ಮಂಡ್ಯ[ಮಾ.23]: ಕೊರೋನಾ ಶಂಕಿತನ ಕುಟುಂಬಸ್ಥರು ಅಧಿಕಾರಿಗಳ ಸೂಚನೆ ಪಾಲಿಸದೆ ರಾಜಾರೋಷವಾಗಿ ಹೊರಗಡೆ ಓಡಾಡುತ್ತಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಇಂದು[ಸೋಮವಾರ] ನಡೆದಿದೆ. ಕೊರೋನಾ ಶಂಕಿತನ ಕುಟುಂಬಸ್ಥರ ಉದ್ದಟತನದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. 

ದುಬೈನಿಂದ ವಾಪಸ್ಸಾಗಿದ್ದ ವ್ಯೆಕ್ತಿಯಲ್ಲಿ ಕೊರೋನಾ ಶಂಕೆ ವ್ಯಕ್ತವಾಗಿತ್ತು.ಹೀಗಾಗಿ ಆ ವ್ಯೆಕ್ತಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

‘ಕೊರೋನಾ ಶಂಕಿತರೇ ಹುಷಾರ್: ಹೊರಗಡೆ ಓಡಾಡಿದ್ರೆ ಪೊಲೀಸರು ಅರೆಸ್ಟ್ ಮಾಡ್ತಾರೆ’

ಶಂಕಿತನ ಕುಟುಂಬಸ್ಥರಿಗೆ ಮನೆಯಲ್ಲೇ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದರು. ಆದರೆ, ಜಿಲ್ಲಾಧಿಕಾರಿಗಳ ಆದೇಶವನ್ನ ಉಲ್ಲಂಘಿಸಿದ ಶಂಕಿತನ ಕುಟುಂಬಸ್ಥರು ಹೊರಗಡೆ ಓಡಾಡುತ್ತಿದ್ದಾರೆ. ಸದ್ಯ ಶಂಕಿತನ ಕುಟುಂಬಸ್ಥರ ಮೇಲೆ ಬೆಸಗರಹಳ್ಳಿ ಪೊಲೀಸರು ನಿಗಾ ವಹಿಸಿದ್ದಾರೆ.