ಬೆಂಗಳೂರು, (ಮಾ.26): ಈವರೆಗೂ ಕರ್ನಾಟಕದಲ್ಲಿ ವಿದೇಶದಿಂದ ಬಂದವರಲ್ಲಿ ಸೋಂಕು ತಗುಲಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ ವಿದೇಶದಿಂದ ಬಂದವರಿಂದ ಮನೆಯವರಿಗೆ ಸೋಂಕು ತಗುಲಿರುವುದನ್ನು ಕೇಳಿದ್ವಿ. ಆದ್ರೆ, ಗುರುವಾರ ಬೆಳಕಿಗೆ ಬಂದ ಮೈಸೂರಿನ 52ನೇ ಕೇಸ್ ಬಾರೀ ಆತಂಕವನ್ನು ಸೃಷ್ಟಿಸಿದೆ.

"

ಮೈಸೂರು ಜಿಲ್ಲೆಯ ನಂಜನಗೂಡಿನ 35 ವರ್ಷದ ವ್ಯಕ್ತಿ ಕೊರೋನಾ ವೈರಸ್ ಪಾಸಿಟಿವ್ ದೃಢವಾಗಿದೆ. ಆದ್ರೆ, ಈ ವ್ಯಕ್ತಿ ಯಾವುದೇ ವಿದೇಶಕ್ಕೆ ಹೋಗಿಲ್ಲ. ಹೊರ ರಾಜ್ಯಕ್ಕೂ ಕಾಲಿಟ್ಟಿಲ್ಲ. ಆದರೂ ಈತನಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢವಾಗಿದೆ. 

ವ್ಯಾಪಿಸುತ್ತಲೇ ಇದೆ ಕೊರೋನಾ, ಮತ್ತೆ ನಾಲ್ವರಿಗೆ ಸೋಂಕು: ಒಟ್ಟು 55ಕ್ಕೇರಿಕೆ 

ಫಾರಿನ್‌ಗೂ ಹೋಗಿಲ್ಲ, ಹೋಗಿಬಂದವರ ಜೊತೆನೂ ಸಂಪರ್ಕವೂ ಇಲ್ಲ. ಊರಲ್ಲೇ ಇದ್ರೂ ಕೊರೋನಾ ತಗುಲಿರುವುದು ಭಯ ಹುಟ್ಟಿಸಿದೆ. ಅಷ್ಟೇ ಅಲ್ಲ ಇದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. 

ಈ ವ್ಯಕ್ತಿ ವೈದ್ಯಕೀಯ ತಂತ್ರಜ್ಞರೊಂದಿಗೆ ಸಂಪರ್ಕ ಹೊಂದಿದ್ದ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನೂ ಈ ಬಗ್ಗೆ ವೈದ್ಯಕೀಯ ತನಿಖೆ ಪ್ರಗತಿಯಲ್ಲಿದೆ.

ಇದು ಕರ್ನಾಟಕದಲ್ಲಿ ಕೊರೋನಾ 3ನೇ ಸ್ಟೇಜ್‌ಗೆ ಕಾಲಿಟಿದ್ಯಾ ಎನ್ನುವ ಅನುಮಾನಗಳಿಗೆ ಉದ್ಭವಿಸಿದೆ. ಒಂದು ವೇಳೆ ಕೊರೋನಾ ಈ ರೀತಿಯಾಗಿ ಹರಡಿದ್ರೆ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರುವುದು ಪಕ್ಕಾ. ಅದಕ್ಕೆ ಹೇಳುವುದು ಸಾರ್ವಜನಿಕರು ದಯವಿಟ್ಟು ಮನೆಯಲ್ಲೇ ಇರಿ. ಸೋಂಕು ಹರಡುವಿಕೆಯನ್ನು ತಪ್ಪಿಸಿ.