ಬಾಗ್ದಾದ್‌(ಮಾ.31): ಕೊರೋನಾ ಬಲಿಯಾದ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ, ಸಮಾಧಿಗೂ ಜಾಗ ಸಿಗದ ಪರಿಸ್ಥಿತಿ ಇರಾಕ್‌ಗೆ ಬಂದೊದಗಿದೆ! ಕೊರೋನಾದಿಂದ ಸಾವಿಗೀಡಾದ ತಂದೆಯ ಸಮಾಧಿಗೆ ವ್ಯಕ್ತಿಯೊಬ್ಬರು ಒಂದು ವಾರ ಕಾಲ ಪರದಾಡಿ, ಕಡೆಗೂ ಎಲ್ಲಿಯೂ ಜಾಗ ಲಭ್ಯವಾಗದೇ ಪುನಃ ಆಸ್ಪತ್ರೆಗೆ ವಾಪಸ್‌ ಕೊಂಡೊಯ್ದ ಘಟನೆ ಬಾಗ್ದಾದ್‌ನಿಂದ ವರದಿಯಾಗಿದೆ.

ಸಾದ್‌ ಮಲಿಕ್‌ ಎಂಬವರು ಇಂಥ ಕಹಿ ಅನುಭವಕ್ಕೆ ಗುರಿಯಾಗಿದ್ದಾರೆ. ಕೊರೋನಾದಿಂದ ತೀರಿಕೊಂಡ ತಂದೆಯನ್ನು ಸಮಾಧಿ ಮಾಡಲು ಬಾಗ್ದಾದ್‌ನ ಅನೇಕ ಕಡೆಗಳಲ್ಲಿ ಸಾದ್‌ ಸುತ್ತಾಡಿದ್ದಾರೆ. ಆದರೆ ಇದಕ್ಕೆ ಸ್ಥಳೀಯರು ಪ್ರತಿರೋಧ ವ್ಯಕ್ತಪಡಿಸಿ ಅವಕಾಶ ನೀಡಿಲ್ಲ. ಸಮಾಧಿ ಮಾಡಿದರೆ, ಸುತ್ತಲೂ ಅದೇ ಸೋಂಕು ಹರಡುತ್ತದೆ ಎಂಬ ಕಾರಣಕ್ಕಾಗಿ ಸ್ಥಳೀಯರು ಎಲ್ಲಿಯೂ ಇದಕ್ಕೆ ಅವಕಾಶವನ್ನೇ ನೀಡದ ಕಾರಣ ಪುನಃ ಆಸ್ಪತ್ರೆಗೇ ಕೊಂಡೊಯ್ದಿದ್ದಾರೆ.

ರೈಲ್ವೆ ಟಿಕೆಟ್‌ ದಂಧೆ ಹಣ ಉಗ್ರರಿಗೆ! ಸಾಫ್ಟ್‌ವೇರ್‌ ಬಳಸಿ ವೆಬ್‌ಸೈಟ್‌ ಹ್ಯಾಕ್‌

ಇಸ್ಲಾಮ್‌ನಲ್ಲಿ ವ್ಯಕ್ತಿಯೊಬ್ಬ ತೀರಿಕೊಂಡು 24 ಗಂಟೆಯಲ್ಲಿ ಮಣ್ಣು ಮಾಡಿ ಸಮಾಧಿ ನಿರ್ಮಿಸಬೇಕೆನ್ನುವ ನಿಯಮವಿದ್ದರೂ ಇದಕ್ಕೆ ಇರಾಕ್‌ನಲ್ಲಿ ವಿರೋಧ ವ್ಯಕ್ತವಾಗಿದೆ. ಕೊರೋನಾದಿಂದ ಯಾರೇ ಸಾವಿಗೀಡಾದರೂ ಸುಡುವುದು ಕಡ್ಡಾಯ ಎಂದು ಅಲ್ಲಿನ ಸರ್ಕಾರವೂ ಈಗಾಗಲೇ ಘೋಷಿಸಿದೆ.