ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಚೆನ್ನೈ: ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮ್ಯಾಜಿಕ್ ಬಾಂಗ್ಲಾದೇಶ ಎದುರಿನ ಚೆನ್ನೈ ಟೆಸ್ಟ್ ಪಂದ್ಯದಲ್ಲೂ ಮುಂದುವರೆದಿದೆ. ಇದೀಗ ಜಸ್ಪ್ರೀತ್ ಬುಮ್ರಾ, ಮೂರು ಮಾದರಿಯ ಕ್ರಿಕೆಟ್‌ನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ 400 ವಿಕೆಟ್ ಕಬಳಿಸಿದ ಭಾರತದ 10ನೇ ಬೌಲರ್ ಹಾಗೂ ಆರನೇ ವೇಗಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಬಾಂಗ್ಲಾದೇಶದ ಹಸನ್ ಮಹಮೂದ್, ಬುಮ್ರಾಗೆ ಬಲಿಯಾದ 400ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಚೆನ್ನೈ ಟೆಸ್ಟ್‌ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮೂರನೇ ವಿಕೆಟ್ ಕಬಳಿಸುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಮೊದಲಿಗೆ ಬಾಂಗ್ಲಾದೇಶದ ಆರಂಭಿಕ ಬ್ಯಾಟರ್ ಶದಮನ್ ಇಸ್ಲಾಂ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಆರಂಭದಲ್ಲೇ ಶಾಕ್ ನೀಡಿದ್ದ ಬುಮ್ರಾ, ಆ ಬಳಿಕ ಮುಷ್ಫಿಕುರ್ ರಹೀಂ, ಹಸನ್ ಮಹಮೂದ್ ಹಾಗೂ ಟಸ್ಕಿನ್ ಅಹಮದ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Scroll to load tweet…

ರಾಹುಲ್ ದ್ರಾವಿಡ್ ಬಳಿಕ ಮತ್ತೋರ್ವ ಟೀಂ ಇಂಡಿಯಾ ಮಾಜಿ ಕೋಚ್‌ ಕರೆ ತಂದ ರಾಜಸ್ಥಾನ ರಾಯಲ್ಸ್!

30 ವರ್ಷದ ಜಸ್ಪ್ರೀತ್ ಬುಮ್ರಾ, ಟೆಸ್ಟ್‌ನಲ್ಲಿ 162, ಏಕದಿನ ಕ್ರಿಕೆಟ್‌ನಲ್ಲಿ 149 ಹಾಗೂ ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ 89 ವಿಕೆಟ್ ಕಬಳಿಸಿದ್ದಾರೆ. ಇದೀಗ ಬುಮ್ರಾ ಭಾರತ ಪರ ಒಟ್ಟಾರೆ 227 ಇನಿಂಗ್ಸ್‌ಗಳನ್ನಾಡಿ 400 ವಿಕೆಟ್ ಕ್ಲಬ್ ಸೇರಿದ ಭಾರತದ ಆರನೇ ವೇಗಿ ಎನಿಸಿಕೊಂಡಿದ್ದಾರೆ. ಬುಮ್ರಾಗೂ ಮೊದಲು ಕಪಿಲ್ ದೇವ್, ಜಾವಗಲ್ ಶ್ರೀನಾಥ್, ಜಹೀರ್ ಖಾನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400+ ವಿಕೆಟ್ ಕಬಳಿಸಿದ ವೇಗದ ಬೌಲರ್‌ಗಳು ಎನಿಸಿಕೊಂಡಿದ್ದಾರೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಟಾಪ್ 10 ಭಾರತೀಯ ಬೌಲರ್‌ಗಳಿವರು:

1. ಅನಿಲ್ ಕುಂಬ್ಳೆ - 953 ವಿಕೆಟ್ 499 ಇನಿಂಗ್ಸ್‌
2. ರವಿಚಂದ್ರನ್ ಅಶ್ವಿನ್ - 744 ವಿಕೆಟ್ 369 ಇನಿಂಗ್ಸ್‌
3. ಹರ್ಭಜನ್ ಸಿಂಗ್ - 707 ವಿಕೆಟ್ 442 ಇನಿಂಗ್ಸ್‌
4. ಕಪಿಲ್ ದೇವ್ - 687 ವಿಕೆಟ್ 448 ಇನಿಂಗ್ಸ್‌
5. ಜಹೀರ್ ಖಾನ್ - 597 ವಿಕೆಟ್ 373 ಇನಿಂಗ್ಸ್‌
6. ರವೀಂದ್ರ ಜಡೇಜಾ - 570 ವಿಕೆಟ್ 397 ಇನಿಂಗ್ಸ್‌
7. ಜಾವಗಲ್ ಶ್ರೀನಾಥ್ - 551 ವಿಕೆಟ್ 348 ಇನಿಂಗ್ಸ್‌
8. ಮೊಹಮ್ಮದ್ ಶಮಿ - 448 ವಿಕೆಟ್ 188 ಪಂದ್ಯಗಳು
9. ಇಶಾಂತ್ ಶರ್ಮಾ - 434 ವಿಕೆಟ್ 280 ಇನಿಂಗ್ಸ್‌
10. ಜಸ್ಪ್ರೀತ್ ಬುಮ್ರಾ - 401* ವಿಕೆಟ್ 227 ಇನಿಂಗ್ಸ್‌