Asianet Suvarna News Asianet Suvarna News

ಒಂದೇ ಪಂದ್ಯ​ದಲ್ಲಿ 225 ಕೋಟಿ ರುಪಾಯಿ ಬೆಟ್ಟಿಂಗ್‌! ಬೆಚ್ಚಿಬಿದ್ದ ಬಿಸಿಸಿಐ

ಕಳೆದ ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದ ಬೆಟ್ಟಿಂಗ್ ಪ್ರಕರಣ ಬಿಸಿಸಿಐ ನಿದ್ದೆಗೆಡಿಸಿದೆ. ಬರೋಬ್ಬರಿ 225 ಕೋಟಿ ರುಪಾಯಿ ಬೆಟ್ಟಿಂಗ್ ನಡೆದಿರುವ ವಿಚಾರ ಬಿಸಿಸಿಐ ಆತಂಕಕ್ಕೆ ಕಾರಣವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

225 crore rupees bets were placed in TNPL game
Author
New Delhi, First Published Dec 8, 2019, 6:13 PM IST

ನವ​ದೆ​ಹ​ಲಿ[ಡಿ.08]: ಭಾರ​ತ​ದ ದೇಸಿ ಟಿ20 ಲೀಗ್‌ಗಳ​ಲ್ಲಿ ಬೆಟ್ಟಿಂಗ್‌ ಪ್ರಕ​ರಣಗಳು ಹೆಚ್ಚಾ​ಗುತ್ತಿವೆ. ಎಷ್ಟರ ಮಟ್ಟಿಗೆ ಎಂದರೆ ಬಿಸಿ​ಸಿಐನ ಭ್ರಷ್ಟಾ​ಚಾರ ನಿಗ್ರಹ ದಳ ಭಾರೀ ಕಳ​ವಳ ವ್ಯಕ್ತ​ಪ​ಡಿಸಿದ್ದು, ಲೀಗ್‌ಗಳನ್ನು ಸ್ಥಗಿತಗೊಳಿ​ಸು​ವಂತೆ ಕೇಳಿ​ಕೊಂಡಿದೆ. 

ರಣಜಿ ಟ್ರೋಫಿ: ಇತಿ​ಹಾಸ ಬರೆಯಲು ಸಜ್ಜಾದ ಕರ್ನಾ​ಟ​ಕ!

ಭ್ರಷ್ಟಾ​ಚಾರ ನಿಗ್ರಹ ದಳ, ಗೌಪ್ಯ ವರ​ದಿ​ಯೊಂದನ್ನು ಸಲ್ಲಿ​ಸಿದ್ದು ಅದ​ರಲ್ಲಿ ಈ ವರ್ಷದ ತಮಿ​ಳು​ನಾಡು ಪ್ರೀಮಿ​ಯರ್‌ ಲೀಗ್‌ (ಟಿ​ಎನ್‌ಪಿಎಲ್‌)ನ ಟೂಟಿ ಪೇಟ್ರಿ​ಯಾಟ್ಸ್‌ ಹಾಗೂ ಮದುರೈ ಪ್ಯಾಂಥರ್ಸ್ ನಡು​ವೆ ಜು.20ರಂದು ನಡೆದ ಪಂದ್ಯ​ಕ್ಕೆ ಅಂತಾ​ರಾ​ಷ್ಟ್ರೀಯ ಬೆಟ್ಟಿಂಗ್‌ ವೆಬ್‌ಸೈಟ್‌ ಬೆಟ್‌ಫೇರ್‌ ಡಾಟ್‌ ಕಾಮ್‌ನಲ್ಲಿ ಬರೋ​ಬ್ಬರಿ 225 ಕೋಟಿ ರುಪಾಯಿ ಬೆಟ್ಟಿಂಗ್‌ ನಡೆದಿತ್ತು ಎನ್ನುವ ಅಂಶವನ್ನು ಉಲ್ಲೇಖಿ​ಸಿದೆ.

ಟೀಂ ಇಂಡಿ​ಯಾಗಿಂದು ಟಿ20 ಸರಣಿ ಜಯದ ಗುರಿ

ಈ ಮೊತ್ತದ ಬೆಟ್ಟಿಂಗ್‌ ಕಂಡು ಸ್ವತಃ ಬೆಟ್‌ಫೇರ್‌ ಸಂಸ್ಥೆಗೇ ಗಾಬ​ರಿ​ಯಾ​ಗಿತ್ತು. ಅದೇ ಕಾರಣಕ್ಕೆ ಟೂಟಿ ಪೇಟ್ರಿ​ಯಾಟ್ಸ್‌ ತಂಡದ ಯಾವುದೇ ಪಂದ್ಯ​ಗ​ಳಿಗೆ ಬೆಟ್ಸ್‌ ತೆಗೆ​ದು​ಕೊ​ಳ್ಳು​ವುದು ಸಂಸ್ಥೆ ನಿಲ್ಲಿ​ಸಿತು ಎನ್ನ​ಲಾ​ಗಿದೆ. ತಮಿ​ಳು​ನಾಡು ಪ್ರೀಮಿ​ಯರ್‌ ಲೀಗ್‌, ಕರ್ನಾ​ಟಕ ಪ್ರೀಮಿ​ಯರ್‌ ಲೀಗ್‌, ಮುಂಬೈ ಪ್ರೀಮಿ​ಯರ್‌ ಲೀಗ್‌ನಲ್ಲಿ ಬೆಟ್ಟಿಂಗ್‌ ನಡೆ​ಸಿ​ರುವ ಬುಕ್ಕಿಗಳಿಗೆ ಪರ​ಸ್ಪರ ಪರಿ​ಚ​ಯ​ವಿದ್ದು, ಎಲ್ಲಾ ಪ್ರಕ​ರಣಗಳಿಗೆ ಹೋಲಿಕೆ ಇದೆ ಎಂದು ವರ​ದಿ​ಯಲ್ಲಿ ತಿಳಿ​ಸ​ಲಾಗಿದೆ ಎಂದು ಮಾಧ್ಯ​ಮ​ವೊಂದು ವರದಿ ಮಾಡಿದೆ.
 

Follow Us:
Download App:
  • android
  • ios