Asianet Suvarna News Asianet Suvarna News

ಲಾಕ್‌ಡೌನ್: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರ ಪ್ರತಿಕ್ರಿಯೆ ಇದು!

ದೇಶದಲ್ಲಿ ಲಾಕ್‌ಡೌನ್ ಮುಂದುವರೆದಿದೆ. ಕೆಲವೆಡೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದರೆ ಇನ್ನು ಕೆಲವು ಕಡೆ ಜನ ಡೋಂಟ್ ಕೇರ್ ಎಂದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಸ್ಥಿಗತಿಗಳು ಹೇಗಿವೆ? ಜನರ ಪ್ರತಿಕ್ರಿಯೆ ಹೇಗಿವೆ? ಇಲ್ಲಿದೆ ಗ್ರೌಂಡ್ ರಿಪೋರ್ಟ್! 
 

India lockdown public response from various district of karnataka
Author
Bengaluru, First Published Apr 7, 2020, 12:26 PM IST

ಬೆಂಗಳೂರು (ಏ. 07): ದೇಶದಲ್ಲಿ ಲಾಕ್‌ಡೌನ್ ಮುಂದುವರೆದಿದೆ. ಕೆಲವೆಡೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದರೆ ಇನ್ನು ಕೆಲವು ಕಡೆ ಜನ ಡೋಂಟ್ ಕೇರ್ ಎಂದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಸ್ಥಿಗತಿಗಳು ಹೇಗಿವೆ? ಜನರ ಪ್ರತಿಕ್ರಿಯೆ ಹೇಗಿವೆ? ಇಲ್ಲಿದೆ ಗ್ರೌಂಡ್ ರಿಪೋರ್ಟ್! 

ಕೆ ಆರ್ ಮಾರ್ಕೆಟ್‌ನಲ್ಲಿ ಕೊರೋನಾ ಜಾಗೃತಿ ಹುದುಗಿ ಹೋಗಿದೆ. ಮೈಸೂರು ರಸ್ತೆಯ ತಾತ್ಕಾಲಿಕ ತರಕಾರಿ ಮಾರ್ಕೆಟ್‌ನಲ್ಲಿ ಜನವೋ ಜನ. ಸಾಮಾಜಿಕ ಅಂತರವನ್ನು ಗಾಳಿಗೆ ತೂರಲಾಗಿದೆ. ತರಕಾರಿ, ಹೂವು, ಹಣ್ಣುಗಳ ವ್ಯಾಪಾರಕ್ಕೆ ಜನ ಮುಗಿ ಬಿದ್ದಿದ್ದಾರೆ. 

"

ಶಿವಮೊಗ್ಗದಲ್ಲಿ ಕೊರೋನಾಗೆ ಡೋಂಟ್ ಕೇರಿ ಎಂದಿದ್ದಾರೆ ಜನ. ಎಪಿಎಂಸಿ ತರಕಾರಿ ಮಾರ್ಕೆಟ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ವ್ಯಾಪಾರ ಮಾಡಿದ್ದಾರೆ. ಶಿವಮೊಗ್ಗ ಎಪಿಎಂಸಿ ಚಿತ್ರಣವಿದು. 

"

ದಾವಣಗೆರೆ ಎಪಿಎಂಸಿಯಲ್ಲೂ ಅದೇ ಕಥೆ. ತರಕಾರಿ, ಹೂವು, ಹಣ್ಣಿಗಾಗಿ ಜನ ಮುಗಿ ಬಿದ್ದಿದ್ದಾರೆ. 

"

ಹಾಸನದಲ್ಲಿ ಪ್ರತ್ಯೇಕವಾಗಿ ಮಾರ್ಕೆಟ್‌ ಮಾಡಿದ್ರೂ ನೋ ಯೂಸ್. ಜನ ಅಗತ್ಯ ವಸ್ತಯಗಳ ಖರೀದಿಗೆ ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರದ ಮಾತೇ ಇಲ್ಲ. 

"

ಗುಮ್ಮಟನಗರಿ ವಿಜಯಪುರದಲ್ಲಿಯೂ ಲಾಕ್‌ಡೌನ್‌ಗೆ ಜನ ಡೋಂಟ್ ಕೇರ್ ಎಂದಿದ್ದಾರೆ.  ಪುಟ್ಟಪುಟ್ಟ ಮಕ್ಕಳನ್ನು ಮಾರ್ಕೆಟ್‌ಗೆ ಕರೆದುಕೊಂಡು ಬಂದಿದ್ದಾರೆ. 

"

ಗದಗ್ ನಗರದ ರಂಗನವಾಡಿ ಗಲ್ಲಿಯಲ್ಲಿ ಶಂಕಿತ ವೃದ್ಧೆಯೊಬ್ಬರು ಪತ್ತೆಯಾಗಿದ್ದಾರೆ. ದತ್ತಾತ್ರೇಯ ರಸ್ತೆಯ ರಂಗನವಾಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 

"

Follow Us:
Download App:
  • android
  • ios