ಬೆಂಗಳೂರು(ಮಾ.27): ಕರ್ನಾಟಕವನ್ನು ಕೊರೋನಾ ವೈರಸ್‌ನಿಂದ ಮುಕ್ತವಾಗಿಸಲು ಸರ್ಕಾರ ಇನ್ನಷ್ಟು ತೀವ್ರಗತಿಯಲ್ಲಿ ಕೆಲಸ ಮಾಡಬೇಕಿದೆ. ಇಷ್ಟೇ ಅಲ್ಲ ಎಲ್ಲಾ ಪಕ್ಷಗಳ ನಾಯಕರ ಸಭೆ ಕರೆದು ಪರಿಸ್ಥಿತಿ ನಿಭಾಯಿಸಲು ಸರ್ಕಾರ ಮುಂದಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರು ಆಗ್ರಹಿಸಿದ್ದಾರೆ. ಲಾಕ್‌ಡೌನ್ ಹೆಸರಲ್ಲಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಅಮಾಯಕರ ಮೇಲೆ ಲಾಠಿ ಚಾರ್ಚ್ ಮಾಡಿರುವುದುನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಡಿಕೆಶಿ ಹೇಳಿದರು.

ಹೊಸದಾಗಿ 7 ಕೇಸ್ ದೃಢ; ಕರ್ನಾಟಕದಲ್ಲಿ 60 ದಾಟಿತು ಕೊರೋನಾ ಸೋಂಕಿತರ ಸಂಖ್ಯೆ!

ಸರ್ಕಾರ ಎಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರೆ ನಾವು ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಕಾರಣ ಜಿಲ್ಲಾಧಿಕಾರಿಗಳಿಗೆ ಇನ್ನೂ ಸರ್ಕಾರದಿಂದ ಹಣ ತಲುಪಿಲ್ಲ. ವೈದ್ಯರು, ಆಸ್ಪತ್ರೆ ಸಿಬ್ಬಂಧಿಗಳು ಕಂಗಲಾಗಿದ್ದಾರೆ. ಇತ್ತ ಕೃಷಿ ಉತ್ಪನ್ನಗಳು ನಾಶ ಆಗುತ್ತಿದೆ. ರೈತರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಡಿಕೆಶಿ ಆಗ್ರಹಿಸಿದ್ದಾರೆ.

ಕೊರೋನಾ ಶಂಕಿತರು ಆತಂಕ ಪಡುವ ಅಗತ್ಯವಿಲ್ಲ; ಇಲ್ಲಿದೆ ಗುಡ್‌ನ್ಯೂಸ್!

ತರಕಾರಿ, ಹಣ್ಣಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಲು ಸರ್ಕಾರ ವ್ಯವಸ್ಥೆ ಮಾಡಬೇಕು ಎಂದರು.  ಇದೇ ವೇಳೆ ಕಾಂಗ್ರೆಸ್‌ನ ಪ್ರತಿ ಶಾಸಕರಿಂದ ತಲಾ 1 ಲಕ್ಷ ರೂಪಾಯಿ ಸಂಗ್ರಹ ಮಾಡಲು ನಿರ್ಧರಿಸಿದ್ದೇವೆ  ಪಕ್ಷದಿಂದ ಹೆಲ್ಪ್ ಲೈನ್ ಆರಂಭಿಸತ್ತೇವೆ. ಸಹಾಯವಾಣಿಗೆ ಬರುವ ಮಾಹಿತಿಯನ್ನು ಸರ್ಕಾರಕ್ಕೆ ರವಾನಿಸಲಿದ್ದೇವೆ. ಈ ಮೂಲಕ ಪಕ್ಷ ಕರ್ನಾಟಕದ ಜನತೆಗೆ ನೆರವಾಗಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.