Asianet Suvarna News Asianet Suvarna News

ಮಡಿಕೇರಿ: 14,892 ಗ್ರಾಹಕರಿಗೆ ಅಡುಗೆ ಅನಿಲ ಪೂರೈಕೆ

ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಮನೆ ಮನೆಗೆ ಅಡುಗೆ ಅನಿಲ ತಲುಪಿಸಲಾಗುತ್ತಿದೆ ಎಂದು ಎಲ್‌ಪಿಜಿ ಮಂಗಳೂರು ವಿಭಾಗದ ಸಹಾಯಕ ವ್ಯವಸ್ಥಾಪಕ ಹಾಗೂ ಜಿಲ್ಲಾ ಎಲ್‌ಪಿಜಿ ನೋಡಲ್‌ ಅಧಿಕಾರಿ ಅಭಿಜಿತ್‌ ಪಿ.ವಿಜಯ್‌ ಅವರು ತಿಳಿಸಿದ್ದಾರೆ.

 

Gas cylinder distributed to people in Madikeri
Author
Bangalore, First Published Apr 2, 2020, 8:40 AM IST

ಮಡಿಕೇರಿ(ಎ.02): ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಮನೆ ಮನೆಗೆ ಅಡುಗೆ ಅನಿಲ ತಲುಪಿಸಲಾಗುತ್ತಿದೆ ಎಂದು ಎಲ್‌ಪಿಜಿ ಮಂಗಳೂರು ವಿಭಾಗದ ಸಹಾಯಕ ವ್ಯವಸ್ಥಾಪಕ ಹಾಗೂ ಜಿಲ್ಲಾ ಎಲ್‌ಪಿಜಿ ನೋಡಲ್‌ ಅಧಿಕಾರಿ ಅಭಿಜಿತ್‌ ಪಿ.ವಿಜಯ್‌ ಅವರು ತಿಳಿಸಿದ್ದಾರೆ.

ನಗದು ನಿರ್ವಹಣೆಯನ್ನು ತಪ್ಪಿಸಲು ಗ್ರಾಹಕರು ಆನ್‌ಲೈನ್‌ನಲ್ಲಿ ಬುಕ್‌ ಮಾಡಿ ಪಾವತಿಸುವಂತಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲ ಗ್ರಾಹಕರಿಗೆ ನಿರಂತರ ಅಡುಗೆ ಅನಿಲ ಪೂರೈಸಲಾಗುವುದು. ಎಲ್‌ಪಿಜಿ ಸಿಲಿಂಡರ್‌ ಸರಬರಾಜು ಮಾಡಲು ವಿತರಕ ಸಿಬ್ಬಂದಿ, ಗೊಡೌನ್‌ ಕೀಪರ್‌, ಮೆಕ್ಯಾನಿಕ್ಸ್‌ ಮತ್ತು ಡೆಲಿವರಿ ಹುಡುಗರು ಸಂಪೂರ್ಣ ಸಿದ್ಧತೆಯಲ್ಲಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

1ರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್: ಕೊರೋನಾದಿಂದ ಸಿಕ್ತು ಗ್ರೇಸ್

ಭಾರತ ಸರ್ಕಾರವು ಎಲ್ಲ ಉಜ್ವಲ ಗ್ರಾಹಕರಿಗೆ 2020ರ ಏಪ್ರಿಲ್‌ನಿಂದ ಜೂನ್‌ವರೆಗೆ ಪ್ರತಿ ತಿಂಗಳಿಗೆ 1 ರಂತೆ 3 ಉಚಿತ ಎಲ್‌ಪಿಜಿ ಘೋಷಿಸಿದೆ. ಇದಕ್ಕೆ ಸಂಬಂಧಿಸಿದಂತೆ ಉಜ್ವಲ ಯೋಜನೆಯಡಿ ಎಲ್‌ಪಿಜಿ ಖರೀದಿಸಲು ಮೂರು ತಿಂಗಳ ಹಣವನ್ನು ಆಯಾ ತಿಂಗಳಿನಲ್ಲಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಸೌಲಭ್ಯ ಹೊಂದಿರುವವರ ಖಾತೆಗೆ ನೀಡಲಾಗುವುದು.

ಲಾಕ್‌ಡೌನ್: 13 ಕಿ.ಮೀ ನಡೆದೇ ಆಸ್ಪತ್ರೆಗೆ ಹೋಗುವ ಸಿಬ್ಬಂದಿ..!

ಒಟ್ಟಾರೆಯಾಗಿ ಈ ಯೋಜನೆಯಡಿ ಕೊಡಗು ಜಿಲ್ಲೆಯ 14,892 ಉಜ್ವ್ವಲ ಫಲಾನುಭವಿಗಳಿಗೆ ಉಚಿತ ಎಲ್‌ಪಿಜಿ ದೊರೆಯಲಿದೆ. ಕೋವಿಡ್‌-19 ಸಂಬಂಧ ಎಲ್‌ಪಿಜಿ ವಿತರಕರು, ಸಾಗಣೆದಾರರು ಮತ್ತು ಎಲ್‌ಪಿಜಿ ಸ್ಥಾವರಗಳಲ್ಲಿನ ಗುತ್ತಿಗೆದಾರರಿಗೆ ಯಾವುದೇ ರೀತಿಯ ಜೀವಹಾನಿ ಸಂಭವಿಸಿದಲ್ಲಿ ಅಂತಹ ಸಿಬ್ಬಂದಿಯ ಕುಟುಂಬಕ್ಕೆ 5 ಲಕ್ಷ ರು.ಗಳ ವಿಮೆಯನ್ನು ಸರ್ಕಾರದ ನಿರ್ದೇಶನದಂತೆ ಕ್ರಮವಹಿಸಲಾಗುವುದು ಎಂದು ಹೇಳಿದ್ದಾರೆ.

Follow Us:
Download App:
  • android
  • ios