Asianet Suvarna News Asianet Suvarna News

ಥ್ಯಾಂಕ್ಯೂ ಇಂಡಿಯಾ, ನಿಮ್ಮ ಸಹಾಯ ಎಂದಿಗೂ ಮರೆಯಲ್ಲ: ಟ್ರಂಪ್‌

ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ಭಾರತ| ಭಾರತಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧನ್ಯವಾದ| ಈ ಔಷಧ ಸಾಂಕ್ರಮಿಕ ರೋಗ ತಡೆಗಟ್ಟವಲ್ಲಿನ ಯುದ್ಧದ ನೀತಿ ಬದಲಾವಣೆಗೆ ಪ್ರಮುಖ ಕಾರಣ

India Decision To Send hydroxychloroquine to US will not be forgotten Trump Thanks Modi
Author
Bangalore, First Published Apr 9, 2020, 11:24 AM IST

ವಾಷಿಂಗ್ಟನ್(ಏ.09): ಕಳೆದೆರಡು ದಿನಗಳ ಹಿಂದಷ್ಟೇ ಮಲೇರಿಯಾ ತಡೆಗಟ್ಟುವ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು ಮೇಲಿನ ನಿರ್ಬಂಧ ಹಿಂಪಡೆಯದಿದ್ದಲ್ಲಿ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಈ ಮಾತ್ರೆ ಕಳುಹಿಸಿದ ಭಾರತದ ಸಹಾಯ ಯಾವತ್ತೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.

ಲಾಕ್ ಡೌನ್ ನಡುವೆ ಅಮೆರಿಕ ದಿಟ್ಟ ಕ್ರಮ; ದೂರದಲ್ಲಿ ಕುಳಿತು ದೊಡ್ಡಣ್ಣನ ಮಾಸ್ಟರ್ ಪ್ಲಾನ್!

India Decision To Send hydroxychloroquine to US will not be forgotten Trump Thanks Modi

ಈ ಸಂಬಂಧ ಟ್ವೀಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಅಗತ್ಯ ಸಂದರ್ಭಗಳಲ್ಲಿ, ಅಸಾಧಾರಣ ಪರಿಸ್ಥಿತಿಯಲ್ಲಿ ಗೆಳೆಯರ ನಡುವೆ ಇನ್ನೂ ಹೆಚ್ಚಿನ ಸಹಕಾರದ ಅಗತ್ಯವಿದೆ. ಧನ್ಯವಾದ ಭಾರತ. ಔಷಧಿ ಕಳುಹಿಸಿಕೊಡುವ ಭಾರತೀಯರ ನಿರ್ಧಾರವನ್ನು ಎಂದಿಗೂ ಮರೆಯಲಾಗುವುದಿಲ್ಲ. ಈ ಹೋರಾಟದಲ್ಲಿ ಮಾನವೀಯತೆಗೂ ಸಹಾಯ ಮಾಡುವ ಮೂಲಕ ಪ್ರಬಲ ನಾಯಕತ್ವ ವಹಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರಿಗೆ ಧನ್ಯವಾದಗಳು' ಎಂದಿದ್ದಾರೆ.

ಟ್ರಂಪ್‌ ಪ್ರತೀಕಾರದ ಮಾತು: 24 ಔಷಧಗಳ ರಫ್ತು ನಿಷೇಧ ಹಿಂಪಡೆದ ಭಾರತ!

ಇನ್ನು ಭಾರತ ಈ ನಿರ್ಬಂಧವನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿದ್ದ ಬೆನ್ನಲ್ಲೇ ಭಾರತ ಮತ್ತು ಪ್ರಧಾನಿ ಮೋದಿ ಅವರನ್ನು ಹೊಗಳಿದ್ದ ಟ್ರಂಪ್, ಮೋದಿ ಓರ್ವ ಶ್ರೇಷ್ಠ ನಾಯಕ ಹಾಗೂ ಭರವಸೆಯ ಗೆಳೆಯ ಎಂದು ಹೇಳಿದ್ದರು.

ಸಂಕಷ್ಟದ ಸಮಯವೇ ಗೆಳೆಯರನ್ನ ಹತ್ತಿರ ತರುತ್ತೆ: ಮೋದಿ

ಟ್ರಂಪ್ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪಿಎಂ ಮೋದಿ 'ನಿಮಮ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಇಂತಹ ಸಮಯವೇ ಗೆಳೆಯರನ್ನು ಮತ್ತಷ್ಟು ಹತ್ತಿರ ತರುತ್ತದೆ. ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧ ಈ ಹಿಂದಿಗಿಂತಲೂ ಮತ್ತಷ್ಟು ಗಟ್ಟಿಯಾಗಿದೆ. ಕೊರೋನಾ ವಿರುದ್ಧದ ಈ ಸಮರದಲ್ಲಿ ಭಾರತ ತನ್ನ ಕೈಲಾದಷ್ಟು ಸಹಾಯ ಮಾಡಲು ಸದಾ ಸಿದ್ಧ ಎಂದಿದ್ದಾರೆ '

Follow Us:
Download App:
  • android
  • ios