ಬಳ್ಳಾರಿ(ಏ.08): ನಗರದ ರಥಬೀದಿಯಲ್ಲಿ ಕಂಡು ಬಂದ ಬಿಹಾರ ಮೂಲದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಸುಮಾರು 28 ವರ್ಷದ ಈತ ಹಿಂದಿಯಲ್ಲಿ ಮಾತನಾಡುತ್ತಿದ್ದು, ಬಿಹಾರ ಮೂಲದವನು ಎಂದು ತಿಳಿದು ಬಂದಿದೆ. ಈತನಿಗೆ ಕೊರೋನಾ ವೈರಸ್‌ ಸೋಂಕು ಇರಬಹುದು ಎಂದು ಸಾರ್ವಜನಿಕರು ಈತ ನಗರದಲ್ಲಿ ಓಡಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 

ಕೊರೋನಾ ಆತಂಕ: ವಾಹನಕ್ಕೆ ಮುಗಿಬಿದ್ದು ಆಹಾರಧಾನ್ಯ ಹೊತ್ತೊಯ್ದ ಜನ!

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈತನನ್ನು ಹೊತ್ತೊಯ್ದು ಮಯೂರ ಹೋಟೆಲ್‌ನ ಹೋಂ ಕ್ವಾರಂಟೈನ್‌ಗೆ ಇರಿಸಿದ್ದಾರೆ. ಸರಿಯಾದ ಮಾಹಿತಿ ನೀಡದ ಈತ ಕಂಡ ಕಂಡಲ್ಲಿ ಉಗಿಯುತ್ತಿದ್ದಾನೆ ಎಂದು ತಿಳಿದು ಬಂದಿದ್ದು, ಇದರಿಂದ ಆರೋಗ್ಯ ಸಿಬ್ಬಂದಿ ಭೀತಿಗೊಂಡಿದ್ದಾರೆ. ಈತನಿಗೆ ಆರೋಗ್ಯ ತಪಾಸಣೆ ಕಾರ್ಯ ನಡೆದಿದೆ.