ಬೆಂಗಳೂರು(ಮಾ.31)   ಕೊರೋನಾ ಮಾರಿ ತನ್ನ ಬಲಿಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುತ್ತಲೇ ಇದೆ. ಇದೆಲ್ಲದರ ನಡುವೆ ಸ್ಪೇನ್  ವೈದ್ಯರು ಶಿವ ಮಂತ್ರದ ಮೊರೆ ಹೋಗಿದ್ದಾರೆ.

7,85,797 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ಇಲ್ಲಿಯವರೆಗಿನ ಲೆಕ್ಕ. ಅಮೇರಿಕಾ, ಇಟಲಿ ಮತ್ತು ಸ್ಪೇನ್ ನಲ್ಲಿ ಬಲಿಯಾಗುತ್ತಿರುವವರ ಸಂಖ್ಯೆ ಆತಂಕ ಹೆಚ್ಚು ಮಾಡುತ್ತಲೇ ಇದೆ.

ಇಟಲಿಯಲ್ಲಿ 11,591 ಮಂದಿ ಮೃತಪಟ್ಟಿದ್ದು, ಸ್ಪೇನ್ ನಲ್ಲಿ 7,716 ಮಂದಿ ಜೀವ ಕಳೆದುಕೊಂಡಿದ್ದಾರೆ. ಅ ಮೂಲಕ ಕೊರೊನಾ ವೈರಸ್ ನಿಂದ ಅತಿ ಹೆಚ್ಚು ಸಾವು ಸಂಭವಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಪೇನ್ ಗೆ ಎರಡನೇ ಸ್ಥಾನ. ಚೀನಾ ಅಸಲಿ ಲೆಕ್ಕ ಮುಚ್ಚಿಟ್ಟಿದೆ ಎಂಬ ಆರೋಪಗಳು ಇವೆ.

ಕರ್ನಾಟಕದಲ್ಲಿ ಮತ್ತೆ 7 ಕೊರೋನಾ ಕೇಸ್ ಪತ್ತೆ., ಎಲ್ಲೆಲ್ಲಿ?

ರೋಗಿಗಳ ಪ್ರಾಣ ಉಳಿಸಲು ಸ್ಪೇನ್ ನ ವೈದ್ಯರು ಭಾರತೀಯ ಪವಿತ್ರ ಬೀಜಾಕ್ಷರ ಮಂತ್ರ 'ಓಂ'ಕಾರ ಪಠಿಸಿ, ಜೀವ ಸಂಕುಲ ಉಳಿಸಲು ದೇವರಲ್ಲಿ ಬೇಡಿಕೊಂಡಿದ್ದಾರೆ.  ಸ್ಪೇನ್ ಡಾಕ್ಟರ್ ಗಳು ಮಾಡಿದ್ದಾರೆ ಎನ್ನಲಾದ 'ಓಂ'ಕಾರ ಪಠಣದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಸಲಿ ಕತೆ ಏನು? ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರೂ ಇದು ಸ್ಪೇನ್ ನದ್ದೇ ಎಂದು ಹೇಳುವ ಯಾವ ದಾಖಲೆಗಳು ಇಲ್ಲ. ಕೆಲವರು ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಅಭಿಪ್ರಾಯ ಶೇರ್ ಮಾಡಿಕೊಂಡಿದ್ದಾರೆ.

ಲಾಕ್ ಡೌನ್:  ಮುಸ್ಲಿಮರಿಂದ ಹಿಂದೂವಿನ ಅಂತ್ಯಸಂಸ್ಕಾರ

ಓಂ ಕಾರದ ಮಹತ್ವ:  ಹಿಂದೂ, ಸಿಖ್, ಜೈನ, ಬೌದ್ಧ ಧರ್ಮಗಳಲ್ಲಿ 'ಓಂ'ಕಾರವನ್ನು ಪವಿತ್ರ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ಮಹತ್ವ ಮಾತ್ರ ಅಲ್ಲ 'ಓಂ' ಶಾರೀರಿಕ ಮಹತ್ವವನ್ನೂ ಹೊಂದಿದೆ. 'ಓಂ' ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಜೊತೆಗೆ 'ಓಂ' ಉಚ್ಛಾರಣೆ ಮಾಡುವುದರಿಂದ ಒತ್ತಡ ಕಡಿಮೆಯಾಗಿ ರಕ್ತ ಸಂಚಾರ ಸುಗಮವಾಗುತ್ತದೆ. ದಿನ್ನಕ್ಕೆ ಐದು ಸಾರಿ ಶ್ವಾಸವನ್ನು ದೀರ್ಘವಾಗಿ ಎಳೆದುಕೊಂಡು ಹೊರಬಿಡುವ ಕ್ರಿಯೆಯ ರೀತಿಯಲ್ಲೇ ಇರುತ್ತದೆ. ಮೆದುಳಿನ ಭಾಗದಲ್ಲಿಯೂ ಕಂಪನ ಉಂಟಾಗಿ ನರಮಂಡಲ ಸಸೂತ್ರವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಹೇಳಲಾಗಿದೆ.

ಒಟ್ಟಿನಲ್ಲಿ ಈ ಕೊರೋನಾ ಮಹಾಮಾರಿ ಹೋಗಾಲಾಡಿಸಲು ಜನರು ಅವರವರ ಭಕ್ತಿ-ಭಾವಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ದೇವಾಲಯದಲ್ಲಿ ಪೂಜೆ, ಮಂದಿರಗಳಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಗಿದೆ. ಅವರವರ ಮನೆಯಲ್ಲೇ ಕುಳಿತು ಬೇಡಿಕೊಳ್ಳುತ್ತಿರುವವರ ಸಂಖ್ಯೆ ದೊಡ್ಡದಿದೆ.