Asianet Suvarna News Asianet Suvarna News

'ಸುಮ್ ಸುಮ್ನೆ ಸುತ್ತೋರಿಗೆ ಈಗಲ್ಲ ಇನ್ಮುಂದೆಯೂ ಪೆಟ್ರೋಲ್ ಇಲ್ಲ'

ಕೊರೋನಾ ಮಾರಿ ಹೊಡೆದೋಡಿಸುವುದು ನಮ್ಮಲ್ಲಿಯೇ ಇದೆ/ ಸಂಸದ ಪ್ರತಾಪ್ ಸಿಂಹ ಸೂತ್ರ/ ವಿನಾಕಾರಣ ತಿರುಗಾಡಿದರೆ ಕಠಿಣ ಕ್ರಮ/ ಮೈಸೂರಿನಲ್ಲಿ ಸದ್ಯ ಪರಿಸ್ಥಿತಿ ಹೇಗಿದೆ?

coronavirus covid 19 india lockdown mp pratap simha reaction
Author
Bengaluru, First Published Mar 30, 2020, 5:39 PM IST

ಮೈಸೂರು(ಮಾ. 30)   ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನ ಪಾಸಿಟಿವ್ ಹೆಚ್ಚಾಗುತ್ತಿರುವ ವಿಚಾರವನ್ನು ಎಲ್ಲರೂ ಗಂಭೀರವಾಗಿ ಪರಿಣಿಸಿದ್ದಾರೆ.   ಪ್ರಾರಂಭದಲ್ಲಿ ದುಬೈನಿಂದ ಬಂದ ಇಬ್ಬರಿಗೆ ಕೊರೋನಾ ಪಾಸಿಟಿವ್ ಇತ್ತು. ನಂತರ ಜುಬಿಲಿಯಂಟ್ ಕಾರ್ಖಾನೆ ನೌಕರಿಗೆ ತಗುಲಿತು.  ಆತನಿಗೆ ಹೇಗೆ ಬಂತು ಇನ್ನೂ ಗೊತ್ತಾಗಿಲ್ಲ.  ಆದರೆ ಆತನ‌ ನಿಕಟ ಸಂಪರ್ಕದಲ್ಲಿ ಇದ್ದ 11 ಜನರಲ್ಲಿ 9 ಜನರಿಗೆ ಸೋಂಕು ತಗುಲಿದೆ. ಈ 9 ಜನ ಇನ್ನೆಷ್ಟು ಜನರಿಗೆ ಅಂಟಿಸಿದ್ದಾರೆ ಗೊತ್ತಿಲ್ಲ. ಹಾಗಾಗಿ ಕಾರ್ಖಾನೆಯ ಎಲ್ಲಾ ನೌಕರರ ಕುಟುಂಬ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ

ರಾಜ್ಯದಲ್ಲಿ ಲಾಕ್ ಡೌನ್ ಎಲ್ಲಿಯವರೆಗೆ? ಸಿಎಂ ಅಧಿಕೃತ ಪತ್ರಿಕಾ ಹೇಳಿಕೆ

ಪ್ರತಿ‌ ಹತ್ತು ಮನೆಗೆ ಒಬ್ಬ ಪೊಲೀಸ್ ನೇಮಕ ಮಾಡಿ ಮಾನಿಟರ್ ಮಾಡಲಾಗುತ್ತಿದೆ. ಜನ ಲಾಕ್‌ಡೌನ್ ಗೆ ಸಹಕಾರ ಕೊಡಬೇಕು. ಯಾರೂ ಹೆದರಿಕೊಳ್ಳಬೇಕಾದ ಅಗತ್ಯ ಇಲ್ಲ. ನೀವೆಲ್ಲ 21 ದಿನ ಮನೆಯಲ್ಲಿ ಇದ್ದರೆ 22ನೇ ದಿನ‌ ಖಂಡಿತವಾಗಿ ಕೊರೋನಾ ಇರಲ್ಲ. ಯಾರಾದರೂ ಈಗಲೂ ರಸ್ತೆಗೆ ವಿನಾಕಾರಣ ಆಚೆಗೆ ಬಂದರೆ ಕಠಿಣ ಕ್ರಮ ಆಗುತ್ತೆ. ಮುಂದೆ ಬೈಕ್‌ನಲ್ಲಿ ಸುಮ್ಮನ್ನೆ ಸುತ್ತುವವರಿಗೆ ಪೆಟ್ರೋಲ್ ಸಿಗಲ್ಲ.ಆಗ ನಿಮಗೇ‌ ಅನಾನುಕೂಲ ಆಗುತ್ತದೆ. ಇದಕ್ಕೆ ಯಾರೂ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿಕೊಂಡರು.

ಮಾರುಕಟ್ಟೆ ಸ್ಥಳ ಬದಲಾವಣೆ ಮಾಡಿದರೂ ಸಮಸ್ಯೆ ಪರಿಹಾರ ಆಗಿಲ್ಲ.  ಹಾಗಾಗಿ ನಗರದ ವಿವಿಧ ಭಾಗಗಳಲ್ಲಿ ಜನರಿಗೆ ನೇರವಾಗಿ ತರಕಾರಿ ತಲುಪಿಸುವ ಕೆಲಸ ಆಗಲಿದೆ. ಈ ಬಗ್ಗೆ ಸಂಜೆ‌ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

coronavirus covid 19 india lockdown mp pratap simha reaction

 

Follow Us:
Download App:
  • android
  • ios