನಷ್ಟ ನಷ್ಟ?

ಸ್ಮರಣೀಯ ಪಂದ್ಯಕ್ಕೆ ಸಾಕ್ಷಿಯಾಗಿರುವ ಎಡ್ಜ್‌ಬಾಸ್ಟನ್: ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಎಡ್ಜ್‌ಬಾಸ್ಟನ್‌ ಕ್ರಿಕೆಟ್‌ ಕ್ರೀಡಾಂಗಣ ಹಲವಾರು ಸ್ಮರಣೀಯ ಪಂದ್ಯಾವಳಿಗಳಿಗೆ ಸಾಕ್ಷಿಯಾಗಿದೆ. 1994ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬ್ರಿಯನ್ ಲಾರಾ ಅಜೇಯ 501 ರನ್ ಬಾರಿಸಿ ವಿಶ್ವದಾಖಲೆ ಬರೆದಿದ್ದರು. ವಾರ್ವಿಕ್‌ಷೈರ್‌ ಪರ ಕಣಕ್ಕಿಳಿದಿದ್ದ ಲಾರಾಮ ಡುರ್ರಾಮ್ ತಂಡದ ವಿರುದ್ಧ ವಿಶ್ವದಾಖಲೆಯ 501 ರನ್ ಸಿಡಿಸಿದ್ದರು. ಇನ್ನು 1999ರ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಇದೇ ಮೈದಾನ ಸಾಕ್ಷಿಯಾಗಿತ್ತು. 2019ರ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವೂ ಇದೇ ಮೈದಾನದಲ್ಲಿ ನಡೆದಿತ್ತು. 

Follow Us:
Download App:
  • android
  • ios