ಬೆಂಗಳೂರು(ಮಾ. 30) ಕೊರೋನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ತಮ್ಮ ತಮ್ಮ ಕೈಲಾದ ಸಹಾಯ-ಸಹಕಾರ ಮಾಡುತ್ತಲೇ ಬಂದಿದ್ದಾರೆ.  ಇದೀಗ ಕ್ಯಾಬ್ ಸೇವಾ ಸಂಸ್ಥೆ ಓಲಾ ಸಹ ತನ್ನ ಅಳಿಲು ಸೇವೆ ನೀಡಲು ಮುಂದಾಗಿದೆ.

ವೈದ್ಯರು ಮತ್ತು ಕೋವಿಡ್ 19 ಗೆ ಸಂಬಂಧಿಸಿದ ಇತರೆ ಟ್ರಾನ್ಸ್ ಫೋರ್ಟ್ ವ್ಯವಸ್ಥೆಗೆ 500 ಕ್ಯಾಬ್ ಗಳನ್ನು ನೀಡುತ್ತೇನೆ ಎಂದು ಓಲಾ ತಿಳಿಸಿದೆ. ಈ ಬಗ್ಗೆ ಡಿಸಿಎಂ ಅಶ್ವಥ್  ನಾರಾಯಣ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ನಾನು ಓಲಾ ಕ್ಯಾಬ್ ಸಿಇಒ ಭವೀಶ್ ಅಗರ್ ವಾಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಸಿಎಂ ತಿಳಿಸಿದ್ದಾರೆ.

ಬೆಂಗಳೂರಿಗರೆ ನೀವು ಹಾಕಿದ ಮಾಸ್ಕ್ ಸೇಫಾ?

ಕೊರೋನಾ ಮಾರಿ ಹರಡುವುದನ್ನು ತಡೆಯಲು ಮಾರ್ಚ್ 23 ರಂದು ಓಲಾ, ಊಬರ್ ಮತ್ತು ಇತರೆ ಟ್ಯಾಕ್ಸಿ ಸೇವೆಯನ್ನು ಬಂದ್ ಮಾಡಲಾಗಿತ್ತು.  21 ದಿನಗಳ ಲಾಕ್ ಡೌನ್ ಗೆ ಬೆಂಬಲ ಕೊಟ್ಟಿದ್ದ ಓಲಾ ಡ್ರೈವ್ ದ ಡ್ರೈವರ್ ಫೌಂಡೇಶನ್ ಎಂಬ ಅಭಿಯಾನವನ್ನು ಆರಂಭಿಸಿತ್ತು. 

ಮಾರ್ಚ್ 23 ರಂದು ದೇಶವನ್ನು ಲಾಕ್ ಡೌನ್ ಮಾಡಲು ಪ್ರಧಾನಿ ನರೇಂದ್ರ ಮೋದಿ ವಿನಂತಿ ಮಾಡಿಕೊಂಡಿದ್ದರು. ಏಪ್ರಿಲ್ 14ರ ತನಕ ಸದ್ಯದ ಲಾಕ್ ಡೌನ್ ದಿನಾಂಕ ಜಾರಿಯಲ್ಲಿ ಇರುತ್ತದೆ.