ಕೊಪ್ಪಳ(ಮಾ.28): ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಒಂದೇ ಒಂದೇ ಪ್ರಕರಣ ಪತ್ತೆಯಾಗಿಲ್ಲ ಎನ್ನುವುದರ ಜೊತೆಗೆ ಜಿಲ್ಲೆಯಲ್ಲಿ ನಿಗಾ ಇಟ್ಟವರ ಸಂಖ್ಯೆಯೂ ಯಥಾಸ್ಥಿತಿಯಲ್ಲಿದೆ ಎನ್ನುವುದೇ ಜಿಲ್ಲೆಯ ಮಟ್ಟಿಗೆ ನಿರಾಳ ವಿಚಾರ.
ಗುರುವಾರ ಇದ್ದ ಸಂಖ್ಯೆಯೇ ಶುಕ್ರವಾರವೂ ಇದ್ದು, ಕೇವಲ 68 ಜನರ ಮೇಲೆ ನಿಗಾ ಇಡಲಾಗಿದೆ. ಇನ್ನು ಉಳಿದಂತೆ ಇದುವರೆಗೂ ನಿಗಾ ಇಟ್ಟವರಲ್ಲಿ ಯಾರಿಗೂ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಹೀಗಾಗಿ, ಅವರ ಗಂಟಲು ಮಾದರಿಯನ್ನು ತಪಾಸಣೆಗೆ ಕಳುಹಿಸುವ ಪ್ರಶ್ನೆ ಬಂದಿಲ್ಲ.

ಲಗ್ಗೆ ಇಡುತ್ತಿರುವ ಜನ:

ಈ ನಡುವೆ ನಾನಾ ಜಿಲ್ಲೆಯಲ್ಲಿ ಕೆಲಸಕ್ಕೆಂದು ಹೋದವರು ಮತ್ತು ನೌಕರಿಗಾಗಿ ಹೋದವರು ಈಗ ಜಿಲ್ಲೆಗೆ ಆಗಮಿಸಿ, ಕದ್ದುಮುಚ್ಚಿ ತಮ್ಮೂರು ಸೇರಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಹುತೇಕರು ತಪಾಸಣೆಗೆ ಒಳಗಾಗದೆಯೇ ನುಸುಳಿಕೊಳ್ಳುತ್ತಿರುವುದು ಆತಂಕವನ್ನುಂಟುಮಾಡಿದೆ.

ಕೊರೋನಾ ನೆಗೆಟಿವ್‌ ಬಂದಿದ್ದ ವೃದ್ಧೆ ಸಾವು

ಇಲ್ಲ ಕಟ್ಟುಪಾಡು:

ಇತರೆ ಜಿಲ್ಲೆಗೆ ಹೋಲಿಕೆ ಮಾಡಿದರೇ ಕೊಪ್ಪಳ ಜಿಲ್ಲಾದ್ಯಂತ ಪೊಲೀಸ್‌ ಇಲಾಖೆಯ ಕಟ್ಟುಪಾಡು ಅಷ್ಟಾಗಿ ಕಾಣುತ್ತಿಲ್ಲ. ಅನೇಕ ಮಸೀದಿಗಳಲ್ಲಿ ನಮಾಜ್‌ ಮಾಡುತ್ತಲೇ ಇದ್ದಾರೆ ಮತ್ತು ಮಾರುಕಟ್ಟೆಗೂ ಜನರು ಯಾವುದೇ ಅಂಜಿಕೆ ಇಲ್ಲದೆ ಹೋಗುತ್ತಿದ್ದಾರೆ. ಕೇವಲ ಪ್ರಮುಖ ರಸ್ತೆಗಳಲ್ಲಿ ಮಾತ್ರ ಬಿಗಿಬಂದೋಬಸ್‌್ತ ಇದ್ದರೆ ಬಡಾವಣೆಗಳಲ್ಲಿ ಯಾವುದೇ ನಿರ್ಬಂಧ ಇಲ್ಲದೆ ಜನರು ಓಡಾಡುತ್ತಿದ್ದಾರೆ.

ಸುತ್ತಾಡಿದ ಕ್ವಾರಂಟೈನ್‌ಗಳು:

ಕೇರಳದಿಂದ ಬಂದಿರುವ ಇಬ್ಬರು ಬೆಳೂರು ಗ್ರಾಮದ ನಿವಾಸದಲ್ಲಿ ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ. ಆದರೆ, ಇವರು ಗ್ರಾಮ ಸೇರಿದಂತೆ ಸುತ್ತಮುತ್ತಲ ಹೊಲಗಳಿಗೂ ಸುತ್ತಾಡಿ, ಅವರಿವರ ಜೊತೆ ಬೆರೆಯುತ್ತಿದ್ದಾರೆ. ಕೈಗೆ ಸೀಲ್‌ ಹಾಕಿರುವುದರಿಂದ ಜನರೇ ಇವರಿಂದ ದೂರು ಹೋಗುತ್ತಿದ್ದಾರೆ. ಈ ಬಗ್ಗೆ ತುರ್ತು ಕ್ರಮಕೈಗೊಳ್ಳುವ ಅಗತ್ಯವಿದೆ.

ಗುಡ್‌ ನ್ಯೂಸ್: ಬೆಂಗಳೂರು ವಿಜ್ಞಾನಿಗಳಿಂದ ಕೊರೋನಾ ನಿಷ್ಕ್ರಿಯ ಯಂತ್ರ!

ಡಿಸಿ ತಪಾಸಣೆ:

ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ಅವರು ಶುಕ್ರವಾರ ಚಕ್‌ಪೋಸ್ಟ್‌ಗಳಿಗೆ ಖುದ್ದು ಭೇಟಿ ನೀಡಿ, ತಪಾಸಣೆ ನಡೆಸಿದರು. ವಾಹನಗಳ ಓಡಾಟದ ಮೇಲೆ ನಿಗಾ ಇಟ್ಟಿರುವುದನ್ನು ತಪಾಸಣೆಗೆ ಒಳಪಡಿಸಿದರು.

ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ:

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರು ಕೊರೋನಾ ಜಾಗೃತಿ ಕುರಿತು ಸಭೆ ನಡೆಸಿದರು. ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು. ನಿಗಾ ಇಟ್ಟವರ ಮೇಲೆ ವಿಶೇಷ ಎಚ್ಚರಿಕೆಯನ್ನು ವಹಿಸಬೇಕು. ಜನರಿಗೆ ತೊಂದರೆಯಾಗದಂತೆ ನಾನಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಖಡಕ್‌ ಆಗಿದೆಯೇ ಆದೇಶ ಮಾಡಿದರು.