Asianet Suvarna News Asianet Suvarna News

ಭಾರತ ಲಾಕ್‌ಡೌನ್: ಮನೆಗಳಿಗೆ ಔಷಧಿಗಳನ್ನು ವಿತರಿಸಲು ಮುಂದಾದ ಬಿ ವೈ ವಿಜಯೇಂದ್ರ

ಲಾಕ್‌ಡೌನ್ ಬೆನ್ನಲ್ಲೇ ಅಗತ್ಯ ಔಷ‍ಧಿ ತರಲು ಒದ್ದಾಡುತ್ತಿರುವವರ ನೆರವಿಗೆ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಮುಂದೆ ಬಂದಿದ್ದಾರೆ. ಅಗತ್ಯವಿವವರ ಮನೆಗೆ ಉಚಿತವಾಗಿ ಔಷಧಿ ತಲುಪಿಸುವ ಕೆಲಸಕ್ಕೆ ವಿಜಯೇಂದ್ರ ಕೈಹಾಕಿದ್ದಾರೆ.

BY Vijayendra son of CM BSY Provides free Medicines across Karnataka during India Lockdown
Author
Bengaluru, First Published Apr 3, 2020, 3:13 PM IST

"

ಬೆಂಗಳೂರು(ಏ.03): ಕೊರೋನಾ ವೈರಸ್ ಭೀತಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಹೀಗಾಗಿ ಕೆಲವರು ಔಷಧಿಗಳನ್ನು ತರಲು ಪರದಾಡುತ್ತಿದ್ದಾರೆ. ಹೀಗಿರುವಾಗಲೇ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಆರೋಗ್ಯ ಸಮಸ್ಯೆ ಇರುವ ಬಡವರಿಗೆ ಉಚಿತವಾಗಿ ಔ‍ಷಧಿಗಳನ್ನು ವಿತರಿಸಲು ಮುಂದಾಗಿದ್ದಾರೆ.

BY Vijayendra son of CM BSY Provides free Medicines across Karnataka during India Lockdown

ಹೊರಗೆಲ್ಲೂ ಕಾಣಿಸಕೊಳ್ಳದ ಅಮಿತ್ ಶಾ ತೆರೆಮರೆಯಲ್ಲಿ ಏನ್ಮಾಡ್ತಿದ್ದಾರೆ?

ಹೌದು, ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿರುವ ಹಿರಿಯರು, ವಯಸ್ಕರು ಮತ್ತು ಮಕ್ಕಳು ಹಾಗೂ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರುವ ಬಡವರನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ಔಷಧಿಗಳನ್ನು ಉಚಿತವಾಗಿ ಒದಗಿಸುವ ಕಾರ್ಯಕ್ಕೆ ಬಿ ವೈ ವಿಜಯೇಂದ್ರ ಮುಂದಾಗಿದ್ದಾರೆ. ಈ ಕಾರ್ಯವನ್ನು ಸಾಕಾರಗೊಳಿಸಲು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನಿಯೋಜಕರ ಸಹಾಯದಿಂದ ಪ್ರತಿ ಅಗತ್ಯವಿರುವ ಮನೆಗೆ ಔಷಧ ತಲುಪಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ಈ ಸೌಲಭ್ಯವನ್ನು ಬಳಸಿಕೊಳ್ಳಲು ಬಿ ವೈ ವಿಜಯೇಂದ್ರ ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

BY Vijayendra son of CM BSY Provides free Medicines across Karnataka during India Lockdown

ಈ ಯೋಜನೆಯ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ 7899854857, 9113544199 ನಂಪರ್ಕಿಸಲು ಕೋರಿದೆ. 
 

Follow Us:
Download App:
  • android
  • ios