Asianet Suvarna News Asianet Suvarna News

ಕೊರೋನಾ ವೈರಸ್ ಮೂಲ ವುಹಾನ್ ಅಲ್ಲವೆಂದ ಚೀನಾ!

ಕೊರೋನಾ ವೈರಸ್ ಮೂಲ ವುಹಾನ್ ಅಲ್ಲ ಎಂದು ಚೀನಾ ಹೊಸ ರಾಗ ಎಳೆದಿದೆ. ಕೊರೋನಾ ಬಗ್ಗೆ ವರದಿ ಮಾಡಿದ್ದು ನಾವು ಎಂದು ಹೇಳಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.

China rejects coronavirus birth place Wuhan
Author
Beijing, First Published Apr 10, 2020, 10:23 AM IST

ಬೀಜಿಂಗ್(ಏ.10): ಕೊರೋನಾ ವೈರಸ್ ಚೀನಾದಿಂದಲೇ ಬಂದಿದ್ದು ಎಂಬ ಆರೋಪವನ್ನು ಚೀನಾ ತಳ್ಳಿಹಾಕಿದೆ. ಕೊರೋನಾ ವೈರಸ್‌ ಅನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಮೊದಲು ವರದಿ ಮಾಡಿದ್ದು ನಾವು ಎಂದು ಚೀನಾ ಹೊಸ ರಾಗ ಎಳೆದಿದೆ.

ಮೋದಿಯನ್ನು ಹನುಮಂತನಿಗೆ ಹೋಲಿಸಿದ ಬ್ರೆಜಿಲ್ ಅಧ್ಯಕ್ಷ

ಕೊರೋನಾ ವೈರಸ್ ಬಗ್ಗೆ ನಾವು ಮೊದಲು ವರದಿ ಮಾಡಿದ್ದೇವೆ ಎಂದ ಮಾತ್ರಕ್ಕೆ ಕೊರೋನಾ ವೈರಸ್ ಹುಟ್ಟಿದ್ದು ನಮ್ಮ ವುಹಾನ್‌ನಲ್ಲೇ ಎಂಬ ಅರ್ಥವಲ್ಲ. ಈ ವೈರಸ್ ಮೂಲ ಎಲ್ಲಿಯದ್ದು ಎಂದು ವಿಜ್ಞಾನವೇ ಹೇಳಬೇಕು ಎಂದು ಚೀನಾ ವಿದೇಶಾಂಗ ಸಚಿವಾಯಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ. ಇನ್ನು ಇದೇ ವೇಳೆ ಕೊರೋನಾ ವೈರಸ್‌ ಹರಡುತ್ತಿರುವುದನ್ನು ಚೀನಾ ಹೊರ ಜಗತ್ತಿಗೆ ಮುಚ್ಚಿಟ್ಟಿತ್ತು ಎನ್ನುವ ಆರೋಪವನ್ನು ಝಾವೋ ನಿರಾಕರಿಸಿದ್ದಾರೆ.

ಪಂದ್ಯವಾಡಿಸಿ ಹಣ ಸಂಗ್ರಹಿಸುವ ಅವಶ್ಯಕತೆ ಭಾರತಕ್ಕಿಲ್ಲ; ಅಕ್ತರ್‌ಗೆ ಕಪಿಲ್ ದೇವ್ ತಿರುಗೇಟು!

2019ರ ಡಿಸೆಂಬರ್ ಕೊನೆಯ ವಾರದಲ್ಲಿ ಸೋಂಕು ಕಾಣಿಸಿಕೊಂಡ ವೇಳೆ ಅದನ್ನು ನ್ಯೂಮೋನಿಯಾದ ಹೊಸ ಪ್ರಕರಣ ಎಂದು ಗುರುತಿಸಲಾಗಿತ್ತು. ಅದು ಒಂದು ವೈರಸ್ ಎಂದು ಗೊತ್ತಾದ ತಕ್ಷಣ ವಿಶ್ವ ಆರೋಗ್ಯ  ಸಂಸ್ಥೆಗೆ ವರದಿ ಮಾಡಲಾಯಿತು ಎಂದು ಹೇಳಿದ್ದಾರೆ. ಕೊರೋನಾ ಬಗ್ಗೆ ಹಲವಾರು ತರ್ಕಗಳು ಕೇಳಿ ಬಂದಿದ್ದವು. ವುಹಾನ್‌ನ ಮಾಂಸದ ಮಾರುಕಟ್ಟೆಯಿಂದ ವೈರಸ್ ಹುಟ್ಟಿಕೊಂಡಿತ್ತು ಎಂದು  ಹೇಳಲಾಗಿತ್ತು.

"

Follow Us:
Download App:
  • android
  • ios