Asianet Suvarna News Asianet Suvarna News

ಆಸ್ಟ್ರೇಲಿಯಾದಿಂದ ಬಂದಿದ್ದ ವೃದ್ಧೆ ಸಾವು: ಕೊರೋನಾ ಶಂಕೆ

ಆಸ್ಪ್ರೇಲಿಯಾದಿಂದ ಬಂದಿದ್ದ ಸುಮಾರು 60 ವರ್ಷ ವಯಸ್ಸಿನ ಮಹಿಳೆ ಗುರುವಾರ ಮಧ್ಯಾಹ್ನ ಚಿಕ್ಕಮಗಳೂರಿನಲ್ಲಿ ಮೃತಪಟ್ಟಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ.

 

Woman Returned from Australia passes away
Author
Bangalore, First Published Mar 27, 2020, 4:16 PM IST

ಚಿಕ್ಕಮಗಳೂರು(ಮಾ.27): ಆಸ್ಪ್ರೇಲಿಯಾದಿಂದ ಬಂದಿದ್ದ ಸುಮಾರು 60 ವರ್ಷ ವಯಸ್ಸಿನ ಮಹಿಳೆ ಗುರುವಾರ ಮಧ್ಯಾಹ್ನ ಚಿಕ್ಕಮಗಳೂರಿನಲ್ಲಿ ಮೃತಪಟ್ಟಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ.

ಮನೆಯವರು ತಿಳಿಸಿರುವ ಪ್ರಕಾರ ವಾಂತಿ, ಭೇದಿಯಿಂದ ಮಹಿಳೆ ಮೃತಪಟ್ಟಿದ್ದಾರೆ. ಆದರೂ ಸಹ ಮುಂಜಾಗ್ರತಾ ಕ್ರಮವಾಗಿ ಮಹಿಳೆಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಹಾಸನಕ್ಕೆ ಸಂಜೆಯ ವೇಳೆಗೆ ಕಳುಹಿಸಲಾಗಿದೆ.

ಯುಗಾದಿ ನೆಪ ಮಾಡಿ ಬೆಂಗ್ಳೂರ್ ಬಿಟ್ಟವ್ರಿಗೆ ಹಳ್ಳೀಲಿ ತಪಾಸಣೆ

ವಿದೇಶದಿಂದ ವಾಪಾಸ್‌ ಬರುವ ಜನರನ್ನು ಗೃಹ ಬಂಧನದಲ್ಲಿ ಇಡಲಾಗುತ್ತಿದೆ. ಮಾ.1ರಂದು ಈ ಮಹಿಳೆ ಬಂದರೂ ವಿದೇಶದಿಂದ ಬಂದಿರುವವರ ಪಟ್ಟಿಯಲ್ಲಿ ಈ ಮಹಿಳೆಯ ಹೆಸರು ಇಲ್ಲ. ಹೆಸರು ಇದ್ದಿದ್ದರೆ ಅವರ ಮೇಲೆ ನಿಗಾ ವಹಿಸಿ, ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇರುವಂತೆ ಮುಂಜಾಗ್ರತೆ ವಹಿಸಬಹುದಾಗಿತ್ತು ಎಂದು ಹೇಳಲಾಗುತ್ತಿದೆ.

ಮೈಸೂರಿನ 3ನೇ ಕೊರೋನಾ ಪ್ರಕರಣ: ಕೆಲಸ ಮಾಡಿದ್ದು 2 ಗಂಟೆ, 1000 ಸಹೋದ್ಯೋಗಿಗಳಿಗೆ ಟೆನ್ಶನ್!

ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಅವರು ಮೃತಪಟ್ಟಿದ್ದಾರೆ. ಕೊರೋನಾ ಸಂಶಯದ ಮೇಲೆ ಕೆಲವು ಪ್ರಾಥಮಿಕ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್‌ ವರದಿ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಗಂಟಲು ದ್ರವವನ್ನು ಹಾಸನಕ್ಕೆ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಶುಕ್ರವಾರ ಬರಲಿರುವ ವರದಿಯ ಮೇಲೆ ಜಿಲ್ಲಾಡಳಿತ ಚಿತ್ತ ಇದೆ.

Follow Us:
Download App:
  • android
  • ios