ಬೆಂಗಳೂರು(ಮಾ. 31)  ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡಲು ಇಡೀ ದೇಶಕ್ಕೆ ಲಾಕ್ ಡೌನ್ ಕರೆ ನೀಡಲಾಗಿದೆ. ಲಾಕ್ ಡೌನ್ 7ನೇ ದಿನಕ್ಕೆ ಕಾಲಿರಿಸಿದ್ದು ನಾಗರಿಕರು ಸಹಕಾರ ನೀಡುತ್ತಲೇ ಇದ್ದಾರೆ.

ಇದೆಲ್ಲದರ ನಡುವೆ ಸಂಸದ ರಾಜೀವ್ ಚಂದ್ರಶೇಖರ್ ಸೋಶಿಯಲ್ ಮೀಡಿಯಾ ಮೂಲಕ ನಾಗರಿಕರ ಮುಂದೆ ಬಂದಿದ್ದು ಜನರು ಆದೇಶವನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಅಮೆರಿಕ, ಚೀನಾ, ಇಟಲಿಯಂತಹ ದೇಶಗಳೆ ಕೊರೋನಾ ವಿರುದ್ಧ ಹೋರಾಟ ಮಾಡಲಾಗದ ಸ್ಥಿತಿ ತಲುಪಿರುವುದು ಆತಂಕ ತರುವ ವಿಚಾರ.  ಡಾರ್ವಿನ್ ಮಾತುಗಳನ್ನು ಉಲ್ಲೇಖಿಸಿರುವ ಚಂದ್ರಶೇಖರ್ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕೊರೋನಾ ವಿರುದ್ಧದ ಹೋರಾಟಕ್ಕೆ ಧಾವಿಸಿದ ರಾಜೀವ್ ಚಂದ್ರಶೇಖರ್

ಭಾರತವನ್ನು ಲಾಕ್‌ಡೌನ್‌ ಮಾಡಿದರೂ ಜನರೂ ಓಡಾಡುತ್ತಿರುವುದು ಇದೀಗ ಆತಂಕ ಹೆಚ್ಚಿಸಿದ್ದ ಬಗ್ಗೆಯೂ ಸಂಸದರು ಮಾತನಾಡಿದ್ದಾರೆ. ಹೊರ ದೇಶಗಳು ಯಾವ ರೀತಿ ಅಪಾಯಕ್ಕೆ ಸಿಲುಕಿಕೊಂಡವು. ನಾವು ಅಂಥ ಸ್ಥಿತಿಗೆ ತಲುಪಬಾರದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ನಿರ್ಗತಕರ ಹೊಟ್ಟೆ ತುಂಬಿಸುವುದಕ್ಕೂ ಮುಂದಾಗಿದ್ದ ಚಂದ್ರಶೇಖರ್ ನಮ್ಮ ಬೆಂಗಳೂರು ಫೌಂಡೇಶನ್ ಮೂಲಕ ನೆರವಿನ ಹಸ್ತ ಚಾಚಿದ್ದರು. ಕರ್ನಾಟಕದಲ್ಲಿ ಮಂಗಳವಾರ ಮತ್ತೆ ಏಳು ಪಾಸಿಟಿವ್ ಕೇಸ್ ಕಂಡುಬಂದಿವೆ. ಮೈಸೂರು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮತ್ತಷ್ಟು ಕಟ್ಟೆಚ್ಚರ ವಹಿಸಲಾಗಿದೆ.