Asianet Suvarna News Asianet Suvarna News

ನಗರದ ಹೃದಯ ಭಾಗದಲ್ಲಿ ನವಿಲು, ಹೊರಭಾಗದಲ್ಲಿ ಜಿಂಕೆ!

ನಗರದ ಹೃದಯ ಭಾಗದಲ್ಲಿ ನವಿಲು, ಹೊರಭಾಗದಲ್ಲಿ ಜಿಂಕೆ!| ಮಲ್ಲೇಶ್ವರ ಹಾಗೂ ಜಯನಗರದಲ್ಲಿ ನವಿಲುಗಳು ಓಡಾಟ

Bengaluru  Lockdown effect peacock wonder in the city
Author
Bangalore, First Published Mar 30, 2020, 9:31 AM IST

ಬೆಂಗಳೂರು(ಮಾ.30): ವರ್ಷದ 365 ದಿನವೂ ವಾಹನಗಳು ಮತ್ತು ಜನದಟ್ಟಣೆಯಿಂದ ಕೂಡಿರುತ್ತಿದ್ದ ಬೆಂಗಳೂರಿನ ಪ್ರಮುಖ ರಸ್ತೆಗಳು ಕಳೆದ ಒಂದು ವಾರದಿಂದ ವಾಹನಗಳ ಸಂಚಾರವಿಲ್ಲದಂತಾಗಿದೆ. ಪರಿಣಾಮ ವಾಯು ಮತ್ತು ಶಬ್ದಮಾಲಿನ್ಯ ಪ್ರಮಾಣ ಸಂಪೂರ್ಣ ಕುಸಿದ್ದಿದ್ದು, ನಗರದ ಹೊರ ಭಾಗದಲ್ಲಿದ್ದ ನವಿಲುಗಳು ನಗರ ಪ್ರವೇಶಿಸಿವೆ.

ಸಾಕು ಪ್ರಾಣಿಗಳಿಂದ ಕೊರೋನಾ ಹರಡಲ್ಲ, ಬೀದಿಗೆ ಬಿಡಬೇಡಿ ಎಂದರೂ ಜನ ಕೇಳುತ್ತಿಲ್ಲ!

ಕೊರೋನಾ ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್‌ ಮಾಡಿರುವುದರಿಂದ ನಗರದಲ್ಲಿನ ಜನ ಕಡಿಮೆಯಾಗಿದ್ದು, ತಮ್ಮ ಸ್ವಂತ ಊರುಗಳಿಗೆ ಹೋಗಿದ್ದಾರೆ. ಜೊತೆಗೆ, ಇಲ್ಲಿಯ ಜನರೂ ಸಹಾ ಮನೆಗಳಿಂದ ಹೊರ ಬರುವುದಕ್ಕೆ ಮುಂದಾಗುತ್ತಿಲ್ಲ. ಇದರಿಂದ ನಗರದ ಪ್ರಮುಖ ಬೀದಿಗಳಲ್ಲಿ ನವಿಲುಗಳು ನಡೆದಾಡಲು ಶುರುವಾಗಿವೆ.

ಬೆಂಗಳೂರಿನ ಹೃದಯ ಭಾಗವಾಗಿರುವ ಮಲ್ಲೇಶ್ವರ ಹಾಗೂ ಜಯನಗರದಲ್ಲಿ ನವಿಲುಗಳು ಓಡಾಡುತ್ತಿರುವ ದೃಶ್ಯಗಳು ಸಾರ್ವಜನಿಕರಿಗೆ ಸಿಕ್ಕಿವೆ. ಕೆಂಗೇರಿ ಬಳಿಯ ತುರಹಳ್ಳಿ ಅರಣ್ಯ ಪ್ರದೇಶದಿಂದ ಜಿಂಕೆಗಳು ನಗರ ಪ್ರದೇಶಕ್ಕೆ ಬರುತ್ತಿದ್ದು, ಈ ಭಾಗದ ಜನ ಮರೆಯಲ್ಲಿ ಕುಳಿತು ಅವುಗಳ ಫೋಟೋ ತೆಗೆಯುತ್ತಿದ್ದಾರೆ.

ಕಣ್ಣಿಗೆ ಕಾಣ ಸಿಗದಿದ್ದ ಪ್ರಾಣಿಗಳೆಲ್ಲ ಹಾಜರ್..! ಮೌನಗೊಳಿಸುತ್ತೆ ಮುಗ್ಧ ಪ್ರಾಣಿಗಳ ಚಿತ್ರ

Follow Us:
Download App:
  • android
  • ios