ಮಕ್ಕಳಿಗಾಗಿ ತಾತ್ಕಾಲಿಕವಾಗಿ ಒಂದಾದ ಹೃತಿಕ್-ಸುಸಾನ್!
ಇಂಡಿಯಾ ಲಾಕ್ಡೌನ್ ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಅವರ ವಿಚ್ಛೇದಿತ ಪತ್ನಿಯನ್ನು ಒಂದು ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.
ಮುಂಬೈ(ಮಾ.27): ವಿಚ್ಛೇದನ ಪಡೆದಿದ್ದ ಬಾಲಿವುಡ್ ನಟ ಹೃತಿಕ್ ರೋಷನ್ ದಂಪತಿ ಕೊರೋನಾ ವೈರಸ್ ಕಾರಣದಿಂದಾಗಿ ಮತ್ತೆ ಒಂದಾಗಿದ್ದಾರೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸುಸಾನ್ ಖಾನ್ ತಮ್ಮ ಮನೆಯನ್ನು ಬಿಟ್ಟು ಮಾಜಿ ಪತಿ ಹೃತಿಕ್ ಜೊತೆ ಕೆಲ ದಿನಗಳ ಕಾಲ ವಾಸವಿರಲು ನಿರ್ಧರಿಸಿದ್ದಾರೆ.
ಕೊರೋನಾ ವೈರಸ್ ವಿರುದ್ಧ ಹೋರಾಟ; ಸರ್ಕಾರಕ್ಕೆ 50 ಲಕ್ಷ ರೂ ನೀಡಿದ ಸಚಿನ್ ತೆಂಡುಲ್ಕರ್!
ಹೃತಿಕ್ ಹಾಗೂ ಸುಸಾನ್ 2014ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಇವರಿಗೆ ಹ್ರೆಹಾನ್ ಮತ್ತು ಹೃಧಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಸಾನ್ ಜೊತೆ ಇರುವ ಚಿತ್ರವನ್ನು ಹೃತಿಕ್ ರೋಷನ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಕೊರೋನಾ ನಿರ್ಮೂಲನೆಗೆ ಔಷಧಿ..? 3ರಿಂದ 5ದಿನದಲ್ಲಿ ಸೋಂಕಿತ ಗುಣಮುಖ?
ಕೊರೋನಾ ವೈರಸ್ ಹರಡದಂತೆ ದೂರವಿರಲು ಪ್ರಧಾನಿ ನರೇಂದ್ರ ಮೋದಿ ಮೂರು ವಾರಗಳ ಕಾಲ(21 ದಿನ) ಲಾಕ್ ಮಾಡಲು ಆದೇಶಿಸಿದ್ದಾರೆ. ಹೀಗಾಗಿ ಕ್ರೀಡೆ, ಸಿನಿಮಾ ಸೇರಿದಂತೆ ಎಲ್ಲಾ ಕ್ಷೇತ್ರಗಳು ಸ್ತಬ್ಧವಾಗಿವೆ. ಈ ಹಿಂದೆ ಹೃತಿಕ್ ರೋಷನ್ 'ವಾರ್' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕ್ರಿಶ್ 4 ಚಿತ್ರದ ತಯಾರಿಯಲ್ಲಿದ್ದರು.