ನೆಲಮಂಗಲ(ಮಾ.)  ಮಾರಾಣಾಂತಿಕ ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ, ಗ್ರಾಮದ ಶುಚಿತ್ವ ಕಾಪಾಡಲು ಕ್ರಿಮಿನಾಶಕವನ್ನು ಸ್ವತಃ ತಾವೇ ಸಿಂಪಡಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸಲು ಹಿರಿಯ ನಟಿ ಲೀಲಾವತಿ ಮತ್ತು ಅವರ ಪುತ್ರ ನಟ ವಿನೋದ್ ರಾಜ್ ಮುಂದಾಗಿದ್ದಾರೆ.

ಗ್ರಾಮದ ಸ್ವಚ್ಛತೆಗಾಗಿ ಸ್ವತಃ ಕ್ರಿಮಿನಾಶಕ ಸಿಂಪಡಿಸುವ ಗನ್ ಹಿಡಿದಿದ್ದು ಜಾಗೃತಿ ಮೂಡಿಸುತ್ತ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದ ಬೀದಿ ಬೀದಿಗಳಲ್ಲಿ ಕ್ರಿಮಿನಾಶಕ ಸಿಂಪಡಿಸಿದ್ದಾರೆ. ಗ್ರಾಮದ ಜನರಿಗೆ ಯಾವುದೇ ವೈರಸ್ ಬರದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಚೀನಾದಲ್ಲಿ ಬಾವಲಿಯೊಂದಿಗೇ ಸೆಕ್ಸ್: ಕೊರೋನಾ ಹುಟ್ಟಿಗೆ ಇದೇ ಕಾರಣನಾ?...

ನಟ ವಿನೋದ್ ರಾಜ್ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತಪಡಿಸಿದೆ. ಇಡೀ ಗ್ರಾಮವೇ ನಟ ವಿನೋದ್ ರಾಜ್ ಗೆ ಬೆಂಬಲಕ್ಕೆ ನಿಂತು ಗ್ರಾಮ ಸ್ವಚ್ಛತೆ ಮಾಡಿದ್ದಾರೆ. ವಿಶೇಷ ಎಂದರೇ ತಮ್ಮ ತೋಟದಲ್ಲಿ ಬಳಸುವ ಮಿನಿ ಟ್ರ್ಯಾಕ್ಟರ್ ಸಹಾಯದಿಂದ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದಾರೆ.