ಬೆಳಗಾವಿ(ಮಾ.27): ಪೊಲೀಸರು ಚಾಪೆ ಅಡಿ ತೂರಿದರೆ, ಕಳ್ಳ ರಂಗೂಲಿ ಕೆಳಗೆ ತೂರಿದ ಅನ್ನೋ ಗಾದೆ ಮಾತಿದೆ. ಇದೀಗ ಬೆಳಗಾವಿಯಲ್ಲಿ ನಡೆದಿರೋದು ಕೂಡ ಇದೆ. ಕೊರೋನಾ ವೈರಸ್ ಹರದಂತೆ ಸಂಪೂರ್ಣ ಭಾರತವನ್ನೇ ಲಾಕ್‌ಡೌನ್ ಮಾಡಲಾದೆ. ಯಾರೂ ಕೂಡ ಮನೆಯಿಂದ ಹೊರಬರದಂತೆ ಮನವಿ ಮಾಡಲಾಗಿದೆ. ಇಷ್ಟಾದರೂ ಜನರೂ ಒಂದೊಂದು ಕಾರಣಗಳನ್ನು ಹೇಳಿ ಹೊರಬರುತ್ತಿದ್ದಾರೆ. ಪೊಲೀಸರು ಹೊರಬಂದವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಇದೀಗ ಬೆಳಗಾವಿಯಲ್ಲಿ ಬೈಕ್ ಸವಾರ ಲಾಠಿ ಏಟು ತಪ್ಪಿಸಲು ಹೊಸ ಐಡಿಯಾ ಮಾಡಿದ್ದಾನೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಾಕ್‌ಡೌನ್‌ಗೆ ಕ್ಯಾರೇ ಎನ್ನದ ಜನರಿಗೆ ಬಿತ್ತು ಲಾಠಿ ಏಟು!. 

ಅನವಶ್ಯಕವಾಗಿ ರೋಡಿಗಳಿದವರಿಗೆ ಬೆಳಗಾವಿ ಪೊಲೀಸರು ಲಾಠಿ ಬೀಸಿದ್ದಾರೆ. ಇದೇ ದಾರಿಯಲ್ಲಿ ಸಾಗುತ್ತಿದ್ದ ಬೈಕ್ ಸವಾರ ಪೊಲೀಸರು ಲಾಠಿ ಎತ್ತುತ್ತಿದ್ದಂತೆ ನಾಮಫಲಕ ಎತ್ತಿ ಹಿಡಿದು ಮನವಿ ಮಾಡಿದ್ದಾರೆ. ಈ ನಾಮಫಲಕದಲ್ಲಿ ನಾಯಿ ಕಡಿದಿದೆ, ನಾವು ಆಸ್ಫತ್ರೆಗೆ ಹೋಗುತ್ತಿದ್ದೇವೆ. ದಯವಿಟ್ಟು ಬಿಟ್ಟು ಬಿಡಿ, ಬೆಳಗಾವಿ ಎಂದು ಬರೆದಿದ್ದಾನೆ. ಕನ್ನಡದಲ್ಲಿ ಬರೆದಿರುವ ನಾಮಫಲಕವನ್ನು ಬೈಕ್ ಹಿಂಬದಿ ಸವಾರ ಎತ್ತಿ ಹಿಡಿದು ಪೊಲೀಸರಿಗೆ ತೋರಿಸುತ್ತಾ ಮುಂದೆ ಸಾಗಿದ್ದಾನೆ.

BSY ಸಚಿವ ಸಂಪುಟ ಸಭೆ; ಮಹತ್ವದ ನಿರ್ಧಾರ ಪ್ರಕಟಿಸಿದ CM!

ಬೆಳಗಾವಿಯ ಬೋಗಾರವೇಸ್ ಸರ್ಕಲ್‌ನಲ್ಲಿ ಬೈಕ್ ಸವಾರನ ವಿನೂತನ ಬೇಡಿಕೆ ಇದೀಗ ಸಾಮಾದಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖಾನಪುರದ ಬಂದಿರುವ ಈ ವ್ಯಕ್ತಿಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಹೀಗಾಗಿ ಕನ್ನಡದಲ್ಲಿ ನಾಮಫಲಕ ಬರೆಯಿಸಿಕೊಂಡು ಬೆಳಗಾವಿಗೆ ಎಂಟ್ರಿಕೊಟ್ಟಿದ್ದಾನೆ.