ಬೆಂಗಳೂರು, (ಮಾ.28): ಕರ್ನಾಟಕ ರಸ್ತೆ ಸಾರಿಗೆ (KSRTC)ಬಸ್‌ನಲ್ಲಿ ಪ್ರಯಾಣಿಸಿದ್ದ ಇಬ್ಬರಿಗೆ ಕೊರೋನಾ ವೈರಸ್ ಮಾರಿ ಅಂಟಿಕೊಂಡಿರುವುದು ಖಚಿತವಾಗಿದೆ. ಇದರಿಂದ ಈ ಎರಡು ಬಸ್‌ಗಳಲ್ಲಿ ಪ್ರಯಾಣಿಸಿದರಿಗೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಾರಿಗೆ ಸಂಸ್ಥೆ ಮನವಿ ಮಾಡಿಕೊಂಡಿದೆ.

ಬಸ್‌ 01: ಮಾರ್ಚ್ 18ರಂದು ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ರಾಜಹಂಸ ಬಸ್ ಸಂಖ್ಯೆ KA-57, F-3802 ದಾವಣಗೆರೆಗೆ ತೆರಳಿದೆ. ಈ ಬಸ್ಸಿನಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಆದ್ದರಿಂದ ಈ ಬಸ್ಸಿನಲ್ಲಿ ಪ್ರಯಾಣಿಸಿದ ಇತರೆ ಪ್ರಯಾಣಿಕರು ದಯವಿಟ್ಟು ಕೂಡಲೇ ಹತ್ತಿರದ ಜಿಲ್ಲಾಸ್ಪತ್ರಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಕೆಎಸ್‌ಆರ್‌ಟಿಸಿ ಸಂಸ್ಥೆ ಮನವಿ ಮಾಡಿಕೊಂಡಿದೆ. 

ಬಸ್ 02: ದಿನಾಂಕ 21-03-2020ರಂದು ಕೆಎಸ್‌ಆರ್‌ಟಿಸಿ ಬಸ್ ಸಂಖ್ಯೆ KA-19, F-3329ನಲ್ಲಿ ಸಂಜೆ 4.30ಕ್ಕೆ ಬೆಂಗಳೂರು ಮೆಜೆಸ್ಟಿಕ್‌ (ಕೆಂಪೇಗೌಡ ಬಸ್‌ ನಿಲ್ದಾಣ)  ಮಂಗಳೂರಿಗೆ ತೆರಳಿದೆ. ಈ ಬಸ್‌ನಲ್ಲಿ ಪ್ರಯಾಣಿಸಿದ ಪ್ರಯಣಿಕರೊಬ್ಬರಿಗೆ ಕೊರೋನಾ ಸೋಂಕು ಇರುವುದು ವರದಿಯಲ್ಲಿ ದೃಢವಾಗಿದೆ. ಈ ಹಿನ್ನೆಲಯಲ್ಲಿ ಈ ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ದಯವಿಟ್ಟು ಈ ತಕ್ಷಣ ಹತ್ತಿರದ ಜಿಲ್ಲಾಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಿದೆ.

ಈ ಎರಡು ಬಸ್‌ಗಳಲ್ಲಿ ಯಾರೆಲ್ಲಾ ಪ್ರಯಾಣಸಿದ್ದೀರೋ ಅವರೆಲ್ಲರೂ ಸಹ ಸಮೀಪದ ಜಿಲ್ಲಾಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ. ಕೊರೋನಾ ಸೋಂಕು ತಗಿಲಿದ್ಯಾ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

"