Asianet Suvarna News Asianet Suvarna News

ಕೊರೋನಾ ಭೀತಿ ನಡುವೆಯೂ ಅಂಬೇಡ್ಕರ್ ಜಯಂತಿಗೆ ಗ್ರೀನ್ ಸಿಗ್ನಲ್: ಶರತ್ತುಗಳು ಅನ್ವಯ

ಕೊರೋನಾ ಹಾವಳಿ ಹೆಚ್ಚಾಗಿರುವುದರಿಂದ ಏಪ್ರಿಲ್ 14ರ ವರೆಗೆ ಲಾಕ್‌ಡೌನ್ ಹೇರಲಾಗಿದೆ. ಇದರ ನಡುವೆ ಕರ್ನಾಟಕದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಮ್ ಜಯಂತಿ ಆಚರಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ, ಶರತ್ತುಗಳನ್ನು ವಿಧಿಸಿದೆ
Karnataka Govt Gives permission to celebrate ambedkar and babu jagan jeevan ram jayanti
Author
Bengaluru, First Published Apr 1, 2020, 10:36 PM IST
ಬೆಂಗಳೂರು, (ಏ.01): ಕೊರೋನಾ ಆತಂಕದ ನಡುವೆಯೂ ಡಾ.ಬಾಬು ಜಗಜೀವನ್ ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಆಚರಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಇದೇ ಏಪ್ರಿಲ್ 5ರಂದು ಜಗಜೀವನ್ ರಾಮ್ ಮತ್ತು ಏ.14 ಅಂಬೇಡ್ಕರ್ ದಿನಾಚರಣೆಯನ್ನು ಸರಳವಾಗಿ ಆಚರಿಸಲು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್ ಆದೇಶ ಹೊರಡಿಸಿದ್ದಾರೆ.

1ರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್: ಕೊರೋನಾದಿಂದ ಸಿಕ್ತು ಗ್ರೇಸ್

ಆದ್ರೆ, ಸರಳವಾಗಿ ಗುಂಪು-ಗುಂಪಾಗಿ ಕೂಡಿಕೊಂಡು ಆಚರಣೆ ಬೇಡ ಎಂದು ಶರತ್ತು ವಿಧಿಸಲಾಗಿದೆ. ಹಿಂದುಳಿದ ವರ್ಗಗಳ ಪ್ರಮುಖ ನಾಯಕರ ಹುಟ್ಟ ಹಬ್ಬ ಆಚರಣೆ ವೇಳೆ ಜನ ಸಂದಣಿ ಇಲ್ಲದಂತೆ ನೋಡಿಕೊಳ್ಳಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
Karnataka Govt Gives permission to celebrate ambedkar and babu jagan jeevan ram jayanti
Follow Us:
Download App:
  • android
  • ios