Asianet Suvarna News Asianet Suvarna News

ಇನ್ಮುಂದೆ ಕಿಮ್ಸ್‌ನಲ್ಲೇ ಕೊರೋನಾ ವೈರಸ್‌ ಟೆಸ್ಟ್‌

ಕಿಮ್ಸ್‌ ಸೇರಿದಂತೆ ರಾಜ್ಯದ ಹತ್ತು ಮೆಡಿಕಲ್‌ ಕಾಲೇಜುಗಳಿಗೆ ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌) ಕೊರೋನಾ ಪರೀಕ್ಷೆಗೆ ಅನುಮತಿ|ಈ ವರೆಗೆ ಬೆಂಗಳೂರು, ಶಿವಮೊಗ್ಗಕ್ಕೆ ಇಲ್ಲಿ ದಾಖಲಾಗಿದ ಶಂಕಿತರ ರಕ್ತ, ಗಂಟಲು ದ್ರವವನ್ನು ಕಳಿಸಿ ಪರೀಕ್ಷೆ ವರದಿ ಪಡೆಯಲಾಗುತ್ತಿತ್ತು|

Coronavirus Test will Be Start in KIMS in Hubballi
Author
Bengaluru, First Published Apr 8, 2020, 9:36 AM IST

ಹುಬ್ಬಳ್ಳಿ(ಏ.08): ಕೊರೋನಾ ವೈರಸ್‌ ಪರೀಕ್ಷೆ ಇಲ್ಲಿನ ಕಿಮ್ಸ್‌ನಲ್ಲಿ ಬುಧವಾರದಿಂದ ಆರಂಭವಾಗಲಿದ್ದು, ಮೂರ್ನಾಲ್ಕು ದಿನಗಳ ಕಾಲ ವರದಿಗಾಗಿ ಕಾಯುವ ಪ್ರಮೇಯ ತಪ್ಪಲಿದೆ. ಕಿಮ್ಸ್‌ ಸೇರಿದಂತೆ ರಾಜ್ಯದ ಹತ್ತು ಮೆಡಿಕಲ್‌ ಕಾಲೇಜುಗಳಿಗೆ ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌) ಕೊರೋನಾ ಪರೀಕ್ಷೆಗೆ ಮಂಗಳವಾರ ಅನುಮತಿ ನೀಡಿದೆ. 

ಇದರೊಂದಿಗೆ ನಾನಾ ಕಡೆಗಳಿಗೆ ಅಲೆಯುವುದು ತಪ್ಪಿದಂತಾಗಿದೆ. ಈ ವರೆಗೆ ಬೆಂಗಳೂರು, ಶಿವಮೊಗ್ಗಕ್ಕೆ ಇಲ್ಲಿ ದಾಖಲಾಗಿದ ಶಂಕಿತರ ರಕ್ತ, ಗಂಟಲು ದ್ರವವನ್ನು ಕಳಿಸಿ ಪರೀಕ್ಷೆ ವರದಿ ಪಡೆಯಲಾಗುತ್ತಿತ್ತು. ಏ. 8ರಿಂದಲೇ ಟೆಸ್ಟಿಂಗ್‌ ಆರಂಭವಾಗಲಿದೆ. 

ಆಶಾ ಕಾರ್ಯಕರ್ತೆಯರೊಂದಿಗೆ ಉಡಾಫೆ ವರ್ತನೆ: ನಿಮಗೇಕೆ ಮಾಹಿತಿ ನೀಡಬೇಕು ಎಂದು ಕ್ಯಾತೆ!

ಬುಧವಾರ ಧಾರವಾಡ ಶಂಕಿತರ ಪರೀಕ್ಷೆ ಮಾತ್ರ ನಡೆಯಲಿದೆ. ಬಳಿಕ ಉತ್ತರ ಕರ್ನಾಟಕದ ಭಾಗ ಸೇರಿದಂತೆ ಇತರೆಡೆಯ ರೋಗಿಗಳ ಕೊರೋನಾ ವೈರಸ್‌ ಪರೀಕ್ಷೆ ಇಲ್ಲಿ ನಡೆಸಲಾಗುವುದು ಎಂದು ಕನ್ನಡಪ್ರಭಕ್ಕೆ ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.
 

Follow Us:
Download App:
  • android
  • ios