ಪ್ಯಾರಿಸ್‌(ಮಾ.31): ವಿಶ್ವದಾದ್ಯಂತ ಕೊರೋನಾ ತನ್ನ ಕಬಂಧ ಬಾಹುಗಳನ್ನು ಮತ್ತಷ್ಟುವಿಸ್ತರಿಸಿದ್ದು, 7.30 ಲಕ್ಷ ಜನರನ್ನು ಆವರಿಸಿಕೊಂಡಿದೆ. 198ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿರುವ ಸೋಂಕಿಗೆ ಬಲಿಯಾದವರ ಸಂಖ್ಯೆ 34610ಕ್ಕೆ ತಲುಪಿದೆ. ಈ ನಡುವೆ ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ಇದೀಗ ಯುರೋಪ್‌ ದೇಶಗಳಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದ್ದು, ಈ ವರೆಗೆ ಬಲಿಯಾದ 34000 ಜನರ ಪೈಕಿ 25000 ಜನರನ್ನು ಯುರೋಪ್‌ ದೇಶಗಳಲ್ಲೇ ಅಹುತಿ ಪಡೆದಿದೆ. ಈ ಪೈಕಿ ಇಟಲಿಯಲ್ಲಿ ಅತೀ ಹೆಚ್ಚು ಸಾವು ಉಂಟಾಗಿದ್ದು, 10,779 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿ 97,689 ಮಂದಿ ಸೋಂಕಿತರಿದ್ದಾರೆ.

ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1.50 ಲಕ್ಷದತ್ತ

ನ್ಯೂಯಾಕ್‌: ಅತೀ ಹೆಚ್ಚು ಸೋಂಕು ಪೀಡಿತ ರಾಷ್ಟ್ರಗಳ ಪೈಕಿ ದೊಡ್ಡಣ್ಣ ಅಮೆರಿಕ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, ಒಟ್ಟು 145,099 ಮಂದಿಗೆ ಸೋಂಕು ಭಾದಿಸಿದೆ. 2,606 ಮಂದಿಯನ್ನು ಆಹುತಿ ಪಡೆದಿದೆ. ಸೋಂಕಿನ ಹುಟ್ಟೂರು ಚೀನಾದಲ್ಲಿ ಕೊರೋನಾ ತನ್ನ ಅಬ್ಬರವನ್ನು ತಗ್ಗಿಸಿದ್ದು, ನಿಧಾನವಾಗಿ ಹಳಿಗೆ ಮರಳುತ್ತಿದೆ. ಅಲ್ಲಿ 81,470 ಮಂದಿಗೆ ಸೋಂಕು ತಟ್ಟಿದ್ದು, 3,304 ಮಂದಿಯನ್ನು ಆಹುತಿ ಪಡೆದಿದೆ.

ಟಾಪ್‌-6 ರಾಷ್ಟ್ರಗಳು

ದೇಶ ಒಟ್ಟು ಸೋಂಕಿತರು ಒಟ್ಟು ಸಾವು

ಅಮೆರಿಕ 145,099 2,606

ಇಟಲಿ 97,689 10,779

ಸ್ಪೇನ್‌ 85,195 5,085

ಚೀನಾ 81,470 3,304

ಜರ್ಮನಿ 63,929 560

ಇರಾನ್‌ 41,495 2,757