Asianet Suvarna News Asianet Suvarna News

ಮಂಡ್ಯ: ದೆಹಲಿಗೆ ಹೋಗಿ ಬಂದ ಮೂವರಿಗೆ ಕೊರೋನಾ, ಮತ್ತಷ್ಟು ಹೆಚ್ಚಾಗುವ ಭೀತಿ

ಕೊರೋನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರೇ ಇಡೀ ದೇಶವನ್ನು ಲಾಕ್‌ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. ಆದ್ರೆ, ಮೊನ್ನೇ ಮಂಡ್ಯದಲ್ಲಿ ಲಾಕ್‌ಡೌನ್ ಸಡಿಲ ಮಾಡದ ಬೆನ್ನಲ್ಲೇ ಇದೀಗ ಮೂರು ಕೊರೋನಾ ಕೇಸ್‌ಗಳು ಪತ್ತೆಯಾಗಿವೆ.

3 coronavirus oronavirus positive cases in mandya
Author
Bengaluru, First Published Apr 7, 2020, 5:53 PM IST

ಮಂಡ್ಯ, (ಏ.07): ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿಯೇ ಮೂವರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢವಾಗಿದೆ.

ಮಂಡ್ಯದಲ್ಲಿ ಲಾಕ್‌ಡೌನ್ ಮಧ್ಯೆಯೇ ಸಲೂನ್ ಹಾಗೂ ಬೇಕರಿ ತೆರೆಯುವುದಕ್ಕೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿತ್ತು. ಇದರ ಬೆನ್ನಲ್ಲೇ 3 ಕೊರೋನಾ ಕೇಸ್ ಪತ್ತೆಯಾಗಿರುವುದು ವಿಪರ್ಯಾಸ.

ಮಂಡ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ, ಅಪಾಯ ಆಹ್ವಾನಿಸ್ತಿದ್ದಾರಾ ಡಿಸಿ..?

7 ಜನರು ದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದಿದ್ದ ಸಭೆಗೆ ಹೋಗಿಬಂದಿದ್ದರು. ಈ ಹಿನ್ನೆಲೆಯಲ್ಲಿ ಏಳು ಜನರ ಗಂಟಲು ಧ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಮೂವರಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್ನಾದರೂ ಮಂಡ್ಯ ಜಿಲ್ಲಾಡಳಿತ ಲಾಕ್‌ಡೌನ್‌ ಅನ್ನು ಮತ್ತಷ್ಟು ಬಿಗಿಗೊಳಿಸಬೇಕು.

ಸೋಂಕಿತರ ಟ್ರಾವೆಲ್ ಹಿಸ್ಟರಿ

* 7ಜನ ತಬ್ಲಿಘಿಗಳು ಮೂಲತಃ ಮಳವಳ್ಳಿಯವರು ಫೆ.4ರಂದು ದೆಹಲಿಯ ನಿಜಾಮುದ್ದೀನ್‌ಗೆ ತೆರಳಿದ್ದರು. ಅಲ್ಲಿ ಫೆ.13ರವರೆಗೂ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು..

ದೆಹಲಿಯಿಂದ ಕೊರೋನಾ ನಂಜು: ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ಏರಿಕೆಯಾಯ್ತು ಮತ್ತಷ್ಟು

* ಫೆ.14ರಂದು ದೆಹಲಿಯಿಂದ ಯಶವಂತಪುರ ರೆಲ್ವೆ ಸ್ಟೇಷನ್‌ಗೆ ಮದ್ಯ ರಾತ್ರಿ 1ಕ್ಕೆ ಬಂದಿರುತ್ತಾರೆ. ಲೋಕಲ್ ಟ್ಯಾಕ್ಸಿ ಮೂಲಕ ಮದ್ಯ ರಾತ್ರಿ 2ಗಂಟೆಗೆ ಸ್ಯಾಟಲೈಟ್ ಬಸ್ ಸ್ಟ್ಯಾಂಡ್‌ಗೆ ಬಂದಿದ್ದಾರು

* ಬೆಳಗಿನಜಾವ 3ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಮದ್ದೂರು ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದರು. ಮದ್ದೂರಿನಿಂದ ಮಳವಳ್ಳಿಗೆ ಮಾರುತಿ 800 ಕಾರಿನಲ್ಲಿ ಬೆಳಿಗನ ಜಾವ 4ಗಂಟೆಗೆ ಬಂದಿದ್ದಾರೆ.

* ಫೆ.15ರಿಂದ ಫೆ.28ನೇ ತಾರೀಖಿನ ವರೆಗೆ ಕರ್ಫ್ಯೂ ಇದ್ದಿದ್ರಿಂದ ಮಳವಳ್ಳಿಯಲ್ಲೆ ಉಳಿದುಕೊಂಡಿದ್ರು

* ಮಾ.23ರಿಂದ 30ನೇ ತಾರೀಖಿನವರೆಗೂ ಸೋಂಕಿತ ಧರ್ಮಗುರುಗಳ ಸಂಪರ್ಕದಲ್ಲಿ ಈ ಏಳು ಜನರು ಇದ್ದರು. ದೆಹಲಿ ಮೂಲದ ಧರ್ಮಗುರುಗಳಿಗೆ ಪಾಸಿಟಿವ್ ಬಂದ ಹಿನ್ನಲೆ ಜಿಲ್ಲಾಡಳಿತ ಇವರನ್ನು ಗುರುತಿಸಿ ಐಸೋಲೇಷನ್‌ನಲ್ಲಿಟ್ಟಿತ್ತು. 

* ಮಾರ್ಚ್ 28ರಂದು ಬನ್ನೂರಿಗೆ ಭೇಟಿ ಕೊಟ್ಟಿದ್ದಾರೆ( ಮಟನ್ ಖರೀದಿ ಮಾಡಲು ಹೋಗಿದ್ದಾರೆಂಬ ಮಾಹಿತಿ)

"

Follow Us:
Download App:
  • android
  • ios