ಈ ಕ್ರೀಡಾಂಗಣಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾದ ಡ್ರಾಪ್ ಇನ್ ಪಿಚ್‌ಗಳನ್ನು ಅಳವಡಿಸಲಾಗಿತ್ತು. 35 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದ ಈ ಸ್ಟೇಡಿಯಂ ಅನ್ನು ತಾತ್ಕಾಲಿಕವಾಗಿ ಟಿ20 ವಿಶ್ವಕಪ್‌ಗಾಗಿಯೇ ನಿರ್ಮಿಸಲಾಗಿತ್ತು. ಇದೇ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಫೈಟ್ ಕೂಡಾ ನಡೆದಿತ್ತು.
ನ್ಯೂಯಾರ್ಕ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಯುಎಸ್‌ಎ ಹಾಗೂ ವೆಸ್ಟ್ ಇಂಡೀಸ್ ದೇಶಗಳು ಜಂಟಿ ಆತಿಥ್ಯ ವಹಿಸಿದ್ದವು. ಈ ಪೈಕಿ ಅಮೆರಿಕದ ಲಾಂಗ್ ಐಲ್ಯಾಂಡ್‌ನ ಐಸನ್‌ಹೋವರ್ ಪಾರ್ಕ್‌ನಲ್ಲಿನ ನಾಸೌ ಕೌಂಟಿ ಅಂತಾರಾಷ್ಟ್ರೀಯ ಸ್ಟೇಡಿಯಂ, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೂ ಸೇರಿದಂತೆ 8 ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು. ಇದೀಗ ಈ ಸ್ಟೇಡಿಯಂ ಅನ್ನು ಭಗ್ನಗೊಳಿಸಲು ನೂರಾರು ಬುಲ್ಡೋಜರ್ಸ್‌ಗಳು ಸ್ಟೇಡಿಯಂನತ್ತ ಜಮಾವಣೆಗೊಂಡಿವೆ ಎಂದು ವರದಿಯಾಗಿದೆ.
ಈ ಕ್ರೀಡಾಂಗಣವನ್ನು ಕೇವಲ 5 ತಿಂಗಳಿನಲ್ಲಿ ಟಿ20 ವಿಶ್ವಕಪ್ ಪಂದ್ಯಗಳಿಗಾಗಿ 30 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 250 ಕೋಟಿ ರು.) ವೆಚ್ಚದಲ್ಲಿ, 40 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು. ಭಾರತ ಹಾಗೂ ಯುಎಸ್‌ಎ ನಡುವಿನ ಗ್ರೂಪ್ 'ಎ' ಹಂತದ ಪಂದ್ಯವು ಈ ಸ್ಟೇಡಿಯಂನಲ್ಲಿ ಕೊನೆಯ ಪಂದ್ಯ ನಡೆದಿತ್ತು. ಇದೀಗ ನ್ಯೂಯಾರ್ಕ್‌ನ ನಾಸೌ ಕ್ರೀಡಾಂಗಣವನ್ನು ಟೂರ್ನಿಯ ಬಳಿಕ ಆಯೋಜಕರು ನೆಲಕ್ಕುರುಳಿಸಲು ಮುಂದಾಗಿದ್ದು, ನೂರಾರು ಬುಲ್ಡೋಜರ್‌ಗಳು ಸ್ಟೇಡಿಯಂ ಹೊರಗೆ ಸಾಲಾಗಿ ನಿಂತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಕ್ರೀಡಾಂಗಣಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾದ ಡ್ರಾಪ್ ಇನ್ ಪಿಚ್‌ಗಳನ್ನು ಅಳವಡಿಸಲಾಗಿತ್ತು. 35 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದ ಈ ಸ್ಟೇಡಿಯಂ ಅನ್ನು ತಾತ್ಕಾಲಿಕವಾಗಿ ಟಿ20 ವಿಶ್ವಕಪ್‌ಗಾಗಿಯೇ ನಿರ್ಮಿಸಲಾಗಿತ್ತು. ಇದೇ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಫೈಟ್ ಕೂಡಾ ನಡೆದಿತ್ತು.
ಟೀಂ ಇಂಡಿಯಾ ಯಶಸ್ಸಿನ ಹಿಂದೆ ಏಕೈಕ ಮಹಿಳಾ ಸಿಬ್ಬಂದಿ..! ಯಾರೀ ಮಿಸ್ಟ್ರಿ ಗರ್ಲ್? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಇದೀಗ ಆ ಸ್ಟೇಡಿಯಂಗೆ ಅಳವಡಿಸಲಾಗಿದ್ದ, ಸ್ಟ್ಯಾಂಡ್ ಹಾಗೂ ಇನ್ನಿತರ ಪರಿಕರಗಳನ್ನು ಸ್ಥಳಾಂತರಿಸಲು ಆಯೋಜಕರು ಮುಂದಾಗಿದ್ದಾರೆ. ಆದರೆ ಪಿಚ್ ಹಾಗೂ ಮೈದಾನವನ್ನು ಹಾಗೆಯೇ ಉಳಿಸಿಕೊಳ್ಳಲು ಆಯೋಜಕರು ನಿರ್ಧರಿಸಿದ್ದಾರೆ. ಈ ಕ್ರಿಕೆಟ್ ಪಿಚ್‌ನಲ್ಲಿ ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳು ಹಾಗೂ ಕ್ರಿಕೆಟ್ ಅಭಿಮಾನಿಗಳ ಬಳಕೆಗೆ ಮುಕ್ತ ಅವಕಾಶ ನೀಡಲು ಆಯೋಜಕರು ನಿರ್ಧರಿಸಿದ್ದಾರೆ.
ಇದರಿಂದ ಅಮೆರಿಕದಲ್ಲಿ ಕ್ರಿಕೆಟ್ ಆಡುವ ಯುವ ಪ್ರತಿಭೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎನ್ನುವುದು ಕ್ರಿಕೆಟ್ ಆಯೋಜಕರ ಲೆಕ್ಕಾಚಾರವಾಗಿದೆ. ಅಷ್ಟಾಗಿ ಕ್ರಿಕೆಟ್ ಪರಿಚಿತವಲ್ಲದ ಅಮೆರಿಕದಲ್ಲಿ ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆತಿಥ್ಯ ವಹಿಸಿದೆ. ಹೀಗಿದ್ದು ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಬಂದು ಅಭಿಮಾನಿಗಳನ್ನು ಹುರಿದುಂಬಿಸಿದ್ದಾರೆ.
ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡ ಪ್ರಕಟ..! ಆದ್ರೆ ಮೊದಲ ಸ್ಥಾನದಲ್ಲಿರುವುದು ಆರ್‌ಸಿಬಿ, ಕೆಕೆಆರ್ ಅಲ್ಲವೇ ಅಲ್ಲ
ಇನ್ನು ಯುಎಸ್‌ಎ ತಂಡವು ಭಾರತ ಎದುರು ಸೋಲಿನ ಹೊರತಾಗಿಯೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 'ಎ' ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದೆ. ಒಂದು ವೇಳೆ ಯುಎಸ್‌ಎ ತಂಡವು ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ಕೆನಡಾ ಎದುರು ಗೆಲುವು ಸಾಧಿಸಿದರೆ, ಅನಾಯಾಸವಾಗಿ ಸೂಪರ್ 8 ಹಂತಕ್ಕೆ ಎರಡನೇ ತಂಡವಾಗಿ ಲಗ್ಗೆಯಿಡಲಿದೆ. ಈಗಾಗಲೇ 'ಎ' ಗುಂಪಿನಿಂದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದೆ.
